ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ.

ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ.

ಬೆಂಗಳೂರು–ಕಲಬುರಗಿ ಮಾರ್ಗ ಸೇರಿದಂತೆ ಪ್ರಮುಖ ರೈಲುಗಳ ಹೊಸ ಸಮಯ ಮಾರ್ಚ್ 15ರಿಂದ ಜಾರಿ.

ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆ ಕೆಲವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಕಾಚಿಗುಡ–ಯಶವಂತಪುರ–ಕಾಚಿಗುಡ ಹಾಗೂ ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಈ ಹೊಸ ವೇಳಾಪಟ್ಟಿ ಮಾರ್ಚ್ 15ರಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಯಾವೆಲ್ಲಾ ರೈಲುಗಳ ಸಮಯ ಬದಲಾವಣೆ

ರೈಲು ಸಂಖ್ಯೆ 20704 ಯಶವಂತಪುರ ಟು ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಹಿಂದೂಪುರ ನಿಲ್ದಾಣದಲ್ಲಿ ಈಗಿರುವ 15.48/15.50 ಸಮಯದ ಬದಲು ಪರಿಷ್ಕೃತವಾಗಿ 15.55 ರಿಂದ 15.57ಕ್ಕೆ ಆಗಮಿಸಿ ನಿರ್ಗಮಿಸಲಿದೆ.

ಕಾಚಿಗುಡ ಟು ಯಶವಂತಪುರ

ಅದೇ ರೀತಿಯಲ್ಲಿ ರೈಲು ಸಂಖ್ಯೆ 20703 ಕಾಚಿಗುಡ ಟು ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್​ ಹಿಂದೂಪುರ ನಿಲ್ದಾಣದಲ್ಲಿ ಈಗಿರುವ 12.08/12.10 ಸಮಯದ ಬದಲು 12.17ರಿಂದ 12.19ಕ್ಕೆ ಆಗಮಿಸಿ ನಿರ್ಗಮಿಸಲಿದೆ.

ಕಲಬುರಗಿ ಟು ಎಸ್ಎಂವಿಟಿ ಬೆಂಗಳೂರು

ರೈಲು ಸಂಖ್ಯೆ 22231 ಕಲಬುರಗಿ ಟು ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ ಈಗಿರುವ 11/11.02 ಸಮಯದ ಬದಲು 11.13/11.15ಕ್ಕೆ ಆಗಮಿಸಲಿದೆ. ಅದೇ ರೈಲು ಯಲಹಂಕ ನಿಲ್ದಾಣದಲ್ಲಿ 12.28/12.30 ಸಮಯದ ಬದಲು 12.58/ 01 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.

ಎಸ್ಎಂವಿಟಿ ಬೆಂಗಳೂರು ಟು ಕಲಬುರಗಿ

ಇನ್ನು ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು ಟು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಯಲಹಂಕ ನಿಲ್ದಾಣದಲ್ಲಿ ಈಗಿರುವ 15.05/15.07 ಸಮಯದ ಬದಲು 15.09/15.11ಕ್ಕೆ ಆಗಮಿಸಿ ನಿರ್ಗಮಿಸಲಿದೆ. ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ ಈಗಿರುವ 16.23/16.25 ಸಮಯದ ಬದಲು 16.45/16.47ಕ್ಕೆ ಆಗಮಿಸಿ ನಿರ್ಗಮಿಸಲಿದೆ.

ಪ್ರಯಾಣಿಕರು ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲುಗಳ ಈ ಬದಲಾವಣೆಗೊಂಡ ವೇಳಾಪಟ್ಟಿಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *