ಕಾರು ಗುದ್ದಿ: ಹಿರಿಯ ನಟ ಮಣಿಯನ್ಪಿಳ್ಳ ರಾಜು ಬಂಧನ.

ಕಾರು ಗುದ್ದಿ: ಹಿರಿಯ ನಟ ಮಣಿಯನ್ಪಿಳ್ಳ ರಾಜು ಬಂಧನ.

ತಿರುವನಂತಪುರದಲ್ಲಿ ಹಿಟ್ & ರನ್ ಪ್ರಕರಣ

ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕರೂ ಆಗಿ ಗುರುತಿಸಿಕೊಂಡಿರುವ ಮಣಿಯನ್‌ಪಿಳ್ಳ ರಾಜು ಅವರ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಮಣಿಯನ್‌ಪಿಳ್ಳ ರಾಜು ಓಡಿಸುತ್ತಿದ್ದ ಕಾರು ತಿರುವನಂತಪುರದಲ್ಲಿ ಬೈಕೊಂದಕ್ಕೆ ಢಿಕ್ಕಿ ಆಗಿದ್ದು, ಬೈಕಿನ ಮೇಲೆ ಸವಾರರಾಗಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯು ಫೆಬ್ರವರಿ 5ರಂದು ಗುರುವಾರ ರಾತ್ರಿ ತಿರುವನಂತಪುರದಲ್ಲಿ ನಡೆದಿದೆ.

ಫೆಬ್ರವರಿ 5ರಂದು ತಿರುವನಂತಪುರದ ವಝುತಕಾಡ್‌ನಲ್ಲಿರುವ ‘ತ್ರಿವೇಂಡ್ರಮ್ ಕ್ಲಬ್’ ಬಳಿ ರಾತ್ರಿ ಸುಮಾರು 9:30ಕ್ಕೆ ಈ ಅಪಘಾತ ಸಂಭವಿಸಿದೆ. ಮಣಿಯನ್‌ಪಿಳ್ಳ ರಾಜು ಅವರು ಚಲಾಯಿಸುತ್ತಿದ್ದ ಕಾರು (KL-01-CJ-0004), ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೋಗುತ್ತಿದ್ದ ಸೂರಜ್ ಮತ್ತು ನಿವೇದಿತ್ ಕೃಷ್ಣ ಎಂಬ ಇಬ್ಬರು ಸುಮಾರು 20 ವರ್ಷದ ಯುವಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕರು ರಸ್ತೆಗೆ ಬಿದ್ದಿದ್ದು, ಒಬ್ಬರಿಗೆ ಕಾಲಿನ ಮೂಳೆ ಮುರಿತ ಹಾಗೂ ಮತ್ತೊಬ್ಬರಿಗೆ ತಲೆ ಮತ್ತು ಬೆನ್ನುಮೂಳೆಯ ಗಂಭೀರ ಗಾಯಗಳಾಗಿವೆ.

ಅಪಘಾತವಾದ ತಕ್ಷಣ ನಟ ರಾಜು ಅವರು ಗಾಯಾಳುಗಳಿಗೆ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದರು. ಅಪಘಾತದ ಸ್ಥಳದಲ್ಲಿ ಬಿದ್ದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಾಥಮಿಕವಾಗಿ ತಲೆಮರೆಸಿಕೊಂಡಿದ್ದ ರಾಜು, ಶುಕ್ರವಾರ ಬೆಳಿಗ್ಗೆ ಮ್ಯೂಸಿಯಂ ಪೊಲೀಸ್ ಠಾಣೆಗೆ ಹಾಜರಾದರು. ಪೊಲೀಸರು ಅವರನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಪಘಾತದ ಸಮಯದಲ್ಲಿ ಮಣಿಯನ್‌ಪಿಳ್ಳ ರಾಜು ಅವರು ಕಾರನ್ನು ವೇಗವಾಗಿ ಮತ್ತು ಅಜಾಗರೂಕವಾಗಿ ಓಡಿಸಿದ್ದು ಖಾತ್ರಿ ಆಗಿದೆ ಎನ್ನಲಾಗುತ್ತಿದೆ. ಪೊಲೀಸರು ನಟನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಿದ್ದು, ಘಟನೆಯ ಸಮಯದಲ್ಲಿ ನಟ ಮದ್ಯ ಸೇವಿಸಿದ್ದು ಖಚಿತವಾದಲ್ಲಿ ಹೆಚ್ಚುವರಿ ಸೆಕ್ಷನ್​​ಗಳ ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *