ಗಣೇಶ ಹಬ್ಬಕ್ಕೆ ಭಜರಂಗಿ 2 ದರ್ಶನ : ಸೆಪ್ಟೆಂಬರ್ 10ಕ್ಕೆ ತೆರೆಗೆ ಬರಲು ರೆಡಿ

ಸಿನಿಮಾ : ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ಅಂದ್ರೇನೆ ಒಂದು ಎನರ್ಜಿ. ಭಜರಂಗಿ 2 ವಿಚಾರದಲ್ಲಿ ಅದು ದುಪಟ್ಟಾಗಿದೆ. ಯಾಕೆಂದರೆ ಟೀಸರ್, ಮೇಕಿಂಗ್ ನಿಂದ ಅಭಿಮಾನಿಗಳ ನಿರೀಕ್ಷೆ ಮುಗಿಲು ಮುಟ್ಟಿಸಿದೆ. ಭಜರಂಗಿ, ವಜ್ರಕಾಯ ಸಿನೆಮಾಗಳ ನಂತರ  ಹ್ಯಾಟ್ರಿಕ್ ಗೆಲುವಿಗೆ ಈ ಜೋಡಿ ತುದಿಗಾಲಲ್ಲಿ ನಿಂತಿದೆ.  ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಸಿನೆಮಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇರೋ ಈ ಸಿನೆಮಾ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿ, ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದೆ.

ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 10ಕ್ಕೆ ಬಿಡುಗಡೆಯಾಗಲು ಸಜ್ಜಾಗಿದ್ದು, ಈ ಸಿನಿಮಾ ಟೀಸರ್ ಗೆ ಎಲ್ಲಿಲ್ಲದ ರೆಸ್ಪಾನ್ಸ್ ಬಂದಿದೆ, ಸಿನೆಮಾ ಸಾಕಷ್ಟು ಕುತೂಹಲ ಹೆಚ್ಚಿಸಿದ್ದು, ಶಿವಣ್ಣ ಸಹ ಈ ಚಿತ್ರದ ಗೆಲುವಿನ ಮೇಲೆ ಬಾರಿ ನಂಬಿಕೆ ಇಟ್ಟಿದ್ದಾರೆ. ಮುಂದಿನ ವೇದ ಸಿನಿಮಾ ಸಹ ಜೊತೆಯಲ್ಲೇ ಮಾಡುತ್ತಿದ್ದಾರೆ.

ಶಿವಣ್ಣ ಜೊತೆ ಭಾವನ ಮೆನನ್, ವಿಶೇಷ ಪಾತ್ರದಲ್ಲಿ ಶ್ರುತಿ ಅಭಿನಯಿಸಿದ್ದು, ಸಾಕಷ್ಟು ಹೊಸ ಪ್ರತಿಭೆಗಳು ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್ ಬಂಡವಾಳ ಹೂಡಿರುವ ಈ ಸಿನಿಮಾಕ್ಕೆ ದೊಡ್ಡ ಯಶಸ್ಸಾಗಲಿ ಎಂಬುದೇ ನಮ್ಮ ಆಶಯ.

Pragati TV Social Connect for more latest u

Leave a Reply

Your email address will not be published. Required fields are marked *