ಸೆ.19 ರಿಂದ 30ರ ತನಕ ಬೆಂಗಳೂರು ಮತ್ತು ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ!

ಸೆ.19 ರಿಂದ 30ರ ತನಕ ಬೆಂಗಳೂರು ಮತ್ತು ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ!

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 19ರಿಂದ 30ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಅನುಭವಿಸಬೇಕಾಗುತ್ತದೆ ಎಂದು ಬೆಸ್ಕಾಂ ಅಧಿಕೃತ ಪ್ರಕಟಣೆ ತಿಳಿಸಿದೆ. ವಿದ್ಯುತ್ ಕಡಿತಕ್ಕೆ ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತುಅಟಲ್ ಭೂಜಲ್ಯೋಜನೆ ಅಡಿಯಲ್ಲಿ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾರ್ಯಗಳು ಕಾರಣವಾಗಿದೆ.

ಯಾವ ಯಾವ ದಿನಗಳಲ್ಲಿ, ಎಲ್ಲಿ ಎಲ್ಲಿ ವಿದ್ಯುತ್ ವ್ಯತ್ಯಯ?

ಬೆಂಗಳೂರಿನ ಬೆಸ್ಕಾಂ ವ್ಯಾಪ್ತಿಯಲ್ಲಿ (ಸೆ.19–21):

ಸರ್ಜಾಪುರಅತ್ತಿಬೆಲೆ 66 ಕೆವಿ ಲೈನ್ ನ ನವೀಕರಣದ ಹಿನ್ನಲೆಯಲ್ಲಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ:

 ಅತ್ತಿಬೆಲೆ ಉಪಕೇಂದ್ರ ವ್ಯಾಪ್ತಿ:
ಯಡವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಪಟ್ಟಣ, ಮಾಯಸಂದ್ರ, ದಾಸನಪುರ, ಬಲ್ಲೂರು, ಕಂಬಳಿಪುರ, ಚಿಕ್ಕನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ.

 ಆನೇಕಲ್ ಉಪಕೇಂದ್ರ ವ್ಯಾಪ್ತಿ:
ಆನೇಕಲ್ ಟೌನ್, ಕಾವಲುಹೊಸಹಳ್ಳಿ, ಗೌರೇನಹಳ್ಳಿ, ಹಲ್ದೇನಹಳ್ಳಿ, ಹೊಂಪಲಗಟ್ಟಾ, ಚೌಡೇನಹಳ್ಳಿ, ಹೊನ್ನಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ.

ಸಮಂದೂರು ಉಪಕೇಂದ್ರ ವ್ಯಾಪ್ತಿ:
ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗರಹಳ್ಳಿ, ವನಕನಹಳ್ಳಿ.

ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ (ಅಟಲ್ ಭೂಜಲ್ ಯೋಜನೆಯಡಿ):

 ಸೆ.20, 22, 24, 26, 28, 30 ರಂದು ವಿದ್ಯುತ್ ಕಡಿತವಾಗುವ ಪ್ರದೇಶಗಳು:
ಹನುಮಂತಪುರ, ಜಗನ್ನಾಥಪುರ, ಅಣ್ಣೆತೋಟ, ಅಗ್ನಿಬನಿರಾಯನಗರ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ, ಬಿಎ ಗುಡಿಪಾಳ್ಯ.

 ಸೆ.19, 21, 23, 25, 27, 29 ರಂದು ವಿದ್ಯುತ್ ಕಡಿತವಾಗುವ ಪ್ರದೇಶಗಳು:
ಬಿಹೆಚ್ ಪಾಳ್ಯ, ದಿಬ್ಬೂರು, ಗುಬ್ಬಿ ಗೇಟ್, ಹೊಸಹಳ್ಳಿ, ಹಾರೋನಹಳ್ಳಿ, ರಿಂಗ್ ರಸ್ತೆ, ಹೆಬ್ಬಾಕ, ಹೊನ್ನೇನಹಳ್ಳಿ, ಡಿಎಮ್ ಪಾಳ್ಯ, ಕಪ್ಪೂರು, ನರಸಾಪುರ, ಪಿಎನ್ಆರ್ ಪಾಳ್ಯ, ಭಜಂತ್ರಿ ಪಾಳ್ಯ, ಕೆಜಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಸಾರ್ವಜನಿಕರಿಗೆ ಸೂಚನೆ:

  • ಈ ದಿನಗಳಲ್ಲಿ ಅಗತ್ಯವಿರುವ ವಿದ್ಯುತ್ ಕಾರ್ಯಗಳನ್ನು ಮುಂಚಿತವಾಗಿ ಪೂರೈಸಿಕೊಳ್ಳಿ.
  • ಜನರ ಸಹಕಾರಕ್ಕೆ ಬೆಸ್ಕಾಂ ಮನವಿ ಮಾಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *