ಲಗ್ಗೆರೆ ರಾಜೀವ್ ನಗರದಲ್ಲಿ Cylinder ಸ್ಫೋಟ: ಮನೆ ಛಿದ್ರ ಛಿದ್ರ.

ಲಗ್ಗೆರೆ ರಾಜೀವ್ ನಗರದಲ್ಲಿ Cylinder ಸ್ಫೋಟ: ಮನೆ ಛಿದ್ರ ಛಿದ್ರ.

ಹೊಸ ಸಿಲಿಂಡರ್​​ ಜೋಡಿಸುವ ವೇಳೆ ಅವಘಡ.

ಬೆಂಗಳೂರು : ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಿಲಿಂಡರ್​​ ಸ್ಫೋಟಗೊಂಡ ಘಟನೆ ವರದಿಯಾಗಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸಿವೆ. ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಅವಘಡ ನಡೆದಿದ್ದು, ಹರಗಯ್ಯ ಎಂಬುವವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.

 ಒಂದು ಗಂಟೆ ಮುನ್ನ ಹೊಸ ಎಲ್‌ಪಿಜಿ ಸಿಲಿಂಡರ್ ಬಂದಿತ್ತು. ಅದನ್ನು ಜೋಡಿಸುವ ವೇಳೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯವರು ತಕ್ಷಣ ಹೊರಬಂದಿದ್ದು, ಹರಗಯ್ಯ ಪತ್ನಿ ಭಾಗ್ಯಮ್ಮ ಮತ್ತು ಮಕ್ಕಳು ಸೇರಿ ಐವರು ಮನೆಯಲ್ಲಿ ವಾಸವಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *