ರಜನಿಕಾಂತ್, ಮೋಹನ್ಲಾಲ್, ರವಿಚಂದ್ರನ್ ಮೊದಲಾದ ಕಲಾವಿದರ ಜೊತೆ ನಟಿಸಿದ ಭಾನುಪ್ರಿಯಾ ಅವರಿಗೆ ಈಗ 58 ವರ್ಷ ವಯಸ್ಸು. ಅವರಿಗೆ ಈ ವಯಸ್ಸಿನಲ್ಲಿ ಮರೆವಿನ ಕಾಯಿಲೆ ಶುರುವಾಗಿದೆ. ಇದರಿಂದ ಅವರು ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ನಟಿ ತನ್ನ ಸಹೋದರರ ಜೊತೆ ಚೆನ್ನೈನಲ್ಲಿ ವಾಸವಾಗಿದ್ದಾರೆ. 2018ರಲ್ಲಿ ಅವರ ಪತಿ ನಿಧನ ಹೊಂದಿದ್ದರು. ಇದಾದ ಬಳಿಕ ಅವರ ಬದುಕು ಬದಲಾಯಿತು.
ಆದರ್ಶ್ ಕೌಶಲ್ ಅವರನ್ನು 1998ರಲ್ಲಿ ಭಾನುಪ್ರಿಯಾ ವಿವಾಹ ಆದರು. ಮದುವೆ ಬಳಿಕವೂ ಇವರು ಸಿನಿಮಾಗಳಲ್ಲಿ ನಟಿಸೋದನ್ನು ಮುಂದುವರಿಸಿದರು. 2018ರಲ್ಲಿ ಭಾನುಪ್ರಿಯಾ ಬಾಳಲ್ಲಿ ಒಂದು ದುರ್ಘಟನೆ ನಡೆಯಿತು. ಅವರು ಪತಿಯನ್ನು ಕಳೆದುಕೊಂಡರು. ಹೃದಯಘಾತದಿಂದ ಆದರ್ಶ್ ಮೃತಪಟ್ಟರು.ಆ ಬಳಿಕ ಅವರ ಜೀವನ ಬದಲಾಯಿತು.
‘ನಾನು ಮಾಡಬೇಕಾದ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಶೂಟಿಂಗ್ ವೇಳೆ ನಾನು ಹೇಳಬೇಕಾದ ಡೈಲಾಗ್ನ ಮರೆಯುತ್ತಿದ್ದೆ. ಇದು ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದೆ’ ಎಂದು ಈ ಮೊದಲು ಭಾನುಪ್ರಿಯಾ ಹೇಳಿದ್ದರು.
‘ನನ್ನ ಗಂಡ ಮತ್ತು ನಾನು ವಿಚ್ಛೇದನ ಪಡೆದಿರಲಿಲ್ಲ. ಇದರ ಬಗ್ಗೆ ಹಲವಾರು ವದಂತಿಗಳಿವೆ. ಆದರೆ ಆ ವ್ಯಕ್ತಿ ಈಗ ಇಲ್ಲ. ಅದರ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ’ ಎಂದಿದ್ದರು ಅವರು.
‘ಇತ್ತೀಚಿನ ದಿನಗಳಲ್ಲಿ ನನಗೆ ಆರೋಗ್ಯ ಸರಿ ಇಲ್ಲ.ನನಗೆ ನೆನಪು ಮರೆಯುತ್ತಿದೆ. ನಾನು ಕಲಿತ ವಿಷಯಗಳನ್ನು ನಾನು ಮರೆಯುತ್ತಿದ್ದೇನೆ. ನನಗೆ ಈಗ ನೃತ್ಯದಲ್ಲಿ ಆಸಕ್ತಿ ಇಲ್ಲ. ನಾನು ಮನೆಯಲ್ಲಿಯೂ ನೃತ್ಯವನ್ನು ಅಭ್ಯಾಸ ಮಾಡುವುದಿಲ್ಲ’ ಎಂದಿದ್ದರು. ಅವರು ಕೂಚಿಪುಡಿ ನೃತ್ಯ ಕಲಿತಿದ್ದಾರೆ.
ಭಾನುಪ್ರಿಯಾ ಅವರು 1983ರಲ್ಲಿ ರಿಲೀಸ್ ಆದ ತಮಿಳಿನ ‘ಮೆಲ್ಲ ಪೇಸುಂಗಳ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ರವಿಚಂದ್ರನ್ ನಟನೆಯ ‘ರಸಿಕ’ ಸಿನಿಮಾದಲ್ಲಿ ಭಾನುಪ್ರಿಯಾ ನಟಿಸಿದ್ದರು. ಇನ್ನೂ ಹಲವು ಕನ್ನಡ ಚಿತ್ರದಲ್ಲಿ ಭಾನುಪ್ರಿಯಾ ಅಭಿನಯಿಸಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಕೆಲಸಗಳಲ್ಲಿ ಆ್ಯಕ್ಟೀವ್ ಆಗಿಲ್ಲ.
For More Updates Join our WhatsApp Group :




