ಹಣಕ್ಕಾಗಿ ಬ್ಲ್ಯಾಕ್ ಮೇಲ್ : ಟಿವಿ ಚಾನೆಲ್ ಸಿಇಒ ಬಂಧನ

ಬೆಂಗಳೂರು: ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ಪ್ರಸಿದ್ಧ ಸ್ಪಾವೊಂದರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಥಳೀಯ ಸುದ್ದಿ ವಾಹಿನಿಯ 52 ವರ್ಷದ ಸಿಇಒ ನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಪಾ ವ್ಯವಸ್ಥಾಪಕರಾದ ಎಚ್.ಶಿವಶಂಕರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜಾನುಕುಂಟೆ ನಿವಾಸಿ ಆರೋಪಿ ಬಿಇಒ ಆರ್.ವೆಂಕಟೇಶ್ ಎಂಬಾತನನ್ನು ಜೀವನ್ ಬಿಮಾ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಪೊಲೀಸರು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡರು. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜೂನ್ 21 ರಂದು, ಈಶಾನ್ಯ ರಾಜ್ಯದ ಮಹಿಳೆಯೊಬ್ಬರು ಕೆಲಸ ಕೋರಿ ಸ್ಪಾವನ್ನು ಸಂಪರ್ಕಿಸಿದ್ದಾರೆ. ಆಕೆಯನ್ನು 10 ದಿನಗಳ ಕಾಲ ಕೆಲಸಕ್ಕಾಗಿ ನೇಮಿಸಲಾಯಿತು. ಜೂನ್ 26 ರಂದು, ಸಂದೇಶ್ ಎಂಬ ವ್ಯಕ್ತಿಯೊಬ್ಬರು ಮಸಾಜ್ ಗಾಗಿ ಸ್ಲಾಟ್ ಬುಕ್ ಮಾಡಿದ್ದರು ಎಂದು ವರದಿಯಾಗಿದೆ. ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಆಕೆಯನ್ನು ಮಸಾಜ್ ಮಾಡಲು ನಿಯೋಜಿಸಲಾಗಿತ್ತು. 90 ನಿಮಿಷಗಳ ಮಸಾಜ್ ನಂತರ ಸಂದೇಶ್ ಗೆ 7,500 ರೂ. ಪಾವತಿಸಲು ತಿಳಿಸಲಾಯಿತು.

ಅದಾದ ನಂತರ ಮಸಾಜ್ ಮಾಡಿದ್ದ ಮಹಿಳೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು ಮತ್ತು ತನ್ನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಮಾಡಿದ್ದಳು. ಮರುದಿನ, ಚಾನೆಲ್‌ನ ಮೈಕ್ ಹಿಡಿದಿದ್ದ ಯುವತಿ ಸೇರಿದಂತೆ ಮೂವರು ಸ್ಪಾಗೆ ಪ್ರವೇಶಿಸಿ ಮಾಲೀಕರು ಅಥವಾ ವ್ಯವಸ್ಥಾಪಕರ ಬಗ್ಗೆ ವಿಚಾರಿಸಿದ್ದಾರೆ. ದೂರುದಾರರು ತಮ್ಮನ್ನು ಮ್ಯಾನೇಜರ್ ಎಂದು ಪರಿಚಯಿಸಿಕೊಂಡಾಗ, ಅವರು ತಮ್ಮ ಸಿಇಒ ಅವರೊಂದಿಗೆ ಮಾತನಾಡಲು ಫೋನ್ ನೀಡಿದ್ದಾಳೆ.

ನಂತರ ಟಿವಿ ಚಾನೆಲ್ ಸಿಇಒ ಮತ್ತು ಮಸಾಜ್ ಮಾಡಿದ್ದ ಮಹಿಳೆಯ ವೀಡಿಯೊವನ್ನು ಕಳುಹಿಸಿದ್ದಾರೆ, ಸ್ಪಾ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ 15 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ.

ಹಣ ನೀಡಲು ನಿರಾಕರಿಸಿದ ಸ್ಪಾ ಮ್ಯಾನೇಜರ್ ಸೋಮವಾರ ದೂರು ದಾಖಲಿಸಿದ್ದಾರೆ. ದೂರಿನ ನಂತರ ಚಾನೆಲ್ ನ ಸಿಇಒ ಅವರನ್ನು ಬಂಧಿಸಲಾಗಿದೆ ಎಂದು ತನಿಖೆಯ ಭಾಗವಾಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Leave a Reply

Your email address will not be published. Required fields are marked *