“ಸಂವಿಧಾನ, ಜನರ ಭಾವನೆಗಳಿಗೆ ವಿರುದ್ಧ ನಡೆ”.
ಮಂಡ್ಯ: ಪ್ರಜಾಪ್ರಭುತ್ವದಲ್ಲಿ ಜನರ ಆಸೆಯೆ ಅಂತಿಮ ಅವರ ಆಶಯದಂತೆಯೇ ಸರ್ಕಾರ ನಡೆದುಕೊಳ್ಳಬೇಕು. ಇಲ್ಲಿ ಜನರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇದು ಖಂಡನೀಯ. ಜನರ ಒಪ್ಪಿಗೆ ಇಲ್ಲದೆ ಗ್ರಾಮ ಪಂಚಾಯತಿಯನ್ನು ನಗರ ಸಭೆಗೆ ಸೇರಿಸುವುದು ಸಂವಿಧಾನ ವಿರುದ್ದ, ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಸರ್ಕಾರ ಸಂವಿಧಾನ ವಿರುದ್ಧ ಮತ್ತು ಜನರ ಭಾವನೆಗಳ ವಿರುದ್ಧವೂ ನಡೆದುಕೊಳ್ಳುತ್ತಿದೆ. ನಿಮ್ಮ ಹೋರಾಟಕ್ಕೆ ನಮ್ಮ ಸಹಕಾರ ಬೆಂಬಲ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಮಂಡ್ಯ ಜಿಲ್ಲೆಯ ಗೆದ್ದಲಗೆರೆ ಗ್ರಾಮ ಪಂಚಾಯತಿ ಯನ್ನು ಮದ್ದೂರು ನಗರಸಭೆಗೆ ಸೇರಿಸುವುದನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.ನಿಮ್ಮ ಹುರುಪನ್ನು ನೋಡಿ ಒಂದು ತೀರ್ಮಾನ ಮಾಡಿ. ಗ್ರಾಮ ಪಂಚಾಯತಿ ಮುಂದುವರೆಯಬೇಕು ಗ್ರಾಮ ಪಂಚಾಯತಿ ಚಟುವಟಿಕೆ ಮುಂದುವರೆಯಬೇಕು. ಅಂದಾಗ ಮಾತ್ರ ನಗರೀಕರಣ ಕರಿ ಛಾಯೆ ನಿಮ್ಮ ಮೇಲೆ ಬೀಳುವುದಿಲ್ಲ. ಗ್ರಾಮ ಪಂಚಾಯತಿ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕು. ಸತ್ಯಾಗ್ರಹ ಮಾಡುತ್ತಿರುವುದು ಸಾರ್ವಜನಿಕವಾಗಿ ಆಡಳಿತಾತ್ಮಕವಾಗಿ ನಿಮ್ಮ ವಿರೋಧ ಇದೆ ಅನ್ನುವುದನ್ನು ತೋರಿಸಬೇಕು ಎಂದು ಹೇಳಿದರು.
ನಾನು ಸಿಎಂ ಎರಡು ಗಂಟೆಯಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡುವ ತೀರ್ಮಾಣ ಮಾಡಿದೆ. ನಮ್ಮ ದೇಶದಲ್ಲಿ ಕೃಷಿ ಬೆಳದಿದೆ ರೈತ ಎಲ್ಲಿದ್ದಾನೆ ಅಲ್ಲಿಯೇ ಇದ್ದಾನೆ. ಸ್ವಾತಂತ್ರ ಬಂದಾಗ 33 ಕೋಟಿ ಜನಸಂಖ್ಯೆ ಇತ್ತು ಆಹಾರ ಇರಲಿಲ್ಲ. ಈಗ 130 ಕೋಟಿ ಜನಸಂಖ್ಯೆ ಇದ್ದರು ಎಲ್ಲಿರಿಗೂ ಆಹಾರ ಸಿಗುತ್ತಿದೆ. ಕರ್ನಾಟಕದಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತಿರುವುದು ಸುನಂದ ಜಯರಾಂ ಅವರು ನಿಮ್ಮ ಹೋರಾಟಕ್ಕೆ ನಮ್ಮ ಸಹಾಯ ಸಹಕಾರ ಇರುತ್ತದೆ ಎಂದು ಹೇಳಿದರು.
For More Updates Join our WhatsApp Group :




