ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಕ್ರೀಡಾಕೂಟ ನಡೆಯಲಿದೆ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಯೋಜನೆಯಲ್ಲಿ ಸೆಪ್ಟೆಂಬರ್ 4ರಿಂದ 7ರವರೆಗೆ 9 ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ.
ಕ್ರೀಡೆಗಳ ವಿವರ: ಅಥ್ಲೆಟಿಕ್ಸ್ (ಪುರುಷರ ವಿಭಾಗ) : 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ. ಓಟ, 10,000 ಮೀಟರ್ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲೀನ್ ಥ್ರೋ, ಡಿಸ್ಕಸ್ ಥ್ರೋ, 110 ಮೀಟರ್ ಹರ್ಡಲ್ಸ್, 4×100 ಮೀಟರ್ ರಿಲೇ, 4ಷ400 ಮೀಟರ್ ರಿಲೇ ಸ್ಪರ್ಧೆ ಇರಲಿದೆ.
ಅಥ್ಲೆಟಿಕ್ಸ್ (ಮಹಿಳೆಯರ ವಿಭಾಗ ): 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀಟರ್ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲೀನ್ ಥ್ರೋ, ಡಿಸ್ಕಸ್ ಥ್ರೋ ಇರಲಿವೆ. 100 ಮೀಟರ್ ಹರ್ಡಲ್ಸ್, 4×100 ಮೀಟರ್ ರಿಲೇ, 4×400 ಮೀಟರ್ ರಿಲೇ ಓಟ ಕೂಡ ಇರಲಿದೆ.
ವಾಲಿಬಾಲ್, ಫುಟ್‌ಬಾಲ್, ಖೋ-ಖೋ, ಕಬ್ಬಡ್ಡಿ, ಥ್ರೋಬಾಲ್, ಯೋಗಾಸನ (ವೀರಭದ್ರಾಸನ, ಜಾನು ಶಿರ್ಶಾಸನ, ಹಲಾಸನ ಮತ್ತು ಧನುರಾಸನ) ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಇಲ್ಲಿನ ನೋಟಿಸ್ ಬೋರ್ಡ್ ಅಥವಾ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಸಂಪರ್ಕಿಸಬಹುದಾಗಿದೆ.
ವೆಬ್ಸೈಟ್ ವಿಳಾಸ: https://dasaracmcup-2025.etrpindia.com/KA-sports