Cyber Crime | ₹20 ಲಕ್ಷ ಕಳೆದುಕೊಂಡ ತುಮಕೂರಿನ ಉಪನ್ಯಾಸಕಿ…!

ತಿಪಟೂರು : ತಿಪಟೂರಿನ ನಿವಾಸಿಯಾದ ಉಪನ್ಯಾಸಕಿಗೆ ಡಿ.19ರಂದು ಟೆಲಿಗ್ರಾಂ ಮುಖಾಂತರ ಮೆಸೇಜ್‌ ಮಾಡಿ ‘ಪ್ರಾಪರ್ಟಿ ಮೇಲೆ ರಿವೀವ್‌ ಕೊಟ್ಟರೆ ಹಣ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಇದರಂತೆ ಡಿ.22ರಂದು ಮೊದಲ ಬಾರಿಗೆ ₹10 ಸಾವಿರ ಹೂಡಿಕೆ ಮಾಡಿದ್ದಾರೆ. ಇದಕ್ಕೆ ಕಮಿಷನ್‌ ಆಗಿ ₹15 ಸಾವಿರ ಹಣವನ್ನು ಉಪನ್ಯಾಸಕಿಯ ಖಾತೆಗೆ ಜಮಾ ಮಾಡಿದ್ದಾರೆ. ನಂತರ ಡಿ.23ರಂದು ₹30 ಸಾವಿರ ಪಡೆದು, ₹37 ಸಾವಿರ ವಾಪಸ್‌ ಹಾಕಿದ್ದಾರೆ.

ಯುವಕ

ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್‌ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ಉಪನ್ಯಾಸಕಿ ಸೈಬರ್‌ ಕಳ್ಳರು ಹೇಳಿದ ವಿವಿಧ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಡಿ.25ರ ವರೆಗೆ ಒಟ್ಟು ₹21,29,252 ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಕೇವಲ ₹52,970 ವಾಪಸ್‌ ಹಾಕಿದ್ದಾರೆ. ಬಾಕಿ ₹20 ಲಕ್ಷ ಹಣ ವಾಪಸ್‌ ಕೊಡಿಸುವಂತೆ ಸೈಬರ್‌ ಠಾಣೆಯ ಮೊರೆ ಹೋಗಿದ್ದು, ಪ್ರಕರಣ ದಾಖಲಾಗಿದೆ.

ಜನರು ಈ ತರಹದ ಆಮಿಷಕ್ಕೆ ಒಳಗಾಗಬೇಡಿ ಯಾವುದೇ ಅಪರಿಚಿತ ಲಿಂಕ್ ಗಳನ್ನು ಉಪಯೋಗಿಸಬೇಡಿ 3rd ಪಾರ್ಟಿ Applications  ಡೌನ್ಲೋಡ್ ಮಾಡಬೇಡಿ ಇದರಿಂದ ನಿಮ್ಮ ಖಾತೆ ಖಾಲಿಯಾಗುವ ಸಂಭವವಿರುತ್ತದೆ.

Pragati TV Social Connect for more latest u

Leave a Reply

Your email address will not be published. Required fields are marked *