ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಸಿಟ್ಟಾದ ಬಿಜೆಪಿ ಮುಖಂಡ

ರಾಯಚೂರು : ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಪಡೆಯ ಸಿಬ್ಬಂದಿಯೊಬ್ಬರು ಶಾಸಕರಿಗೆ ಧರ್ಮದ ಉಪದೇಶ ಮಾಡಲು ಹೋಗಿ ಪೇಜಿಗೆ ಸಿಲುಕಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ.

ಉಪಚುನಾವಣೆಯ ಸಲುವಾಗಿ ರಾಜ್ಯದ ಪ್ರಮುಖ ಮೂರು ಪಕ್ಷಗಳು ಅಬ್ಬರದ ಪ್ರಚಾರವನ್ನು ಆರಂಭಿಸಿವೆ. ಚುನಾವಣೆಯನ್ನು ಗೆಲ್ಲಲು ತಂತ್ರಕ್ಕೆ ಪ್ರತಿ ತಂತ್ರವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಪ್ರಚಾರಕರು ಕೂಡ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. 

ಈ ಚುನಾವಣೆಯ ಕೆಲಸಕ್ಕೆಂದೇ ಬೆಂಗಳೂರು ಕೆ ಆರ್ ಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮತ್ತು ಬಿಎಂಟಿಸಿ ಸಂಸ್ಥೆಯ ಹಾಲಿ ಅಧ್ಯಕ್ಷರಾದ ನಂದೀಶ್ ರೆಡ್ಡಿ ಅವರು ಹೋಗುತ್ತಿದ್ದ ಮಾರ್ಗದ ಮಧ್ಯೆ ಮುದಗಲ್ ಬಳಿ ಚೆಕ್ ಪೋಸ್ಟ್ ನಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಪಡೆಯ ಮಹಿಳೆಯೊಬ್ಬರು ನಂದೀಶ್ ರೆಡ್ಡಿ ಅವರಿಗೆ ಧಾರ್ಮಿಕ ಉಪದೇಶ ಮಾಡಲು ಹೋಗಿ ಚೀಮಾರಿ ಹಾಕಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಹಿಂದುಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸುವ ಕಾರ್ಯ ಇಂದು ನೆನ್ನೆಯದಲ್ಲ, ದಿನಂಪ್ರತಿ ಒಂದಲ್ಲ ಒಂದು ಪ್ರಕರಣಗಳು ಕಂಡು ಬರುತ್ತಲೇ ಇರುತ್ತವೆ. ಯಾರಿಗೆ ಯಾವ ಧರ್ಮ ಇಷ್ಟವೋ ಅದನ್ನು ಪಾಲಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಇಂತಹ ಧರ್ಮವನ್ನು ಪಾಲಿಸಬೇಕು ಎಂಬ ಒತ್ತಡವನ್ನು ಯಾರ ಮೇಲೂ ಹೇರುವ ಹಾಗಿಲ್ಲ. ಇದನ್ನು ಅರಿಯದೆ ಯೇಸುವಿನ ಗುಣಗಾನ ಮಾಡಲು ಹೋಗಿ ಬಿಜೆಪಿ ಮುಖಂಡನಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ ಆ ಮಹಿಳೆ.

ತಾನೊಬ್ಬಳು ದೇಶವನ್ನು ಕಾಪಾಡುವ ಭದ್ರತಾ ಪಡೆಯ ಭಾಗವಾಗಿ ಇದ್ದೇನೆ ಎಂಬುದನ್ನು ಮರೆತು ಈ ರೀತಿ ಕ್ರೈಸ್ತ ಧರ್ಮದ ಪ್ರಚಾರವನ್ನು ಮಾಡುತ್ತಿರುವ ಈಕೆಯ ಮಾತುಗಳನ್ನು ಕೇಳಿ ಕೋಪಗೊಂಡ ನಂದೀಶ್ ಹಾಗೂ ಆತನ ಬೆಂಬಲಿಗರು ಆಕೆಯ ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದಾರೆ. ಇನ್ನು ಎಷ್ಟು ಹೇಳಿದರೂ ಕೇಳದೆ ತನ್ನ ಮಾತನ್ನು ಮುಂದುವರಿಸಿದ ಆಕೆಯ ವರ್ತನೆಯನ್ನು ಕಂಡು ನಂದೀಶ್ ಬೆಂಬಲಿಗರು ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ಘಟನೆ ವಿಕೋಪಕ್ಕೆ ಹೋಗುವುದನ್ನು ಮನಗಂಡ ಮತ್ತೋರ್ವ ಸಿಬ್ಬಂದಿ ಅವರನ್ನು ಸಮಾಧಾನಪಡಿಸಿ ಕಳುಹಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ಅವರಿಗೆ ಕೆಲಸವೇ ತೃಪ್ತಿ ನೀಡುತ್ತಿದ್ದರೆ. ಅದನ್ನೇ ಮಾಡಲಿ ಅದನ್ನು ಬಿಟ್ಟು ದೇಶ ಸೇವೆಯಂತಹ ಭದ್ರತಾ ಪಡೆಯ ಸಿಬ್ಬಂದಿ ಏಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *