10 ವರ್ಷದ ದ್ವೇಷಕ್ಕೆ ರಕ್ತಪಾತ.

10 ವರ್ಷದ ದ್ವೇಷಕ್ಕೆ ರಕ್ತಪಾತ.

ತಾಯಿಯೊಂದಿಗೆ ಓಡಿ ಹೋದವನನ್ನು ಕೊಂದ ಪುತ್ರ.

ಬೆಳಗಾವಿ: ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ 10 ವರ್ಷಗಳ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದಿದೆ. ಈರಯ್ಯ ಮಠಪತಿ ಎನ್ನುವಾತ ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಎನ್ನುವಾತನನ್ನು ಕೊಚ್ಚಿ ಕೊಂದಿದ್ದಾನೆ. ಬಳಿಕ ಹಂತಕ ಈರಯ್ಯ ಮಠಪತಿ, ಶವದ ಮೇಲೆ ನಿಂತು ವಿಕೃತಿ ಮೆರೆದಿದ್ದು, ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದನ್ನು ಹೇಳಿ ಶರಣಾಗಿದ್ದಾನೆ.

ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತಿದ್ದ. ಹಂತಕ ಈರಯ್ಯನ ತಾಯಿಯೊಂದಿಗೆ ಬಸಪ್ಪ ಅನೈತಿಕ ಸಂಬಂಧ ಹೊಂದಿದ್ದು, 10 ವರ್ಷದ ಹಿಂದೆ ಇಬ್ಬರು ಮನೆಬಿಟ್ಟು ಓಡಿಹೋಗಿದ್ದರು. ಇದರಿಂದ ಕೆರಳಿದ್ದ ಈರಯ್ಯ, ಹತ್ತು ವರ್ಷದ ಬಳಿಕ ಮತ್ತೆ ಗ್ರಾಮಕ್ಕೆ ಬಂದಿದ್ದ ಬಸಪ್ಪನನ್ನು ಮಚ್ಚಿನಿಂದ ಮನಸೋ ಇಚ್ಛೆ ದಾಳಿ ಮಾಡಿದ್ದಾನೆ. ಇನ್ನು ಕೊಲೆಯಾದ ಬಸ್ಸಪ್ಪನ ಪುತ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *