Corporate ಇನ್ಷೂರೆನ್ಸ್ ಸಾಕಾಗದು!

Corporate ಇನ್ಷೂರೆನ್ಸ್ ಸಾಕಾಗದು!

ನಿತಿನ್ ಕಾಮತ್ ಸಲಹೆ: ಪರ್ಸನಲ್ ಪಾಲಿಸಿಯನ್ನೂ ಹೊಂದಿ.

ಬೆಂಗಳೂರು : ಇವತ್ತು ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ಒದಗಿಸುತ್ತವೆ. ಈ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಬಳಿ ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ಇದೆ ಎಂದು ಹೇಳಿ ವೈಯಕ್ತಿಕ ಇನ್ಷೂರೆನ್ಸ್ ಪಾಲಿಸಿ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು ಎಂದು ಬಹಳ ಹಣಕಾಸು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅನಿಸಿಕೆಗೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ಧ್ವನಿಗೂಡಿಸಿದ್ದಾರೆ.

‘ಬಹಳ ಜನರು ತಮ್ಮ ಕಂಪನಿಯ ಗ್ರೂಪ್ ಇನ್ಷೂರೆನ್ಸ್ ಸಾಕಷ್ಟಾಯಿತು ಎಂದು ಭಾವಿಸಿ, ಪರ್ಸನಲ್ ಹೆಲ್ತ್ ಪಾಲಿಸಿಯನ್ನೇ ಹೊಂದಿಲ್ಲ ಎಂಬುದನ್ನು ತಿಳಿದು ಬಹಳವೇ ಅಚ್ಚರಿಯಾಗಿತು. ಹೆಚ್ಚಿನ ಕಾರ್ಪೊರೇಟ್ ಪ್ಲಾನ್​ಗಳು ಸಮಗ್ರ ಕವರೇಜ್​ಗೆ ಒತ್ತು ಕೊಡುವುದಿಲ್ಲ. ಕಡಿಮೆ ಬೆಲೆಗೆ ಪಾಲಿಸಿ ಪಡೆಯಲಾಗಿರುತ್ತದೆ’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ..

ನಿತಿನ್ ಕಾಮತ್ ಸಲಹೆ ಇದು

ಕಾರ್ಪೊರೇಟ್ ಪಾಲಿಸಿ ಜೊತೆಯಲ್ಲೇ ಪರ್ಸನಲ್ ಪಾಲಿಸಿಯನ್ನೂ ಪಡೆದಿರಿ. ನೀವು ಆರೋಗ್ಯವಂತರಾಗಿದ್ದಾಗಲೇ ಪಾಲಿಸಿ ಪಡೆದರೆ ಕಡಿಮೆ ಬೆಲೆಗೆ ಸಿಗುತ್ತದೆ. ಕಾಯಿಲೆ ಬಂದ ಬಳಿಕ ಪಾಲಿಸಿ ಪಡೆಯಬೇಕೆಂದರೆ ದುಬಾರಿ ಪ್ರೀಮಿಯಮ್ ಕಟ್ಟಬೇಕಾಗುತ್ತದೆ. ಕಾರ್ಪೊರೇಟ್ ಪಾಲಿಸಿ ಮತ್ತು ಪರ್ಸನಲ್ ಎರಡೂ ಪಾಲಿಸಿ ಇದ್ದಾಗ ನೀವು ಇನ್ಷೂರೆನ್ಸ್ ಕ್ಲೇಮ್​ಗೆ ಕಾರ್ಪೊರೇಟ್ ಪಾಲಿಸಿ ಬಳಸಿರಿ. ಪರ್ಸನಲ್ ಪಾಲಿಸಿಯನ್ನು ಸಾಧ್ಯವಾದಷ್ಟೂ ಬಳಸದೆ ಉಳಿಸಿ, ನೋಕ್ಲೇಮ್ ಬೋನಸ್ ಅನ್ನು ಸೇರುವಂತೆ ನೋಡಿಕೊಳ್ಳಿ. ಇದರಿಂದ ಮುಂದ್ಯಾವತ್ತಾದರೂ ಪರ್ಸನಲ್ ಪಾಲಿಸಿಯ ಅಗತ್ಯ ಬಹಳ ಬರುತ್ತದೆ ಎಂಬುದು ನಿತಿನ್ ಕಾಮತ್ ಅವರ ಸಲಹೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *