ಹವಾಮಾನ ವೈಪರೀತ್ಯ: ರೋಗಬಾಧೆಗಳು ಹೆಚ್ಚಳ

ತುಮಕೂರು: ಇತ್ತೀಚಿನ ಕೆಲವು ದಿನಗಳಿಂದ ಹವಾಮಾನದಲ್ಲಿ ಸಾಕಷ್ಟು ಏರುಪೇರು ಉಂಟಾಗಿದೆ. ತಮಿಳುನಾಡಿನಲ್ಲಿ ಚಂಡಮಾರುತದ ಪರಿಣಾಮ ವ್ಯಾಪಕ ಮಳೆಯಾಗಿದೆ. ಕರ್ನಾಟಕದಲ್ಲಿ ಮಳೆಯ ಕೊರತೆ ಮುಂದುವರೆದಿದೆ. ಇದು ಚಳಿಗಾಲದ ಸಮಯ. ಆದರೆ ಚಂಡಮಾರುತದ ಪರಿಣಾಮದಿಂದ ಮೋಡುಮುಸುಕಿದ ವಾತಾವರಣ ಬಹಳಷ್ಟು ದಿನಗಳ ಕಾಲ ವ್ಯಾಪಿಸಿದ್ದು, ಈ ವಾತಾವರಣ ಜನ ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ವ್ಯತಿರಿಕ್ತ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ.

ಯುವಕ

ರಾಜ್ಯ ರಾಜಧಾನಿಯಲ್ಲಿ ವ್ಯಾಪಕವಾಗಿದ್ದ ವೈರಲ್ ಫೀವರ್ ಎಲ್ಲ ಕಡೆ ವ್ಯಾಪಿಸಿದೆ. ಕೆಮ್ಮು, ನೆಗಡಿ, ಶೀಥ, ತಲೆನೋವು ಬಾಧೆ ಬಹಳಷ್ಟು ಜನರನ್ನು ಕಾಡುತ್ತಿದೆ. ಇದರ ಜೊತೆಗೆ ಜ್ವರವೂ ಸೇರಿಕೊಂಡು ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಈಗಾಗಲೇ ಕೊರೊನಾ ಸಂದರ್ಭ ಹಾಗೂ ಆನಂತರದ ದಿನಗಳಲ್ಲಿ ವಿವಿಧ ರೋಗ ಬಾಧೆಗಳಿಂದ ತತ್ತರಿಸಿದ್ದ ಜನ ಈಗ ಮತ್ತೆ ವಿವಿಧ ರೋಗಗಳಿಂದ ಬಳಲುವಂತಾಗಿದೆ.

ವೈರಾಣು ಜ್ವರ ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುವುದರಿಂದ ಜ್ವರದಿಂದ ಬಳಲುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಒಮ್ಮೆ ಒಬ್ಬ ವ್ಯಕ್ತಿಗೆ ವ್ಯಾಪಿಸಿತೆಂದರೆ ಮರ‍್ನಾಲ್ಕು ದಿನಗಳ ಕಾಲ ಜ್ವರ, ಚಳಿ, ಕೆಮ್ಮು, ತಲೆಭಾರ, ಮೈಕೈ ನೋವು ಇತ್ಯಾದಿ ಉಂಟು ಮಾಡುತ್ತದೆ. ಕೆಲವರಿಗೆ ಉಸಿರಾಟದ ತೊಂದರೆ, ವಾಂತಿಭೇದಿ, ಹೊಟ್ಟೆನೋವು, ಕಣ್ಣು ಕೆಂಪಗಾಗುವುದು ಉಂಟು. ಚಳಿಗಾಲದ ಈ ಸಮಯದಲ್ಲಿ ಚರ್ಮ ರೋಗಗಳು ವೃದ್ಧಿಯಾಗುತ್ತವೆ. ಡೆಂಗ್ಯು ಮತ್ತು ಚಿಕನ್ ಗುನ್ಯಾ ರೋಗಗಳು ವ್ಯಾಪಿಸುತ್ತವೆ.

ಸೆಪ್ಟೆಂಬರ್‌ನಿAದ ಡಿಸೆಂಬರ್ ಅಂತ್ಯದವರೆಗಿನ ಕಾಲ ಕೆಲವರಲ್ಲಿ ರೋಗಬಾಧೆ ಹೆಚ್ಚಳ ಮಾಡುವಂತಹ ಸಮಯ. ಮಕ್ಕಳ ಮೇಲೆ ಈ ಅವಧಿ ಹೆಚ್ಚು ಪರಿಣಾಮ ಬೀರಲಿದೆ. ಕೆಮ್ಮು, ಶೀತ ಮತ್ತು ನೆಗಡಿ ಮಕ್ಕಳಲ್ಲಿ ಸಾಮಾನ್ಯ ರೋಗಗಳಾಗಿ ಪರಿಣಮಿಸಲಿವೆ. ಕಾಯಿಲೆ ಉಲ್ಬಣಿಸಿದರೆ ವೈರಲ್ ಫೀವರ್ ನ್ಯೂಮೋನಿಯಾಗೆ ತಿರುಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಆರೋಗ್ಯ ಮತ್ತು ಚಿಕಿತ್ಸೆಯಿಂದ ಎಲ್ಲ ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ. ಆದರೆ ಮಕ್ಕಳಿಗೆ ರೋಗರುಜಿನಗಳು ಕಾಣಿಸಿಕೊಂಡಾಗ ಗಾಬರಿಯಾಗುವ ಪೋಷಕ ವರ್ಗವೇ ಹೆಚ್ಚು.

ಈ ವರ್ಷ ಆರಂಭದಿAದ ಹಿಂಗಾರು ಮಳೆಯ ತನಕವೂ ಉತ್ತಮ ಮಳೆಯಾಗಲೇ ಇಲ್ಲ. ಎಲ್ಲೋ ಕೆಲವೊಮ್ಮೆ ಮಳೆಯ ಸಿಂಚನವಾಗಿ ಆನಂತರ ಕೈಕೊಟ್ಟದ್ದೇ ಹೆಚ್ಚು. ಕಾಲ ಕಾಲಕ್ಕೆ ಮಳೆಯಾಗಿ ಉತ್ತಮ ವಾತಾವರಣ ಇದ್ದರೆ ಯಾವ ಸಮಸ್ಯೆಗಳೂ ಎದುರಾಗಲಾರವು. ಸಾಂದರ್ಭಿಕವಾಗಿ ಬಂದು ಹೋಗುವ ಕೆಲವು ರೋಗಗಳಿಗೆ ಜನ ಈಗಾಗಲೇ ಒಗ್ಗಿಕೊಂಡಿದ್ದಾರೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಉಂಟಾಗುತ್ತಿರುವ ರೋಗಬಾಧೆಗಳು ವಿಚಿತ್ರ ಅನುಭವ ಉಂಟು ಮಾಡುತ್ತಿವೆ.

ತುಂತುರು ಮಳೆ ಅಥವಾ ನಿರಂತರವಾಗಿ ವಾತಾವರಣ ತಂಪಾಗಿದ್ದರೆ ಮೋಡ ಮುಸುಕಿದ ವಾತಾವರಣದ ಪರಿಣಾಮ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಡನೋ ವೈರಸ್ ಪ್ರಕರಣಗಳು ಹೆಚ್ಚಾಗುತ್ತವೆ. ಬೆಂಗಳೂರಿನಲ್ಲಿ ಮಕ್ಕಳ ಸಮಸ್ಯೆಗಳು ಕಳೆದ 2-3 ತಿಂಗಳಿನಿಂದ ಹೆಚ್ಚುತ್ತಲೇ ಇವೆ.

ಡೇ ಕೇರ್ ಸೆಂಟರ್‌ಗಳು, ಶಾಲೆಗಳಲ್ಲಿ ಗುಂಪು ಗುಂಪಾಗಿ ಸೇರುವ ಕಡೆ ಈ ವೈರಸ್ ಸಾಮಾನ್ಯವಾಗಿ ಹರಡುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಶೀನಿದಾಗ ವೈರಸ್ ಹನಿಗಳು ಗಾಳಿಯಲ್ಲಿ ಹಾರಿ ಇತರರಿಗೆ ಹರಡುತ್ತದೆ. ಆ ಹನಿ ಯಾವುದೇ ವಸ್ತುವಿನ ಮೇಲೆ ಬಿದ್ದರೂ ಮತ್ತೊಬ್ಬರು ಆ ವಸ್ತುವನ್ನು ಮುಟ್ಟಿದಾಗ ಅವರ ಕೈಗಳಿಗೆ ವೈರಸ್ ತಗುಲುತ್ತದೆ. ಅದೇ ಕೈಗಳಿಂದ ಮುಖ, ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಂಡಾಗ ವೈರಸ್ ಸುಲಭವಾಗಿ ಹರಡುತ್ತವೆ.

ಚಳಿಗಾಲದ ಸಮಯದಲ್ಲಿ ಮಕ್ಕಳು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುವುದೇ ಈ ಕಾರಣಕ್ಕಾಗಿ. ವೈರಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ ಬಹುಬೇಗನೆ ಇತರರು ರೋಗಗಳಿಗೆ ತುತ್ತಾಗುತ್ತಾರೆ. ನಿರಂತರ ಕೆಮ್ಮು, ನೆಗಡಿ, ಶೀತ ಇರುವವರು ಪದೆ ಪದೆ ಕೆಮ್ಮಿಗೆ ಒಳಗಾಗುವವರು ಸಾಧ್ಯವಾದಷ್ಟು ಕೆಮ್ಮುವಾಗ, ಶೀನುವಾಗ ತಮ್ಮ ಬಳಿ ಕರವಸ್ತçಗಳನ್ನಿಟ್ಟುಕೊಳ್ಳುವುದು ಉತ್ತಮ ವಿಧಾನ ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ರೋಗಗಳನ್ನು ಹರಡುವುದನ್ನು ಕಡಿಮೆ ಮಾಡಬಹುದು. ಇಲ್ಲವಾದರೆ ವೈರಾಣುಗಳು ಗಾಳಿಯಲ್ಲಿ ಹಾರಿ ಇತರರಿಗೆ ಸೇರಿ ಅವರಿಗೂ ಆರಂಭಿಕ ಲಕ್ಷಣಗಳು ಶುರುವಾಗುತ್ತವೆ. ಗಂಟಲು ಕೆರೆತ, ಗಂಟಲು ನೋವು, ಶೀತದ ಜ್ವರ ಇವೆಲ್ಲವೂ ಆರಂಭವಾಗುತ್ತವೆ. ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ, ನ್ಯೂಮೋನಿಯಾ, ಗುಲಾಬಿ ಕಣ್ಣು ಕಂಡುಬರುವ ಸಾಧ್ಯತೆಗಳಿರುತ್ತವೆ.

Pragati TV Social Connect for more latest u

Leave a Reply

Your email address will not be published. Required fields are marked *