ಆಪರೇಷನ್ ಸಿಂಧೂರ್​​ನಲ್ಲಿ ಬ್ರಹ್ಮೋಸ್ ಪ್ರಮುಖ ಆಕ್ರಮಣಕಾರಿ ಅಸ್ತ್ರವಾಗಿತ್ತು: Sameer Kamat.

ಆಪರೇಷನ್ ಸಿಂಧೂರ್​​ನಲ್ಲಿ ಬ್ರಹ್ಮೋಸ್ ಪ್ರಮುಖ ಆಕ್ರಮಣಕಾರಿ ಅಸ್ತ್ರವಾಗಿತ್ತು: Sameer Kamat.

ನವದೆಹಲಿ: ಭಾರತದ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಯು ಆಪರೇಷನ್ ಸಿಂಧೂರ್‌ ನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಸಮೀರ್ ವಿ. ಕಾಮತ್ ಹೇಳಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು.

ಆಪರೇಷನ್ ಸಿಂಧೂರ್ ಮೂಲಕ ಭಾರತವು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ನಾಶಪಡಿಸಿದ್ದಷ್ಟೇ ಅಲ್ಲದೆ ತನ್ನ ಸ್ಥಳೀಯ ತಂತ್ರಜ್ಞಾನದ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಭಾರತ ತೋರಿಸಿಕೊಟ್ಟಿದೆ ಎಂದಿದ್ದಾರೆ.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮುಖ್ಯಸ್ಥ ಸಮೀರ್ ಕಾಮತ್ ಸಮೀರ್, ಭಾರತವು ತನ್ನ ಸ್ಥಳೀಯ ತಂತ್ರಜ್ಞಾನದಿಂದ ತನ್ನ ಗಡಿಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಸಂದೇಶವೂ ಆಗಿತ್ತು ಎಂದರು.

ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಹೇಳಿದ ಕೆಲವು ಗಂಟೆಗಳ ನಂತರ ಅವರ ಹೇಳಿಕೆ ಹೊರಬಿದ್ದಿದೆ. ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ಆಕ್ರಮಣಕಾರಿ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ, ಬ್ರಹ್ಮೋಸ್ ಅವುಗಳಲ್ಲಿ ಪ್ರಮುಖವಾದ ಅಸ್ತ್ರವಾಗಿತ್ತು. ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ನಿರ್ದಿಷ್ಟವಾಗಿ ನಮ್ಮ ಸುಖೋಯ್ -30 ಎಂಕೆಐ ಪ್ಲಾಟ್‌ಫಾರ್ಮ್‌ನಿಂದ ಉಡಾವಣೆ ಮಾಡಲಾಗಿತ್ತು.

ಅದೇ ಸಮಯದಲ್ಲಿ, ಆಕಾಶ್ ಡಿಫೆನ್ಸ್ ಸಿಸ್ಟಮ್, ಡಿ -4 ಸಿಸ್ಟಮ್ ಮತ್ತು ಎಂಆರ್-ಎಸ್ಎಎಂ ಅನ್ನು ರಕ್ಷಣಾತ್ಮಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಬಳಸಲಾಗುತ್ತಿತ್ತು ಎಂದರು. ಸಿಂಧೂರ್  ಕಾರ್ಯಾಚರಣೆಯು ಭಾರತ ಸ್ವದೇಶಿ ತಂತ್ರಜ್ಞಾನದ ಮೂಲಕ ತನ್ನ ಗಡಿಗಳನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ. ಕಾರ್ಯಾಚರಣೆಗಾಗಿ ನಿಯೋಜಿಸಲಾದ ರಕ್ಷಣಾ ವ್ಯವಸ್ಥೆಗಳಲ್ಲಿ ಗಾಳಿಯಿಂದ ಗಾಳಿಗೆ ಚಿಮ್ಮುವ ಆಕಾಶ್‌ ಮಿಸೈಲ್‌, ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ರೂಸ್‌ ಕ್ಷಿಪಣಿ, ಡಿ4 ಡ್ರೋನ್‌ ವ್ಯವಸ್ಥೆ, ಎಡಬ್ಲ್ಯೂಎನ್​ಸಿ ವಾಯುಗಾಮಿ ವ್ಯವಸ್ಥೆ, ಆಕಾಶತೀರ್ ಡಿಫೆನ್ಸ್‌ ಸಿಸ್ಟಮ್‌ ಸೇರಿವೆ ಎಂದು ಮಾಹಿತಿ ನೀಡಿದರು.

ದೇಶದ ಕಡೆಗೆ ಬರುತ್ತಿದ್ದ ಮಿಸೈಲ್‌ ದಾಳಿಗಳನ್ನು ಗುರುತಿಸುವಲ್ಲಿ ಹಾಗೂ ಎದುರಾಳಿಗಳ ದಾಳಿಯನ್ನು ತಟಸ್ಥಗೊಳಿಸುವಲ್ಲಿ ಆಕಾಶತೀರ್‌ ಪ್ರಮುಖ ಪಾತ್ರ ವಹಿಸಿತು ಇದೆಲ್ಲ ಕಾರಣಗಳಿಂದಾಗಿ ಭಾರತ ಯಶಸ್ಸು ಕಂಡಿತು ಎಂದು ಬಣ್ಣಿಸಿದರು.

ರಕ್ಷಣಾ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2024-25ನೇ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆಯು ದಾಖಲೆಯ ಮಟ್ಟವಾದ 1,50,590 ಕೋಟಿ ರೂ.ಗಳನ್ನು ತಲುಪಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿನ 1.27 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 18 ರಷ್ಟು ಹೆಚ್ಚಾಗಿದೆ.

ಇದು 2019-20ರಲ್ಲಿನ 79,071 ಕೋಟಿ ರೂ.ಗಳಿಗಿಂತ ಸುಮಾರು ಶೇ. 90 ರಷ್ಟು ಹೆಚ್ಚಾಗಿದೆ. ಕಾಮತ್ ಅವರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸುತ್ತಾ, ಈ ಯಶಸ್ಸಿಗೆ ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳು ಕಾರಣವೆಂದು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *