Chiranjeevi ಸಿನಿಮಾ Content  ಲೀಕ್: ಖಡಕ್ ಎಚ್ಚರಿಕೆ ಕೊಟ್ಟ ನಿರ್ಮಾಣ ಸಂಸ್ಥೆ..

Chiranjeevi ಸಿನಿಮಾ Content ಲೀಕ್: ಖಡಕ್ ಎಚ್ಚರಿಕೆ ಕೊಟ್ಟ ನಿರ್ಮಾಣ ಸಂಸ್ಥೆ..

ಮೆಗಾಸ್ಟಾರ್ ಚಿರಂಜೀವಿ ಅವರ 157ನೇ ಸಿನಿಮಾದ ಚಿತ್ರೀಕರಣದ ಸೆಟ್ನ ಚಿತ್ರಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿವೆ. ಇದರಿಂದ ಸಿನಿಮಾದ ಬಿಡುಗಡೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ನಿರ್ಮಾಣ ಸಂಸ್ಥೆಗಳು ಲೀಕ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದಾಗಿ ರಿಲೀಸ್ ಮುಂದಕ್ಕೆ ಹೋಗಲಾಗುತ್ತದೆ. ‘ವಿಶ್ವಂಭರ’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿರಂಜೀವಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದು ಚಿರಂಜೀವಿ ನಟನೆಯ 157ನೇ ಸಿನಿಮಾ ಆಗಿರಲಿದ್ದು, ಸಿನಿಮಾ ಅನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಕೆಲ ವಾರಗಳಷ್ಟೆ ಆಗಿದ್ದು, ಅಷ್ಟರಲ್ಲೇ ಸಿನಿಮಾಕ್ಕೆ ಕೆಲವರ ಕಾಟ ಶುರುವಾಗಿದೆ.

ಚಿರಂಜೀವಿಯ 157ನೇ ಸಿನಿಮಾಕ್ಕಾಗಿ ಭಾರಿ ದೊಡ್ಡ ಸೆಟ್ ಅನ್ನು ನಿರ್ಮಾಣ ಮಾಡಲಾಗಿದೆ. ಸೆಟ್ ಬಲು ಅಪರೂಪವಾಗಿದ್ದು, ಸಿನಿಮಾನಲ್ಲಿ ಸೆಟ್ ಸಹ ಬಹಳ ಮುಖ್ಯವಾದ ಆಕರ್ಷಣೆಯ ಬಿಂದುವಾಗಿದೆ. ಆದರೆ ಕೆಲವರು ಸಿನಿಮಾದ ಸೆಟ್ನ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಸೆಟ್ನ ಚಿತ್ರಗಳ ಜೊತೆಗೆ ಸಿನಿಮಾದ ಶೂಟಿಂಗ್ನ ದೃಶ್ಯಗಳನ್ನು ಸಹ ಲೀಕ್ ಮಾಡಿ ಸಿನಿಮಾಕ್ಕೆ ಸಮಸ್ಯೆ ನೀಡಿದ್ದಾರೆ. ಆದರೆ ಇದನ್ನು ಸಿನಿಮಾ ನಿರ್ಮಾಣ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ.

ಶೈನ್ ಸ್ಕ್ರೀನ್ ಮತ್ತು ಗೋಲ್ಡ್ ಬಾಕ್ಸ್ ನಿರ್ಮಾಣ ಸಂಸ್ಥೆಗಳು ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಎರಡೂ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಚಿರಂಜೀವಿ ಅವರು 157ನೇ ಸಿನಿಮಾ ಸೆಟ್ನ ಅನಧಿಕೃತ ಚಿತ್ರಗಳು ಹಾಗೂ ವಿಡಿಯೋಗಳನ್ನು ಕೆಲವರು ಹರಿಬಿಟ್ಟು ಸಿನಿಮಾಕ್ಕೆ ಸಮಸ್ಯೆ ನೀಡಲು ಯತ್ನಿಸುತ್ತಿದ್ದಾರೆ. ಯಾರೇ ಆದರೂ ಸಾಮಾಜಿಕ ಜಾಲತಾಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 157ನೇ ಸಿನಿಮಾದ ಚಿತ್ರ-ವಿಡಿಯೋಗಳನ್ನು ಹರಿಬಿಟ್ಟಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಕಾನೂನಿನ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುವುದು ಎಂದಿದ್ದಾರೆ.

Leave a Reply

Your email address will not be published. Required fields are marked *