ಇಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯ ಸಂಭ್ರಮ: ಶುಭಾಶಯ ಕೋರಿದ ಪ್ರಧಾನಿ..!!

ನವದೆಹಲಿ: ಇಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಶಿಕ್ಷಕ ಮತ್ತು ತತ್ವಜ್ಞಾನಿ ಹಾಗೂ ಮಾಜಿ ಪ್ರಧಾನಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಹುಟ್ಟುಹಬ್ಬ ಆಚರಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಧಾಕೃಷ್ಣನ್ ಅವರಿಗೆ ನಮಿಸಿ, ಅವರ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು. ಇದೇ ವೇಳೆ ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಎಂದರು.

ಪ್ರಧಾನಿ

ನಮ್ಮ ಭವಿಷ್ಯ ಮತ್ತು ಕನಸುಗಳನ್ನು ಪ್ರೆರೇಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಕರ ದಿನದಂದು ನಾವು ಅವರ ಸಮರ್ಪಣೆ ಮತ್ತು ಪ್ರಭಾವ ಬೀರುವ ಅವರಿಗೆ ನಮಿಸೋಣ. ಡಾ ಎಸ್ ರಾಧಾಕೃಷ್ಣ ಅವರ ಜನ್ಮ ಜಯಂತಿಗೆ ಗೌರವ ಸಮರ್ಪಿಸೋಣ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ನಿನ್ನೆ ಅಂದರೆ ಸೆಪ್ಟೆಂಬರ್ 4ರಂದು ಶಿಕ್ಷಕರೊಡನೆ ನಡೆಸಿದ ಸಂವಾದದ ಪ್ರಮುಖಾಂಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅತ್ಯುತ್ತಮ ಶಿಕ್ಷಕ, ರಾಜನೀತಿತಜ್ಞ ಮತ್ತು ತತ್ವಜ್ಞಾನಿಯಾಗಿದ್ದ ಡಾ. ರಾಧಕೃಷ್ಣನ್ ಅವರು ಅಂದಿನ ದಿನದಲ್ಲಿ ವಿಶ್ವ ನಾಯಕರೊಂದಿಗೆ ಉತ್ತಮ ಕಾರ್ಯ ಸಂಬಂಧವನ್ನು ಹೊಂದಿದ್ದರು. 1888ರ ಸೆಪ್ಟೆಂಬರ್ 5ರಂದು ತಮಿಳುನಾಡಿನ ತಿರುತ್ತನಿಯಲ್ಲಿ ಅವರು ಜನಿಸಿದ್ದು, ಅವರ ಸೇವೆಗೆ ಗೌರವ ಪೂರ್ವಕವಾಗಿ ಅಂದಿನ ದಿನವನ್ನು ಶಿಕ್ಷಕರ ದಿನ ಎಂದು ಆಚರಿಸಲಾಗುವುದು.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *