ಮಗನ ಸಾವಿಗೆ ನಾನು ಕಾರಣವಲ್ಲ, ಕುಟುಂಬದ ಕಿರುಕುಳವೇ ಪ್ರಚೋದನೆ – ಸೌಮ್ಯಾ ಶೆಟ್ಟಿ
ಉಡುಪಿ: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಮಗನ ಸಾವಿಗೆ ಆತನ ಪತ್ನಿ ಸೌಮ್ಯಾ ಶೆಟ್ಟಿಯೇ ಕಾರಣ ಎಂಬ ಗಂಭೀರ ಆರೋಪವನ್ನು ಸುದೀಪ್ ಪೋಷಕರು ಮಾಡಿದ್ದರು. ಆದರೀಗ ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸೌಮ್ಯಾ ಶೆಟ್ಟಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಹೆತ್ತವರ ಆರೋಪ ಅಲ್ಲಗಳೆದಿರುವ ಈಕೆ, ಪತಿಯ ಸಾವಿಗೆ ತಾನು ಕಾರಣಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಪೋಷಕರು ಹೇಳುವಂತೆ ನೆಲ್ಯಾಡಿಯಲ್ಲಿ ನಾನು ರಂಪಾಟ ಮಾಡಿಲ್ಲ. ವಿಷಯ ಹಾಕಿ ಸುದೀಪ್ರನ್ನು ಕೊಂದಿಲ್ಲ. ಬದಲಾಗಿ ಮನೆಯವರ ಕಿರುಕುಳದಿಂದಲೇ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸುದೀಪ್ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಆತಂಕಗೊಂಡು ತಾನು ನೆಲ್ಯಾಡಿಗೆ ತೆರಳಿದ್ದೆ. ಅವರು ಹೇಳುವಂತೆ ತಾನು ಯಾವುದೇ ರಂಪಾಟ ನಡೆಸಿಲ್ಲ.
ವೇಣು ಶೆಟ್ಟಿ ಆರೋಪಗಳಿಗೂ ಉತ್ತರಿಸಿರುವ ಸೌಮ್ಯಾ, ನಾವಿಬ್ಬರೂ ರಂಗಭೂಮಿ ಕಲಾವಿದರು. ನನಗೆ ಆತನ ಪರಿಚಯ ಇರಲಲಿಲ್ಲ. ಆದರೆ ಅವನಿಗೆ ನನ್ನ ಪರಿಚಯ ಇತ್ತಂತೆ. ಈ ಹಿಂದೆ ನನಗೆ ಪ್ರಪೋಸಲ್ ಬಂದಿತ್ತು. ಆ ವೇಳೆ ನನಗೆ ಅನೇಕ ಮಂದಿ ಆತನ ಬಗ್ಗೆ ಮಾಹಿತಿ ನೀಡಿದ್ದು, ಹಲವು ಮಹಿಳೆಯರ ಜೊತೆ ಅವನಿಗೆ ಸಂಬಂಧ ಇತ್ತು ಎಂಬುದು ಗೊತ್ತಾಗಿತ್ತು. ಹೀಗಾಗಿ ಆ ಸಂಬಂಧ ಬಿಟ್ಟಿದ್ದೆ. ನಮ್ಮ ಮನೆಗೂ ಆತ ಬಂದು ಹೋಗುತ್ತಿದ್ದ. ನಂತರ ಮನೆಗೆ ಬರಬೇಡ ಎಂದಿದ್ದೆವು. ಆತನೇ ಸುದೀಪ್ ಮ ನೆಯವರ ತಲೆ ಕೆಡಿಸಿದ್ದು, ಈ ಬಗ್ಗೆ ಪತಿಯೇ ತನಗೆ ತಿಳಿಸಿದ್ದರು. ಸುದೀಪ್ ತಂದೆಗೆ ವೇಣುಗೋಪಾಲ್ ಕಡೆಯಿಂದ ಅನೇಕ ಬಾರಿ ಕರೆ ಹೋಗಿವೆ. ಹೀಗಾಗಿ ಆತ ಕೂಡ ತನ್ನ ಪತಿಯ ಆತ್ಮಹತ್ಯೆಗೆ ಕಾರಣ. ಹೀಗಾಗಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದವರ ವಿರುದ್ಧ ದೂರು ನೀಡಿದ್ದೇನೆ. ಕಾರ್ಕಳ ಠಾಣೆಯಲ್ಲಿ ಸುದೀಪ್ ಮನೆಯವರು ಹಾಗೂ ವೇಣುಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸೌಮ್ಯಾ ತಿಳಿಸಿದ್ದಾರೆ.
For More Updates Join our WhatsApp Group :




