Breaking: LPG ಸಿಲಿಂಡರ್ ಬೆಲೆ ಪರಿಷ್ಕರಣೆ: ಎಷ್ಟಾಗಿದೆ ಗೊತ್ತಾ ಬೆಲೆ??

LPG Cylinder: ದೇಶಾದ್ಯಂತ ಇಂದು (ಜುಲೈ 1) ಎಲ್ಪಿಜಿ ಸಿಲಿಂಡರ್ಗಳ ಬೆಲೆ ಪರಿಷ್ಕರಣೆ ಆಗಿದೆ. ಇಂಡಿಯನ್ ಆಯಿಲ್ನ ವೆಬ್ಸೈಟ್ ಪ್ರಕಾರ, ದೇಶೀಯ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 1103 ರೂಪಾಯಿ ಇದ್ದರೆ, ಅದೇ ವೇಳೇ, ವಾಣಿಜ್ಯ LPG ಸಿಲಿಂಡರ್ ಬೆಲೆಯು 1773 ರೂಪಾಯಿಗೆ ಬದಲಾಗದೆ ಉಳಿದಿದೆ.

ಸಿಲಿಂಡರ್ ಬೆಲೆ

ಜೂನ್ ತಿಂಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 83 ರೂಪಾಯಿ ಕಡಿಮೆ ಮಾಡಲಾಗಿದೆ. ಮೇ ತಿಂಗಳಲ್ಲೂ 172 ರೂಪಾಯಿ ಅಗ್ಗವಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕೊನೆಯದಾಗಿ 2022ರ ಜುಲೈ 6ರಂದು ಹೆಚ್ಚಿಸಲಾಗಿತ್ತು.

ಅಂದಿನಿಂದ ಇದುವರೆಗೂ ದೇಶದ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆ 1053 ರೂಪಾಯಿ ಆಗಿದ್ದು, ಅದಕ್ಕೂ ಮೊದಲು 1103 ರೂಪಾಯಿ ಇತ್ತು. ಅಂದು 50 ರೂಪಾಯಿ ಹೆಚ್ಚಳವಾಗಿತ್ತು. ಅಂದರೆ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳು ಒಂದು ವರ್ಷದಿಂದ ಸ್ಥಿರವಾಗಿವೆ ಎಂದು ಹೇಳಬಹುದು.

ದೇಶದಲ್ಲಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಆಗಾಗ್ಗೆ ಏರಿಳಿತಗಳು ಕಂಡುಬರುತ್ತವೆ. ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2023 ಮಾರ್ಚಲ್ಲಿ 1769 ರೂಪಾಯಿ ಇತ್ತು. ಅದರ ಬೆಲೆ ಹೆಚ್ಚಾಗಿ 2119.50 ರೂಪಾಯಿ ತಲುಪಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ವಾಣಿಜ್ಯ ಸಿಲಿಂಡರ್ಗಳ ಬೆಲೆಗಳು ಕ್ರಮವಾಗಿ 2028 ಮತ್ತು 1856.50 ರೂಪಾಯಿ ಆಗಿದ್ದವು. ಗೃಹಬಳಕೆಯ ಸಿಲಿಂಡರ್ಗಳು 14.2 ಕೆಜಿ, ಆದರೆ ವಾಣಿಜ್ಯ ಸಿಲಿಂಡರ್ಗಳು 19 ಕೆಜಿ ತೂಕದವು.

Pragati TV Social Connect for more latest u

Leave a Reply

Your email address will not be published. Required fields are marked *