ಬೆಂಗಳೂರು: ಡಿಸಿಎಂ ಡಿಕೆಶಿ ಬಣ ದೆಹಲಿಗೆ ಭೇಟಿ ನೀಡಿರುವ ಹಿನ್ನಲೆ ಸಿದ್ದರಾಮಯ್ಯ ಅಪ್ತ ಬಣದಿಂದಲೂ ಪ್ರತಿತಂತ್ರ ರೆಡಿಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ನಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ದೆಹಲಿಗೆ ಹೋದ್ರೆ ಹೈಕಮಾಂಡ್ ಮನ್ನಣೆ ಕೊಡುವುದಿಲ್ಲ.
ಗುಂಪುಗಾರಿಕೆಗೆ ಪಕ್ಷದ ಹೈಕಮಾಂಡ್ ಪ್ರಾಮುಖ್ಯತೆ ನೀಡದ ಕಾರಣ, ಹೈಕಮಾಂಡ್ ನಾಯಕರಿಗೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸೋಣ. ಅವರೇ ಇಲ್ಲಿಗೆ ಬರುವಂತೆ ಮನವಿ ಮಾಡೋಣ ಎಂದು ಡಿನ್ನರ್ ಮೀಟಿಂಗ್ನಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಹೇಳಿದ್ದಾರೆ. ಪಕ್ಷದಲ್ಲಿರುವ ಗೊಂದಲಕ್ಕೆ ಹೈಕಮಾಂಡ್ ಶೀಘ್ರ ತೆರೆ ಎಳೆಯಬೇಕು. ಇಲ್ಲದಿದ್ರೆ ಪಕ್ಷಕ್ಕೆ ಇನ್ನಷ್ಟು ಡ್ಯಾಮೇಜ್ ಆಗುತ್ತೆ. ಇನ್ನೂ 6-7 ತಿಂಗಳು ಅಂತಾ ವಿಳಂಬ ಮಾಡಿದರೆ ಕಷ್ಟ. ಹೀಗಾಗಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಬೇಕೆಂದು ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
For More Updates Join our WhatsApp Group :




