Central Govt: ಅಕ್ಟೋಬರ್ ತಿಂಗಳಿನಿಂದ ಜನನ ಮತ್ತು ಮರಣ ಪ್ರಮಾಣ ಪತ್ರ ಕಡ್ಡಾಯ..!!

ನವದೆಹಲಿ: ಇತ್ತಿಚಿಗೆ ಸಂಸತ್‌ನಲ್ಲಿ ಅನುಮೋದನೆಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಮಾಹಿತಿ ನೀಡಿದ್ದಾರೆ.

ಜನನ

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡಿಕೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಆಧಾರ್ ಸಂಖ್ಯೆ, ಮದುವೆ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮುಂತಾದ ಹಲವಾರು ಉದ್ದೇಶಗಳಿಗಾಗಿ ಜನನ ಪ್ರಮಾಣಪತ್ರವನ್ನು (Birth Certificate) ಒಂದೇ ದಾಖಲೆಯಾಗಿ ಬಳಸಲು ಈ ಕಾನೂನು ಅನುಮತಿಸುತ್ತದೆ. 

ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ದಾಖಲೆಯನ್ನು ರಚಿಸಲು ಕಾನೂನು ಸಹಾಯ ಮಾಡುತ್ತದೆ. ಇದು ಅಂತಿಮವಾಗಿ ಡಿಜಿಟಲ್ ನೋಂದಣಿ ಮೂಲಕ ಸಮರ್ಥ ಮತ್ತು ಪಾರದರ್ಶಕ ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ಖಚಿತಪಡಿಸುತ್ತದೆ. 

ಜನನ

ಮತದಾರ ಪಟ್ಟಿಯೊಂದಿಗೆ ಜನನ/ಮರಣ ಮಾಹಿತಿ ಜೋಡಣೆಯಿಂದ ವೋಟರ್ ಲಿಸ್ಟ್ ಪರಿಷ್ಕರಣೆ ಸ್ವಯಂಚಾಲಿತವಾಗಲಿದೆ. ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ಕಡೆಯಿಂದ ಸೂಚನೆ ಬರಲಿದೆ. ಅದೇ ರೀತಿ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ, ಚುನಾವಣಾ ಆಯೋಗವು ತಾನೇ ಆ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಆದರೆ ಇದಕ್ಕೂ ಮುನ್ನ ಆ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 15 ದಿನದೊಳಗೆ ಮರಣದ ವಿಷಯವನ್ನು ದೃಢಪಡಿಸಬೇಕಾಗುತ್ತದೆ. 

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *