ಬಡವನಹಳ್ಳಿ ಪಿ.ಎಂ.ಶ್ರೀ ಶಾಲೆಗೆ ಕೇಂದ್ರದ ಅಧಿಕಾರಿಗಳ ಭೇಟಿ.

ಬಡವನಹಳ್ಳಿ ಪಿ.ಎಂ.ಶ್ರೀ ಶಾಲೆಗೆ ಕೇಂದ್ರದ ಅಧಿಕಾರಿಗಳ ಭೇಟಿ.

ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು.

ತುಮಕೂರು: ಮಧುಗಿರಿ ತಾಲೂಕಿನ ಬಡವನಹಳ್ಳಿಯ  ಪಿ.ಎಂ.ಶ್ರೀ. ಹಿರಿಯ ಪ್ರಾಥಮಿಕ ಶಾಲೆಗೆ  ಕೇಂದ್ರದ ಎಸ್ಸಿ – ಎಸ್ಟಿ  ಆಯೋಗದ ಜಂಟಿ ಕಾರ್ಯದರ್ಶಿ  ಶ್ರೀ ಹೆಚ್.ಸಾಂಥಾಂಗ್ ಐ.ಎ.ಎಸ್, ಪದವಿ ಪೂರ್ವ ಶಿಕ್ಷಣ ನಿರ್ದೇಶಕಿ ರಾಧಾ ಭರತ್ ಐ.ಎ.ಎಸ್, ಡಿ.ಡಿ.ಪಿ.ಐ. ಮಾದವರೆಡ್ಡಿ, ಮಧುಗಿರಿ ಡಯಟ್ ಪ್ರಾಂಶುಪಾಲ  ಗಂಗಾಧರ, ಕಾರ್ಯಕ್ರಮಾದಿಕಾರಿ  ಹೇಮಾವತಿ,  ಡಿ.ವೈ.ಪಿ.ಸಿ ನರಸಿಂಹ ಮೂರ್ತಿ ರವರುಗಳು  ಪಿ.ಎಂ.ಶ್ರೀ  ಶಾಲೆಯ ಪರಿವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.  ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿ ಸಲಹೆಯನ್ನು ನೀಡಿದರು. ಪಿ ಎಂ ಶ್ರೀ ಸರ್ಕಾರಿ ಶಾಲೆಗಳಲ್ಲಿ ಕರಾಟೆ, ಯೋಗ, ಜಿಮ್ನಾಸ್ಟಿಕ್, ಕಲೆ ಹೀಗೆ ಹತ್ತು ಹಲವು ಸಾಂಸ್ಕೃತಿಕ ತರಬೇತುದಾರರನ್ನು ನಿಯೋಜಿಸುವ ಯೋಜನೆ ಹೊಂದಿದೆ.

ಈ ಸಂದರ್ಭದಲ್ಲಿ ಶಾಲಾ ವತಿಯಿಂದ  ಕೇಂದ್ರದ ಅಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಿದರು.   ಈ ವೇಳೆ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ, ಶಿಕ್ಷಕರು ಗಳಾದ ಸಿದ್ದೇಶ್, ರಾಜಶೇಖರ, ಚೆನ್ನಾರೆಡ್ಡಿ, ಮೋಹನ್, ಮಧು, ಶೈಲಜಾ, ಅಂಬಿಕಾ, ಸೌಮ್ಯ, ಅನಿತಾ, ಶಿವರಾಜ್, ಎಸ್.ಡಿ.ಎಂ.ಸಿ. ಅದ್ಯಕ್ಷ ರಾಘವೇಂದ್ರ,  ಉಪಾಧ್ಯಕ್ಷೆ ನಳಿನ ಮುದ್ದರಾಜು ರವರು ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *