ಅಂಕಣ || ರಾಜಕಾರಣ ಪ್ರಜಾಪ್ರಭುತ್ವ ಮತ್ತು ಚುನಾಯಿತ ನಿರಂಕುಶತ್ವ

ಡಾ. ಎಂ.ಎಸ್. ಮಣಿ

“ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬAತೆ ಭಾಸವಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ಹೊತ್ತಲ್ಲಿ ಹೇಳಿಕೆ ಕೊಟ್ಟಿದ್ದರು. ಇದರ ನಂತರ,“ಸ್ವಯA, ಅಭಿವೃದ್ಧಿಯ ಹಾದಿಯಲ್ಲಿ, ಒಬ್ಬ ವ್ಯಕ್ತಿಯು `ಸೂಪರ್ ಮ್ಯಾನ್’ ಆಗಲು ಬಯಸಬಹುದು. ನಂತರ. `ದೇವತೆ’ ಮತ್ತು `ಭಗವಾನ್’ ಮತ್ತು `ವಿಶ್ವರೂಪ’ ಆಗಲು ಹಾತೊರೆಯಬಹುದು. ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ. ಹೀಗಾಗಿ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲದ ಕಾರಣ ಜನರು ಮನಕುಲದ ಕಲ್ಯಾಣಕ್ಕಾಗಿ ಪಟ್ಟು ಬಿಡದೆ ಶ್ರಮಿಸಬೇಕೆಂದು” ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.

ಇವೆರೆಡು ಹೇಳಿಕೆಗಳನ್ನು ಸೂಕ್ಷö್ಮವಾಗಿ ಗಮನಿಸಿದಾಗ ನಮ್ಮ ದೇಶವನ್ನು ಘಾಸಿಗೊಳಿಸುತ್ತಿರುವ, ಅಪ್ಪಳಿಸುತ್ತಿರುವ `ಏಕವ್ಯಕ್ತಿ ಪ್ರದರ್ಶನ’ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಲ್ಲ ಎನಿಸುತ್ತದೆ. ಬಹುಶಃ ಇದನ್ನೇಳಲು ೨೦೨೪ರ `ಚುನಾವಣಾ ಫಲಿತಾಂಶ’ ಕಲಿಸಿದ ಪಾಠಗಳೇ ಕಾರಣವಾಗಿದೆ. ಇಷ್ಟಕ್ಕೂ, `ಬ್ರಾö್ಯಂಡ್ ಮೋದಿ’ ಅಂದುಕೊAಡಷ್ಟು ದೊಡ್ಡ ಗೆಲುವು ತಂದು ಕೊಟ್ಟಿಲ್ಲ. ಅವರ ಸುತ್ತ ಹರಡಿಕೊಂಡಿದ್ದ `ಮಾಯೆ `ಮತ್ತು `ಪ್ರಭಾವಳಿ `ಕುಸಿದಿದೆ.

ಇದು ಕಳೆದೊಂದು ದಶಕಗಳ ಕಾಲಅಪ್ಪಿಕೊಂಡು, ಒಪ್ಪಿಕೊಂಡಷ್ಟು ಈಗಿಲ್ಲಎಂಬುದನ್ನು ಅರಿಯುವ ಅಗತ್ಯವಿದೆ. `ಬ್ರಾö್ಯಂಡ್ ಮೋದಿ’ ಕುಸಿದಿದ್ದರಿಂದ `ಸಮಿಶ್ರ ರಾಜಕಾರಣ’ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೆ ನಿರ್ವಹಿಸುತ್ತಿದ್ದ `ಏಕಶೈಲಿ’ಯ ಕಾರ್ಯ ಚಟುವಟಿಕೆಗೆಭಾಜಪ ಅಂಕಿತ ಹಾಕಿಕೊಳ್ಳಬೇಕಿದೆ.

ಇದೀಗ `ಸಹಯೋಗ’, `ಸಮಾಲೋಚನೆ’,`ಸಂವಾದಕ್ಕೆ ಒತ್ತು ಕೊಡಬೇಕಿದೆ. ಒಬ್ಬ ಮನುಷ್ಯ, ಒಂದು ಧರ್ಮ,ಒಂದು ಸತ್ಯ, ಒಂದು ಚುನಾವಣೆ, ಎಂಬ `ಸೆಳೆತ’ವೂ ದೂರವಾಗಬೇಕಿದೆ. ಆದರೂ ಎರಡು ಬಾರಿ ಅಧಿಕಾರ ತಂದು ಕೊಟ್ಟವರೀಗ `ಭಾಜಪ’ಗೆ ಹೊರೆಯಾಗಿ ಬಿಟ್ಟರೇ ಎಂಬ ಪ್ರಶ್ನೆ ಕೌತುಕ ಮೂಡಿಸದೆ ಇರದು. ಇದರ ನಡುವೆಯೂ ೩ ನೇ ಅವಧಿಗೆ ಪ್ರಧಾನಿ ಪಟ್ಟ ಅಲಂಕರಿಸಿರುವ ನರೇಂದ್ರ ಮೋದಿ ಅವರನ್ನು `ಅಧ್ಯಕ್ಷೀಯ ಪ್ರಧಾನಿ’ ಎಂತಲೂ ಬಣ್ಣಿಸಬಹುದಾಗಿದೆ. ಕಾರಣ, ಇಡಿ ಸರ್ಕಾರ ಮತ್ತು ಭಾಜಪ ಅವರ `ಭುಜಬಲ’ ಅನ್ನುವುದಕ್ಕಿಂತ `ಬುದ್ಧಿ ಬಲದ’ ಮೇಲೆಯೇ ನಿಂತಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ.ಅವರ ಕೆಲಸಹಚರರಂತೂ `ಜೀವನ ಪೂರ್ತಿ ಪ್ರಧಾನಿ’ ಆಗಿರಬೇಕು. ಇಲ್ಲವೇ `ಜೀವನ ಪರ್ಯಂತ’ ದೇಶಕ್ಕೆ ಅಧ್ಯಕ್ಷರಾಗಲು, `ಅಧ್ಯಕ್ಷೀಯ ಸ್ವರೂಪದ ಸರ್ಕಾರ’ ಬರಬೇಕೆಂತಲೂ ಬಯಸುತ್ತಿದ್ದಾರೆ.

ಕಳೆದ ಮೂರು ಚುನಾವಣೆಗಳನ್ನು `ಮೋದಿ’,`ಮೋದಿ’ ಎಂದೇ ಅವರ ಹೆಸರಲ್ಲಿ `ಮತ’ಯಾಚಿಸಲಾಗಿದೆ. ಎನ್.ಡಿ.ಎ. ನೀಡಿದ್ದ ಭರವಸೆಗಳನ್ನು `ಮೋದಿ ಕಿ ಗ್ಯಾರಂಟಿ’ ಎಂದೇ ಬಿಂಬಿಸಲಾಗಿತ್ತು. ಜೊತೆಗೆ `ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಘೋಷವಾಕ್ಯವನ್ನು ಕೂಗಲಾಗಿತ್ತು. ಸರ್ಕಾರ ರಚನೆಯಾದ ನಂತರವೂ ಎನ್.ಡಿ.ಎ ಸರ್ಕಾರ ಅಥವಾ ಭಾಜಪ ಸರ್ಕಾರ ಎನ್ನುತ್ತಿಲ್ಲ. ಬದಲಿಗೆ `ಮೋದಿ ಸರ್ಕಾರ್’ ಎಂದೇ ಹೇಳಲಾಗುತ್ತಿದೆ.

ಒಂದAತೂ ಸತ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಎರಡು ಒಂದನ್ನೊAದು ಮೀರಿ ನಡೆಯಲು ಯತ್ನಿಸಿದವು. ಕಾಂಗ್ರೆಸ್ ಸೋಲಿನ ರುಚಿಯಲ್ಲೂ, ಗೆಲುವು ಕಂಡಿದೆ. ಭಾಜಪ ಗೆಲುವಿನ ನಗೆ ಬೀರಿದರೂ, ಸೋಲಿನ ಕಹಿ ರುಚಿ ಉಂಡಿದೆ. ಜನ ಅತ್ಯಂತ ಗಟ್ಟಿಯಾದ, ಸ್ಪಷ್ಟವಾದ ತೀರ್ಮಾನ ಮಾಡಿದ್ದಾರೆ. ಅದು ಬ್ರಾö್ಯಂಡ್ ಮೋದಿ ವಿರುದ್ಧ `ಜನಾದೇಶ’ ಕೊಟ್ಟಿದ್ದಾರೆ. ಇದೊಂತರ `ಮೋದಿ ಹಠವೋ’ ಎಂದು ರಾಜಕೀಯ ಪಕ್ಷಗಳು ವಿಶ್ಲೇಷಿಸಿವೆ.`ಮೋದಿ ಹೈ ತು ಮೌಂಕಿನ್ ಹೈ’ ಎಂಬ ಘೋಷಣೆ ಸ್ವತಃ ಮೋದಿಯವರನ್ನೇ ಕಾಡಿರಬಹುದು.

ಹೀಗಾಗಿ ಆರ್.ಎಸ್.ಎಸ್ ಮತ್ತು ಭಾಜಪ ನಾಯಕರು ಅಧಿಕಾರಕ್ಕಾಗಿ ಪರ್ಯಾಯ ನಾಯಕನ `ಅನ್ವೇಷಣೆ’ಯಲ್ಲಿರುವಂತಿದೆ. `ವ್ಯಕ್ತಿ ಪೂಜೆಯ ರಾಜಕಾರಣ’ದ ಪ್ರದರ್ಶನ ಮುಕ್ತಾಯದ ಹಂತ ತಲುಪಿದೆ. `ಬ್ರಾö್ಯಂಡ್ ಮೋದಿ’ ಎಂಬುದು ಮುಗಿದಂತಿದೆ. ಇದು ನಿಜಕ್ಕೂ ಮೋದಿ ಪಾಲಿಗೆ ಬಹುದೊಡ್ಡ ಹೊಡೆತ. ಜನ ನಾವುಗಳು ಮೋದಿಯಿಂದ ದೂರ ಸರಿದಿದ್ದೇವೆ ಎಂಬುದನ್ನು ಸಾರಿದಂತಿದೆ. ಇದರಿಂದಾಗಿಯೇ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೂ `ಮೈತ್ರಿ’ ಎಂಬ `ಊರುಗೋಲಿನ’ ಮೇಲೆ ನಿಲ್ಲಬೇಕಿದೆ. ಆದರೆ ಮೈತ್ರಿದಾರರು ಸದಾ ಕಾಲ ನರೇಂದ್ರ ಮೋದಿಯವರೊಂದಿಗೆ ನಿಲ್ಲುತ್ತಾರೆಂಬುದೇ ಅನುಮಾನವೆಂದು ಸಾಮಾಜಿಕ ಜಾಲತಾಣಗಳು ಸಾರಿ, ಸಾರಿ ಹೇಳುತ್ತಿವೆ. ನೆನಪಿಟ್ಟುಕೊಳ್ಳಿ, ಯಾವುದೇ ಕಾರಣಕ್ಕೂ ನಮ್ಮ `ಮತದಾರ’ರನ್ನು ಹಗುರವಾಗಿ ಗಣನೆಗೆ ತೆಗೆದುಕೊಳ್ಳುವಂತಿಲ್ಲ.

ಹಿAದೆಯೂ ಇದೇ ರೀತಿ ಹಲವು ಸಲ `ಮತದಾನದ ಹಕ್ಕು’ ಮೂಲಕ ರಾಜಕೀಯ ಪ್ರಬುದ್ಧತೆಯನ್ನು ಮತದಾರರು ಮೆರೆದಿದ್ದು ಇದೆ. ಕಬ್ಬಿಣದ ಮಹಿಳೆ ಇಂದಿರಗಾAಧಿಯವರು ತುರ್ತು ಪರಿಸ್ಥಿತಿ ಹೇರಿದ್ದರಿಂದ ಅಧಿಕಾರ ಕಳೆದುಕೊಂಡರು. ಜೊತೆಗೆ ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲೂ ಸೋಲಿನ ರುಚಿ ಅನುಭವಿಸಿದ್ದರು. ಇದಕ್ಕೆ ಹಲವು ಪಟ್ಟ ಭದ್ರ ಹಿತಾಸಕ್ತಿ ಗಳು ಕಾರಣವಾಗಿದ್ದವು. ಇದಾಗಿ ಮೂರು ವರ್ಷಕ್ಕೆ ಮತ್ತೆ ಇಂದಿರಮ್ಮ ಅಧಿಕಾರದ ದಂಡ ಹಿಡಿದರು.ಇರಲಿ, ಮತದಾರರು ಕೆಲವೊಮ್ಮೆ `ಜಾತ್ಯತೀತತೆ’ಯಿಂದ ದೂರ ಉಳಿದಿದ್ದು ಇದೆ. ಜೊತೆಗೆ ಇದರ ಮಹತ್ವ ಅರಿತು `ಧರ್ಮ’ವನ್ನು ರಾಜಕೀಯದೊಂದಿಗೆ ಬೆರೆಸುವುದರ ವಿರುದ್ಧ ನಿಂತಿದ್ದು ಇದೆ.

೨೦೨೪ರ ಚುನಾವಣೆಯಲ್ಲಿ ಭಾಜಪ `ಧರ್ಮ’ ಸೇರಿದಂತೆ ಇತರೆ ಭಾವನಾತ್ಮಕ ವಿಚಾರಗಳ ಮೇಲೆಯೇ ಗಮನ ಕೊಟ್ಟಿತ್ತು. ಜನರನ್ನು ಕಾಡುತ್ತಿದ್ದ `ನಿರುದ್ಯೋಗ’,`ರೈತರ ಸಮಸ್ಯೆ’, `ಹಣದುಬ್ಬರ’ಗಳಂತಹಸಮಸ್ಯೆಗಳ ಬಗ್ಗೆ ಚರ್ಚಿಸಲೇ ಇಲ್ಲ. `ಹಿಂದುತ್ವ’ದ ಅಜೆಂಡಾ ಹೊತ್ತು ಹುಟ್ಟಿದ ಭಾಜಪಗೆ ರಾಮ ಮಂದಿರ ನಿರ್ಮಾಣ ರಾಷ್ಟಿçÃಯ ವಿಷಯವಾಗಿತ್ತು. ರಾಮ ಮಂದಿರ `ಬಹುಮತ’ ತಂದು ಕೊಡುತ್ತದೆಎಂಬ ಬಲವಾದ ನಂಬಿಕೆ `ಭಾಜಪ’ಗಿತ್ತು. ಹಿಂದೆ `ಹಿಂದುತ್ವದ ಅಜೆಂಡಾ’ ದೊಡ್ಡ ಸಂಖ್ಯೆಯ ಮತದಾರರನ್ನು ಸೆಳೆದಿತ್ತು. ಅದೀಗ `ಆಬ್ ಕಿ ಬಾರ್’ ಆಗಲೇ ಇಲ್ಲ. ಹೀಗಾಗಿ, ಸರ್ಕಾರ ೩ನೇ ಅವದಿಗೆ ದುರ್ಬಲವಾದಂತಿದೆ. ಅಂದರೆ ಜಾರುವ ನೆಲದ ಮೇಲೆ ನಿಂತಿರುವAತಿದೆ. ಆದರೂ ಮುನ್ನೆಡೆಸಲು `ಬ್ರಾö್ಯಂಡ್ ಮೋದಿ’ ಬೇಕಿದೆ.

ಅಂದ ಹಾಗೆ ಸರ್ಕಾರ ಐದು ವರ್ಷ ಖಂಡಿತವಾಗಿ `ಸುಭದ್ರ’ ಎಂದು ಹೇಳಲು ಸಾಧ್ಯವಿಲ್ಲ. ಮೈತ್ರಿ ಪಕ್ಷ ತನ್ನ ಬೆಂಬಲ ಹಿಂತೆಗೆದುಕೊAಡು ಹೊರ ನಡೆದರೆ `ಅಗ್ನಿಪರೀಕ್ಷೆ’ ಎದುರಿಸಬೇಕಾಗುತ್ತದೆ. ಇದೇನೆ ಇರಲಿ,ಹಿಂದೊಮ್ಮೆ ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಅನಿಲ್ ಸ್ವರೂಪ್ ಹೇಳಿದ ಮಾತುಗಳು ಚಿಂತೆಯತ್ತ ದೂಡುತ್ತವೆ. ಸಚಿವ ಸಂಪುಟ ಸಭೆಗಳಲ್ಲಿ ನರೇಂದ್ರ ಮೋದಿಯವರಿಗೆ ಎದುರಾಗಿ ಇಬ್ಬರು ಮಾತ್ರ `ಅಭಿಪ್ರಾಯ’ ಭೇದಗಳನ್ನು ವ್ಯಕ್ತಪಡಿಸುತ್ತಿದ್ದರಂತೆ. ಅವರಲ್ಲಿ ಅರುಣ್ ಜೆಟ್ಲಿ ಅವರಿಲ್ಲ. ಮತ್ತೊಬ್ಬ ಸಚಿವ ನಿತಿನ್ ಗಡ್ಕರಿ ಅವರನ್ನು `ರಬ್ಬರ್ ಸ್ಟಾಪ್’ನಂತೆ ಕೂರಿಸಲಾಗಿದೆ. ಅಂದರೆ `ಏಕವ್ಯಕ್ತಿ ಪ್ರದರ್ಶನ’ ಇದ್ದಂತೆ. ಇಲ್ಲಿ `ವಿರೋಧ’ ಅಥವಾ `ಭಿನ್ನದ್ವನಿ’ಗೆ ಆಸ್ಪದವೇ ಇರುವುದಿಲ್ಲವೇ? ಇವರು ತಪ್ಪು ನಿರ್ಣಯ ತೆಗೆದುಕೊಂಡರೂಅದು ತಪ್ಪಾಗಿರುವುದಿಲ್ಲ. ಉದಾಹರಣೆಗೆ, `ನೋಟು ರದ್ದತಿ `ಇರಬಹುದು. `ಚುನಾವಣಾ ಬಾಂಡ್’ಗಳ ಅಸಂವಿಧಾನಿಕತೆ ಇರಬಹುದು. ಅಂದರೆ `ದೊಡ್ಡವರು’ ಮುಟ್ಟಿದ್ದೆಲ್ಲವೂ ಚಿನ್ನ ಎಂಬAತಿತ್ತು.

ಆದರೂ, ಮುಕ್ತ ಪತ್ರಿಕೋದ್ಯಮದಿಂದ ಇವರು ಮಾತ್ರ ದೂರ ಇದ್ದಾರೆ. ಪತ್ರಿಕಾಗೋಷ್ಠಿಯ ಮೂಲಕ `ಕಿರಿಕಿರಿ’ ಉಂಟು ಮಾಡುವ ಪ್ರಶ್ನೆಗಳು ತೂರಿ ಬರುವ ಕಾರಣಕ್ಕೆ ಮಾರು ದೂರ ಇರುತ್ತಾರಂತೆ.ಪ್ರಶ್ನಿಸಿದರೆ ಪತ್ರಕರ್ತರು `ಪೂರ್ವಾಗ್ರಹ’ ಪೀಡಿತರಾಗಿದ್ದಾರೆ. ವೈಯಕ್ತಿಕ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ನಾನು ಯಾವುದೇ ಸುದ್ದಿಗೋಷ್ಠಿಯನ್ನು ನಡೆಸುವುದಿಲ್ಲ ಎನ್ನುತ್ತಾರೆ.

ಈ ಹಿಂದೆ ಯಾವ ಲೇಖನ, ವರದಿ ಯಾರು ಬರೆಯುತ್ತಾರೆಂಬುದು ಗೊತ್ತಾಗುತ್ತಿರಲಿಲ್ಲ. ಇತ್ತೀಚಿಗೆ ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಧ್ಯಮ ಇಂದು ತಟಸ್ಥವಾಗಿ ಉಳಿದಿಲ್ಲ. ಜನರಿಗೆ ಪತ್ರಕರ್ತರ `ನಂಬಿಕೆ’ ಮತ್ತು `ಆದ್ಯತೆ’ಗಳೊಂದಿಗೆ ಗುರುತಿಸಿಕೊಂಡಿದ್ದಾರೆ.

ಮಾಧ್ಯಮ ಇಂದು ತಟಸ್ಥವಾಗಿ ಉಳಿದಿಲ್ಲ. ಜನರಿಗೆ ಪತ್ರಕರ್ತರ `ನಂಬಿಕೆ’ ಮತ್ತು `ಆದ್ಯತೆ’ಗಳೇನು ಎಂಬುದು ತಿಳಿದಿದೆ. ಜೊತೆಗೆ ಅವರ ಮುಖಪರಿಚಯವೂ ಗೊತ್ತಾಗಿದೆ. ಯಾರು ಬರೆಯುತ್ತಾರೆ. ಅವರ ಆದ್ಯತೆಗಳೇನು ಎಂಬುದು ತಿಳಿದಿದೆ ಎನ್ನುತ್ತಿದ್ದಾರೆ. ಹಾಗೆಯೇ ದೇವರು ನನ್ನನ್ನು ಮಹತ್ಕಾರ್ಯ ಒಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ. ಒಮ್ಮೆ ದೇವರ ಉದ್ದೇಶ ಈಡೇರಿತೆಂದರೆ ನನ್ನ ಕೆಲಸ ಮುಗಿಯಿತು ಎಂದರ್ಥ. ಅದಕ್ಕಾಗಿಯೇ ನಾನು ಸಂಪೂರ್ಣವಾಗಿ ದೇವರಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ದೇವರು ನನ್ನ ಬಳಿ ಬಹಳ ಕೆಲಸ ಮಾಡಿಸುತ್ತಿದ್ದಾನೆ. ಆದರೆ ತನ್ನ ಮುಂದಿನ ಗುರಿ ಏನು ಎಂಬ ಸುಳಿವು ಬಿಟ್ಟುಕೊಡುವುದಿಲ್ಲ. ಅಲ್ಲದೇ ನನ್ನ ಮುಂದಿನ ಕೆಲಸ ಏನೆಂದು ನಾವು ಆತನನ್ನು ಕೇಳಲು ಸಾಧ್ಯವಿಲ್ಲವೆಂದು ನುಡಿದಿದ್ದಾರೆ. ಗಂಗಾಮಾತೆ ನನ್ನನ್ನುದತ್ತು ತೆಗೆದುಕೊಂಡಿದ್ದಾರೆAದು ಘೋಷಿಸಿಕೊಂಡಿದ್ದರು.

ಹೀಗೆಳುವ ಮೂಲಕ `ಹಿಂದೂ ರಾಷ್ಟç’ದ ಕನಸು ಹೊತ್ತಿದ್ದ ಕನಸುಗಾರರಿಗೆ ಅಯೋಧ್ಯೆಯ ರಾಮನಿರುವ ಫೈಜಾಬಾದ್ ಕ್ಷೇತ್ರದಲ್ಲಿಯೇ ಹಿನ್ನೆಡೆಯಾಗಿದೆ. ರಾಮಮಂದಿರ ಸಮಸ್ತ ಹಿಂದೂಗಳ `ಭಕ್ತಿ ಕೇಂದ್ರ’ ಎಂಬAತೆ ಬಿಂಬಿಸಲಾಗಿತ್ತು.`ಭಗವಾನ್ ರಾಮ’ನನ್ನು ಭೂಮಿಗೆ ತಂದ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂಬ ಘೋಷಣೆಗಳು ಹೊರಬಿದ್ದಿದ್ದವು. `ರಾಮಪಟ’ ಇರುವ ಕೇಸರಿ ಧ್ವಜ, ಟೀ ಶರ್ಟುಗಳು ಹರಿದಾಡಿದ್ದವು. ಆದರೂ ೩೭೦ ರ ಕನಸು ವಿಫಲವಾಗಿದೆ. ಇನ್ನೂ ಎಲ್ಲರೂ ನಿರೀಕ್ಷೆ ಹೊತ್ತಿದ್ದ ಎಕ್ಸಿಟ್ ಪೋಲ್ ಸೃಷ್ಟಿಸಿದ್ದ ಭ್ರಮೆಯೂ ಕರಗಿ ಹೋಗಿದೆ. ಮೊದಲ ಮೂರು ಸುತ್ತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಭ್ಯರ್ಥಿಗಿಂತ ಹಿಂದೆ ಬಿದ್ದಿದ್ದರು. ರಾಹುಲ್ ಗಾಂಧಿಯವರ ಆಪ್ತ ಸಹಾಯಕ ಕೇಂದ್ರ ಸಚಿವೆ ಆಗಿದ್ದ ಸ್ಮöÈತಿ ಇರಾನಿಗೆ ಸೋಲಿನ ರುಚಿ ತೋರಿಸಿಕೊಟ್ಟಿದ್ದರು. ಇದಕ್ಕೆ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿಯವರ ಮುಂದಾಲೋಚನೆಯೇ ಕಾರಣವಾಗಿದೆ.

ಅಲ್ಲದೆ ಭಾಜಪ ಮಹಾರಾಷ್ಟçದಲ್ಲಿ ಶಿವಸೇನೆಯನ್ನು ಒಡೆದಿತ್ತು. ಭಾರತೀಯ ರಾಷ್ಟಿçÃಯ ಕಾಂಗ್ರೆಸ್‌ನ್ನು ತಂತ್ರದಿAದ ಅಧಿಕಾರ ಶೂನ್ಯಗೊಳಿಸಿತ್ತು. ಇವು ಮಹಾರಾಷ್ಟçದಲ್ಲಿ ಪರಿಣಾಮ ಬೀರಿತು.ಇನ್ನೂ ತಮಿಳುನಾಡಿನಲ್ಲಿ ಡಿಎಂಕೆ ಪೆರಿಯಾರ್ ಅವರ ನಂಬಿಕೆ ಉಳಿಸಿಕೊಂಡಿತು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕೂಡ ಜನರಿಗೆ ಕೊಟ್ಟ ಭರವಸೆ ಕಾಪಾಡಿಕೊಂಡಿತು. ಕೇರಳದಲ್ಲಿ ಕಾಂಗ್ರೆಸ್ ಸುರಕ್ಷಿತವಾಗಿತ್ತು. ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ಕಾಂಗ್ರೆಸ್ಸನ್ನು ಕೈಡಿಯಲಿಲ್ಲ. ಕರ್ನಾಟಕ ಸ್ವಲ್ಪ ಮಟ್ಟಿಗೆ, ದೆಹಲಿ ಮತ್ತು ಮಧ್ಯಪ್ರದೇಶ ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಕೈಕೊಟ್ಟಿದೆ. ಒಡಿಶಾದಲ್ಲಿ ಬಿಜು ಜನತಾದಳಪತನಗೊಂಡಿದ್ದು, ಕಮಲ ಅರಳಿದು ಅಚ್ಚರಿ ಎನಿಸುತ್ತದೆ. ಭಾಜಪ ಸ್ಥಿತಿ ಮತ್ತು ಇಂಡಿಯಾ ಒಕ್ಕೂಟದ ಚೇತರಿಕೆ ಕಂಡು ಜನರಿಗೆ ನಂಬಲೇ ಆಗಿರಲಿಲ್ಲ. ಇದರಿಂದಾಗಿಯೇ ಮಾಧ್ಯಮಗಳು ಸೃಷ್ಟಿಸಿದ `ಪ್ರಭಾವಳಿ’ ಸುಳ್ಳೆಂಬುದುಜನರಿಗೆ ಅರಿವಾಯಿತು. ಹಿಂದೂ ಸಾಮ್ರಾಟನ `ದಿಗ್ವಿಜಯ’ ಎಂಬೆಲ್ಲಕಾರ್ಯಕ್ರಮಗಳು ಮೋಜಿನಂತಾಗಿ ಬಿಟ್ಟವು. ಮತದಾರರಿಲ್ಲಿಯಾರೂ `ಅಜೇಯ’ರಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೇಶದ ಉದ್ದಗಲ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕ ಇಲ್ಲವೇ ಇಲ್ಲ ಎನ್ನುವಾಗ ವಾರಣಾಸಿಯ ಗೆಲುವು ಆಶ್ಚರ್ಯ ತಂದು ಕೊಟ್ಟಿದೆ. ಜನಪ್ರಿಯತೆಗೆ ತಕ್ಕ ಗೆಲುವಿನ ಅಂತರ ಸಿಕ್ಕಿರುವುದಿಲ್ಲ. ಅಲ್ಲದೆ, `ಜನಾದೇಶ’ ಕೂಡ ನರೇಂದ್ರ ಮೋದಿಯವರ ಪರವಾಗಿ ದೊಡ್ಡದಾಗಿ ಸಿಕ್ಕಿರುವುದಿಲ್ಲ. `ಚುನಾವಣೆ’ ಪೂರ್ತಿ ಪಕ್ಷದ ಮೇಲೆ ನಡೆದಿಲ್ಲ. ಬದಲಿಗೆ ನರೇಂದ್ರ ಮೋದಿಯವರ ನಾಮ ಬಲದ ಮೇಲೆ ನಡೆದಿತ್ತು.

ಹೀಗಿರುವಾಗ ದೇಶವಾಸಿಗಳ ಮನಸ್ಥಿತಿಯನ್ನು ನರೇಂದ್ರ ಮೋದಿಯವರು ಗೌರವಿಸುತ್ತಾರೆಂಬ ಊಹಾಪೋಹಗಳು ಇದ್ದವು. ಅಂತಹ ನೈತಿಕತೆಯಾಗಲಿ, ಮುತ್ಸದಿತನವಾಗಲಿ ಪ್ರದರ್ಶನವಾಗಲಿಲ್ಲ. ಇದೇನೇ ಇದ್ದರೂ, ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿಯಾಗಿದೆ. ಅದು ಭಾಜಪದ ಪೂರ್ಣ ಬಹುಮತದಿಂದಲ್ಲ. ಪ್ರಜಾಸತ್ತಾತ್ಮಕ ಒಕ್ಕೂಟದ ಪಾಲುದಾರರನ್ನು, ಅದರಲ್ಲೂ ತೆಲುಗು ದೇಶಂ ಮತ್ತು ಜನತಾದಳ ಯುನೈಟೆಡ್‌ನ ಬೆಂಬಲವನ್ನು ಅವಲಂಬಿಸಿದ್ದಾರೆ. ೧೯೯೯ರಿಂದ ಎರಡು ದಶಕಗಳ ಕಾಲ ನಮ್ಮ ದೇಶದಲ್ಲಿ `ಸಮ್ಮಿಶ್ರ ರಾಜಕಾರಣ’ ಅಸ್ಥಿರತೆಯನ್ನು ಕಂಡಿದೆ. ಒಂದು ಪಕ್ಷ `ಸಮ್ಮಿಶ್ರ ರಾಜಕಾರಣ’ ವನ್ನು ನಿಯಂತ್ರಿಸಲು ಆಗುವುದಿಲ್ಲ.

ಒಂದು ಪಕ್ಷ ಸ್ಪಷ್ಟ’ ಬಹುಮತ’ ಹೊಂದಿದ್ದರೆ ಮಾತ್ರ ಇಚ್ಛೆ ಬಂದAತೆ ಆಡಳಿತ ನಡೆಸಬಹುದಾಗಿದೆ. `ಸಮ್ಮಿಶ್ರ ರಾಜಕಾರಣ’ದಲ್ಲಿ ಮಿತಿಗಳಿರುತ್ತವೆ. ಹೀಗಾಗಿ `ಸಮಿಶ್ರ ರಾಜಕಾರಣ’ದಲ್ಲಿ ಪಾಲುದಾರ ಪಕ್ಷಗಳು ಒಗ್ಗೂಡಿ `ಸಾಮಾನ್ಯ ವಿಶಿಷ್ಟ ಕಾರ್ಯಕ್ರಮ’ಗಳನ್ನು ರೂಪಿಸಿಕೊಳ್ಳುತ್ತವೆ. ೨೦೦೪ ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ `ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರೂಪಿಸಿಕೊಂಡಿದ್ದವು. ಇದರಲ್ಲಿ `ಸಾಮಾಜಿಕ ಸಾಮರಸ್ಯ’ವನ್ನು ಸಂರಕ್ಷಿಸುವ, `ಉತ್ತೇಜಿಸುವ’, `ಆರ್ಥಿಕ ಬೆಳವಣಿಗೆ’ಯನ್ನು ವೃದ್ಧಿಸಿಕೊಳ್ಳುವ, `ಅಸಂಘಟಿತ ವಲಯದಲ್ಲಿರುವ ರೈತರ’, `ಕೃಷಿ ಕಾರ್ಮಿಕರ’,`ಕಾರ್ಮಿಕರ ಕಲ್ಯಾಣ’ವನ್ನು ಉತ್ತಮಗೊಳಿಸುವುದು ಸೇರಿತ್ತು. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ, ಮಹಿಳೆಯರ,ಹಿಂದುಳಿದವರ, ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುವ ಉದ್ದೇಶವನ್ನು ಹೊಂದಲಾಗಿತ್ತು.

ಇದೇನೆ ಇರಲಿ, ಒಂದು `ಆರಾಧನೆ ವ್ಯಕ್ತಿತ್ವ’ದ ರಾಜಕೀಯ ಪ್ರಭಾವಳಿ ಕುಸಿಯುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಲಕ್ಷಣ. ಅದು ಕುಸಿಯದೇ ಇದ್ದಲ್ಲಿ `ರಾಜಕಾರಣ ಪ್ರಜಾಪ್ರಭುತ್ವ’, `ಚುನಾಯಿತ ನಿರಂಕುಶತ್ವ’ದೆಡೆಗೆ ಸಾಗಿಬಿಡುತ್ತದೆ. ಆಗ `ಚುನಾಯಿತ ಸರ್ವಾಧಿಕಾರಿ’ ಸಂಸತ್ತಿಗಾಗಲಿ ಅಥವಾ ಜನರಿಗಾಗಲಿ `ಉತ್ತರದಾಯಿತ್ವ’ ಆಗಲು ಸಾಧ್ಯವಿಲ್ಲ. ಇಂತಹವನ್ನು ನೋಟು ಅಮಾನ್ಯೀಕರಣ ಮತ್ತು ಲಾಕ್‌ಡೌನ್ ಹೇರಿದ್ದರ ಮೂಲಕ ಕಾಣಬಹುದಾಗಿದೆ. `ವ್ಯಕ್ತಿತ್ವ ರಾಜಕಾರಣ `ಯಾವುದೇ ಕಾರಣಕ್ಕೂ ವರ್ಗಾವಣೆಯಾಗುವುದಿಲ್ಲ. `ಆರಾಧನಾ ವ್ಯಕ್ತಿ’ಯ ಪತನದ ನಂತರ, ಅವನ ಅಂಗಿ ಮತ್ತೊಬ್ಬರಿಗೆ ಸರಿಹೊಂದುವುದಿಲ್ಲ.

ಸದ್ಯ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದೆ. ಅವರ ಸ್ಥಳದಲ್ಲಿ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ,ವಿ. ಸೋಮಣ್ಣ, ಯತ್ನಾಳ್,ಆರ್. ಅಶೋಕ್ ಅವರಂತಹ ಮತ್ತೊಬ್ಬರನ್ನು ತರುವ ಜವಾಬ್ದಾರಿ ಭಾಜಪ ಮತ್ತು ಆರ್‌ಎಸ್‌ಎಸ್ ನಾಯಕರ ಮೇಲಿದೆ. ಚಂದ್ರ ಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ವೃತ್ತಿಪರ ರಾಜಕಾರಣಿಗಳು. ಹಾಗೆಯೇ ನುರಿತ ಆಡಳಿತಗಾರರು ಕೂಡ ಆಗಿರುವರು. ಕಳೆದೊಂದು ದಶಕದಿಂದ ಆನೆ ನಡೆದಿದ್ದೇ ದಾರಿ ಎಂಬAತೆ ಸಾಗಿದ್ದ ಪ್ರಧಾನಿಯವರು ನಿರ್ಣಯಗಳನ್ನು ಒಬ್ಬರೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ನಿರ್ಣಯಗಳಿಗೂ ಇವರಿಬ್ಬರ ಸಹಮತದ ಮುದ್ರೆ ಇರಲೇಬೇಕು. ಹಿಂದೆ ಕೊಟ್ಟಂತೆ ಭರಪೂರ ಜಾಹೀರಾತುಗಳನ್ನು ಕೊಡಬೇಕಾದರೂ ಎನ್.ಡಿ.ಎ. ಪಾಲುದಾರ ಪಕ್ಷಗಳ ಕಡೆಗೆ ನೋಡಬೇಕಾಗುತ್ತದೆ. ಸಂಪುಟ ಸಭೆಗಳಲ್ಲಿಯೂ ಪಾಲುದಾರ ಪಕ್ಷ ಪ್ರತಿನಿಧಿಸುವ ಸಚಿವರುಗಳು ತಮ್ಮ ಅಭಿಪ್ರಾಯಗಳನ್ನು ಹೇರದೆ ಇರಲಾರರು.

ಜನರಿಗೆ `ಗುಜರಾತ್ ಮಾದರಿ’ ಬೇಸರ ತರಿಸಿದೆ. ಗುಜರಾತ್ ಮಾದರಿ `ಅಂಬಾನಿ’, `ಅದಾನಿ’ಯನ್ನು ಹುಟ್ಟು ಹಾಕಿದೆ. ಇನ್ನೇನೂ ಸುಧಾರಿಸಲಿಲ್ಲ ಎಂದರಿತ್ತಿದ್ದಾರೆ. `ಭಯ’ ಮತ್ತು `ದ್ವೇಷ’ ಬಿತ್ತುತ್ತಿದ್ದವರಿಗೆ ಚುನಾವಣೆ ಪಾಠ ಕಲಿಸಿದೆ. ಕಳೆದ ಹತ್ತು ವರ್ಷ ಪ್ರಬಲ ವಿರೋಧ ಪಕ್ಷ ಇರಲಿಲ್ಲ. ಆದರೀಗ ಅಧಿಕೃತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ. ಮತದಾರ ಮುಂದೆ ಮತ್ತಷ್ಟು ಪಾಠ ಕಲಿಸುವ ಸಾಧ್ಯತೆಗಳೂ ಇವೆ. ಹಾಗಂತ ನರೇಂದ್ರ ಮೋದಿ ಸರ್ಕಾರ ಶೂನ್ಯ ಸಾಧನೆ ಮಾಡಿದೆ ಎಂದೇಳುತ್ತಿಲ್ಲ, ನರೇಗಾ, ಆಧಾರ್, ಮಾಹಿತಿ ಹಕ್ಕು, ಕಡ್ಡಾಯ ಶಿಕ್ಷಣ ಹಕ್ಕಿನಂತಹ ಜನೋಪಯೋಗಿ `ಕಾಯ್ದೆ’ಗಳನ್ನು ಜಾರಿಗೆ ತರಲೆಂಬ ಆಶಯವಿದೆ. ಇರಲಿ, ೧೦ ವರ್ಷ ಆನೆ ನಡೆದಿದ್ದೇ ದಾರಿ ಎಂಬAತೆ ಆಡಳಿತ ನಡೆಸಿದವರಿಗೆ ಮೈತ್ರಿ ಒಕ್ಕೂಟದಲ್ಲಿ ಪಾಲುದಾರರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವೇ? ಭವಿಷ್ಯದಲ್ಲಿ ಹೊಸ ಪ್ರಧಾನಿಯನ್ನು ಕಾಣುವ ಸಂಭಾವ್ಯತೆ ಇದೆಯೇ? ಇದಕ್ಕೆಲ್ಲವೂ ಕಾಲ ಮಾತ್ರ ಉತ್ತರ ಕೊಡಬೇಕಿದೆ.

Leave a Reply

Your email address will not be published. Required fields are marked *