ರಂಗೋಲಿಯಲ್ಲಿ ಮೂಡಿದ ಡಿ.ಕೆ.ಶಿವಕುಮಾರ್ ಚಿತ್ರ.

ರಂಗೋಲಿಯಲ್ಲಿ ಮೂಡಿದ ಡಿ.ಕೆ.ಶಿವಕುಮಾರ್ ಚಿತ್ರ.

ಕುಣಿಗಲ್ ಉತ್ಸವಕ್ಕೆ ಮಹಿಳೆಯರ ವಿಶೇಷ ಸ್ಪರ್ಶ

ಕುಣಿಗಲ್ : ಕುಣಿಗಲ್ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಲಾದ ರಂಗೋಲಿ ಕಾರ್ಯಕ್ರಮವು ಗುರುವಾರ ಮಧ್ಯರಾತ್ರಿಯಿಂದಲೇ ಭಾರೀ ಉತ್ಸಾಹದೊಂದಿಗೆ ಆರಂಭವಾಗಿದೆ. ಕುಣಿಗಲ್ ಪಟ್ಟಣದ ಮಹಿಳೆಯರು ಉತ್ಸವಕ್ಕೆ ವಿಶೇಷ ಬೆಂಬಲ ಸೂಚಿಸುವ ರೀತಿಯಲ್ಲಿ ಮನೆ ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವೈವಿಧ್ಯಮಯ ಹಾಗೂ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಈ ಕುರಿತು ಶಾಸಕ ಡಾ. ರಂಗನಾಥ್ ಅವರು ಮಾತನಾಡಿ, ಮಹಿಳೆಯರು ಇಷ್ಟು ಉತ್ಸಾಹದಿಂದ ಕುಣಿಗಲ್ ಉತ್ಸವಕ್ಕೆ ಕೈಜೋಡಿಸಿರುವುದು ನಿಜಕ್ಕೂ ಸಂತೋಷ ತಂದಿದೆ. ಅದರಲ್ಲೂ ನಮ್ಮ ಡಿಕೆ ಶಿವಕುಮಾರ್ ಸಾಹೇಬರ ಭಾವಚಿತ್ರವನ್ನು ರಂಗೋಲಿಯಾಗಿ ರೂಪಿಸಲು ಪ್ರಯತ್ನ ಪಟ್ಟಿರುವುದು ವಿಶೇಷ ಖುಷಿ ನೀಡಿದೆ ಎಂದು ಹೇಳಿದರು. ಇದು ಉತ್ಸವಕ್ಕೆ ಮತ್ತಷ್ಟು ವೈಭವ ಮತ್ತು ಅರ್ಥವತ್ತತೆಯನ್ನು ತಂದಿದೆ ಎಂದರು.

ಮಹಿಳೆಯರ ಕಲಾತ್ಮಕತೆ ಮತ್ತು ಶ್ರಮದಿಂದ ಪಟ್ಟಣದ ಬೀದಿಗಳು ಬೆಳಕಿನಂತೆ ಕಂಗೊಳಿಸುತ್ತಿದ್ದು, ರಂಗೋಲಿ ಕಾರ್ಯಕ್ರಮವು ಕುಣಿಗಲ್ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ. ಸ್ಥಳೀಯರು ಹಾಗೂ ಉತ್ಸವ ವೀಕ್ಷಕರು ರಂಗೋಲಿಗಳ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *