ತುಮಕೂರು : ನಿರಂತರ ಮಳೆಯಿಂದ ಹತ್ತಿ ಬೆಳೆ ಹಾನಿಯಾಗಿದೆ. ತುಮಕೂರು ಜಿಲ್ಲೆ ಶಿರಾದಲ್ಲಿ ನಾಲ್ಕು ಎಕರೆ ಹತ್ತಿ ಬೆಳೆ ನಾಶವಾಗಿದೆ.
ಶಿರಾದ ತಡಕಲೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಸುರಿದ ಮಳೆಗೆ ಹತ್ತಿ ಬೆಳೆಯ ಜಮೀನು ಜಲಾವೃತವಾಗಿ ಸಂಪೂರ್ಣ ನಾಶವಾಗಿದೆ.
ರೈತರಾದ ರವಿ ಮತ್ತು ಗೋವಿಂದ ಎಂಬುವರು ಬೆಳೆದಿದ್ದ ಹತ್ತಿ ಬೆಳೆ ನಾಶವಾಗಿದೆ. 4-5 ಲಕ್ಷ ಖರ್ಚು ಮಾಡಿ ಹತ್ತಿ ಬೆಳೆದಿದ್ದ ರೈತ, ಈಗ ಕಣ್ಣೀರು ಹಾಕುತ್ತಿದ್ದಾನೆ.
ಅಂದಾಜು 7-8 ಲಕ್ಷ ರೂಪಾಯಿ ಹಣ ಗಳಿಸುವ ನಿರೀಕ್ಷೆ ಹೊಂದಿದ್ದ ರೈತನ ಬದುಕಿಗೆ ಬರೆ ಬಿದ್ದಂತಾಗಿದೆ. ಹತ್ತಿಬೆಳೆ ನಷ್ಟ ದಿಂದ ರೈತ ಕಂಗಾಲಾಗಿದ್ದಾನೆ. ಬೆಳೆ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ ರೈತರು.