IPL ನಲ್ಲಿ ನಾಪತ್ತೆಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಕ್ರಿಕೆಟ್ ಕಿಟ್ ಗಳು ಪತ್ತೆ….!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ನಾಪತ್ತೆಯಾದ ಕ್ರಿಕೆಟ್ ಕಿಟ್‌ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸರು ಶನಿವಾರ ತಿಳಿಸಿದ್ದಾರೆ. ಕಳ್ಳತನದ ಆರೋಪದ ಮೇಲೆ ಚೆಲುವರಾಜು ಮತ್ತು ಸುದಾಂಶು ಕುಮಾರ್ ನಾಯಕ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ – ಇಬ್ಬರೂ ಬೆಂಗಳೂರು ನಿವಾಸಿಗಳು ಆದರೆ ಮೈಸೂರು ಮತ್ತು ಒಡಿಶಾ ಮೂಲದವರು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಶುಕ್ರವಾರ, ಏಪ್ರಿಲ್ 21 ರಂದು, ಕ್ರಿಕೆಟ್ ಕಿಟ್‌ಗಳು ಕಾಣೆಯಾಗಿರುವ ಕುರಿತು ಎಕ್ಸ್‌ಪ್ರೆಸ್ ಫ್ರೈಟ್ ಸಿಸ್ಟಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ ಅಗರವಾಲ್ ಅವರು ಬೆಂಗಳೂರು ಕೇಂದ್ರ ಮಿತಿಯಲ್ಲಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 64 ಬ್ಯಾಗ್‌ಗಳನ್ನು ಸಾಗಿಸುತ್ತಿದ್ದಾಗ ಒಂದೆರಡು ಕಿಟ್ ಬ್ಯಾಗ್‌ಗಳು ನಾಪತ್ತೆಯಾಗಿರುವುದು ಕಂಡುಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ. ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿ ಚೆಲುವರಾಜು (30) ಮತ್ತು ನಾಯಕ್ ಎಂಬುವರನ್ನು ಬಂಧಿಸಿದ್ದಾರೆ.

ಮತ್ತು ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಟಾಟಾ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ನಲ್ಲಿ ಕಿಟ್‌ಗಳನ್ನು ಸಾಗಿಸುತ್ತಿದ್ದಾಗ ಚಾಲಕ ಚೆಲುವರಾಜು ಮತ್ತು ಕೊರಿಯರ್ ಬಾಯ್ ನಾಯಕ್ ಅವರು ಕಿಟ್‌ಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ವಿಚಾರಣೆಯ ವೇಳೆ ಕಂಡುಕೊಂಡಿದ್ದಾರೆ. ಪೊಲೀಸರು 12 ಕ್ರಿಕೆಟ್ ಬ್ಯಾಟ್‌ಗಳು, 18 ಕ್ರಿಕೆಟ್ ಚೆಂಡುಗಳು, ನಾಲ್ಕು ಜೋಡಿ ಹ್ಯಾಂಡ್ ಗ್ಲೌಸ್, ಎರಡು ಹೆಲ್ಮೆಟ್‌ಗಳು, ಮೂರು ಜೋಡಿ ಲೆಗ್ ಪ್ಯಾಡ್‌ಗಳು, ಎರಡು ತೊಡೆಯ ಪ್ಯಾಡ್‌ಗಳು, ಒಂದು ಸೆಂಟರ್ ಗಾರ್ಡ್ ಮತ್ತು ಒಂದು ಬ್ಯಾಕ್‌ಪ್ಯಾಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು 16 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಕೆಲವು ವಸ್ತುಗಳು ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕ ಡೇವಿಡ್ ವಾರ್ನರ್ ಮತ್ತು ಇತರ ಕೆಲವು ಆಟಗಾರರಿಗೆ ಸೇರಿವೆ ಎಂದು ವರದಿ ಮಾಡಿದೆ. IPLನ ಪ್ರಸಕ್ತ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಆಡಲು ದೆಹಲಿ ಕ್ಯಾಪಿಟಲ್ಸ್ ಏಪ್ರಿಲ್ 15 ರಂದು ಬೆಂಗಳೂರಿನಲ್ಲಿತ್ತು.

ಈ ಪಂದ್ಯವನ್ನು ಆರ್‌ಸಿಬಿ 23 ರನ್‌ಗಳಿಂದ ಗೆದ್ದುಕೊಂಡಿತು. ಇನ್‌ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಹಂಚಿಕೊಂಡ ವಾರ್ನರ್ ಅವರು ಕದ್ದ ಕಿಟ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *