ತುಮಕೂರು: ನಗರದ ತುಮಕೂರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಏಳನೇ ವರ್ಷದ ಕಲಾ ಸಂಭ್ರಮ ಸಾಂಸ್ಕöÈತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಕ್ರಿಯಾಶೀಲ ಕುಲಸಚಿವರಾದ( ಮೌಲ್ಯಮಾಪನ ) ಪ್ರೊ. ಪ್ರಸನ್ನ ಕುಮಾರ್. ಕೆ . ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕರ್ನಾಟಕಲ್ಲೇ ಶೇಷಾದ್ರಿಪುರರಂ ಶಿಕ್ಷಣ ಸಂಸ್ಥೆ ಜನಪ್ರಿಯ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ಶಿಕ್ಷಣ ಪಡೆಯುವುದೇ ಪುಣ್ಯ ಎಂದರು. ಶಿಕ್ಷಣದ ಜೊತೆಗೆ ಒಳ್ಳೆಯ ವ್ಯಕ್ತಿತ್ವ ಬೆಳಸಿಕೊಳ್ಳಿ. ನೀವು ಕಲಿತ ಶಿಕ್ಷಣ ಸಂಸ್ಥೆ ಯ ಬಗ್ಗೆ ಗೌರವ ಇರಬೇಕು. ಶಿಕ್ಷಣ ಕೇವಲ ನಾಲ್ಕು ಗೋಡೆಯ ಮಧ್ಯೆ ಆಗಬಾರದು. ನಿಮ್ಮ ತಂದೆ ತಾಯಿಯವರ ಪರಿಶ್ರಮಕ್ಕೆ ಒಳ್ಳೆಯ ಬೆಲೆ ತರಬೇಕು. ಸಮಾಜದಲ್ಲಿ ಒಳ್ಳೆಯ ಸಾಧನೆ ಮಾಡಿರಿ ಎಂದು ಆಶಿಸಿದರು. ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀ ಸುನಿಲ್ ಪ್ರಸಾದ್ ಮಾತನಾಡಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಬಡವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಕೊಡುತ್ತಿದೆ. ಇಂತಹ ಒಳ್ಳೆಯ ಸಂಸ್ಥೆ ನಮ್ಮ ತುಮಕೂರಿನಲ್ಲಿ ಇರುವುದು ಅದೃಷ್ಟ. ಇದರಲ್ಲಿ ಕಲಿತು ಬಡಜನರಿಗೆ ಸಹಾಯ ಮಾಡಿ ಎಂದು ಹೇಳಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೇ.ಪಿ.ಕೃಷ್ಣ ಮಾತನಾಡಿ ವಿದ್ಯಾರ್ಥಿಗಳು ವಿಶ್ವಮಾನವರಾಗಬೇಕು. ಆಚಾರ್ಯ ವಿನೋಬಾ ಬಾವೆ ಹೇಳುವಂತೆ ಜೈ ಜಗತ್ತು ಎಂದು ಬದುಕಬೇಕು.ನಮ್ಮ ಸಂಸ್ಥೆಯ ಶಕ್ತಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಅವರಿಂದಾಗಿಯೇ ಬೆಳೆಯಲು ಕಾರಣ ಎಂದರು.
ನಮ್ಮ ಸಂಸ್ಥೆಯಲ್ಲಿ ಇರುವ ಅಧ್ಯಯನ ಕೇಂದ್ರಗಳಾದ ಬಸವ,ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಮಹನೀಯರ ಸಂದೇಶಗಳು ನಿಮ್ಮ ಜೀವನಕ್ಕೆ ಬೆಳಕಾಗಲಿ ಎಂದು ಆಶಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಸಲಹಾ ಮಂಡಳಿಯ ಅಧ್ಯಕ್ಷರಾದ ಡಿ .ಅಶೋಕ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.