ಕೇವಲ 13 ನಿಮಿಷದಲ್ಲಿ 124 ಲೀಟರ್ ಡೀಸೆಲ್ ಕದ್ದ ಕಳ್ಳರು ಪರಾರಿ.
ಬೆಂಗಳೂರು : ಅಪರಿಚಿತ ವ್ಯಕ್ತಿಗಳಿಬ್ಬರು ರಾಂಪುರ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮ ಬಸ್‌ನಿಂದ 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 120 ಲೀಟರ್‌ಗೂ ಹೆಚ್ಚು ಡೀಸೆಲ್ ಕದ್ದು ಪರಾರಿಯಾದ ಘಟನೆ ಕಳೆದ ವಾರ ನಡೆದಿದೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಿನ ಜಾವ ತಮ್ಮ ಕೈಚಳಕ ತೋರಿಸಿದ ಕಳ್ಳರು
ಬಿಎಂಟಿಸಿಯ ಮಂಡೂರು 47ನೇ ಡಿಪೋದ ಈ ಬಸ್ ಅನ್ನು ಡಿಸೆಂಬರ್ 1 ರಂದು ರಾಂಪುರ-ಕೆಆರ್ ಮಾರುಕಟ್ಟೆ ಮಾರ್ಗದಿಂದ ಬಂದ ನಂತರ ರಾತ್ರಿ 11 ಗಂಟೆಗೆ ಪೆಟ್ರೋಲ್ ಬಂಕ್ ಆವರಣದಲ್ಲಿ ನಿಲ್ಲಿಸಲಾಗಿತ್ತು. ದಿನದ ಕೊನೆಯ ಟ್ರಿಪ್ ಪೂರೈಸಿದ್ದ ಚಾಲಕ ಶಿವಪ್ಪ ಎಂಎಸ್ (36) ಮತ್ತು ಕಂಡಕ್ಟರ್ ಮಂಜುನಾಥ್ ಬಿಸಿ ಬಸ್ ಒಳಗೇ ನಿದ್ರಿಸುತ್ತಿದ್ದರು. ಡಿಸೆಂಬರ್ 2 ರ ಬೆಳಗಿನ ಜಾವ 2:30 ರ ಸುಮಾರಿಗೆ ಟಾಟಾ ಇಂಡಿಕಾ ಕಾರು ಪೆಟ್ರೋಲ್ ಬಂಕ್ ಆವರಣಕ್ಕೆ ಬಂದಿದ್ದು, ಅಲ್ಲಿನ ಸಿಬ್ಬಂದಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಇಬ್ಬರಲ್ಲಿ ಒಬ್ಬರು ಬಸ್ನ ಬಳಿ ಬಂದು ಇಣುಕಿ ನೋಡಿದಾಗ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ನಿದ್ರೆಗೆ ಜಾರಿರುವುದನ್ನು ಕಂಡಿದ್ದ. ಇದನ್ನರಿತ ಇಬ್ಬರೂ ಖದೀಮರು ಕೇವಲ 13 ನಿಮಿಷಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
For More Updates Join our WhatsApp Group :




