‘ನನ್ನ ಆಸೆ ಈಡೇರಿಸು’ ಎಂದು ಪೀಡನೆ; ಕೊ* ಬೆದರಿಕೆ ನೀಡಿದ ಆರೋಪ.
ಬೆಂಗಳೂರು: ನನ್ನ ಆಸೆ ಈಡೇರಿಸು ಎಂದು ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಥಣಿಸಂಧ್ರದ ಪ್ರತಿಷ್ಟಿತ ಸ್ಕೂಲ್ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ ಆಕೆಯ ಗಂಡನ ತಂದೆ, ಕಾವಲ್ ಬೈರಸಂಧ್ರದ ಶಾಲೆಯೊಂದರ ಫೌಂಡರ್ ಆಗಿರುವ ವ್ಯಕ್ತಿ ಕಿರುಕುಳ ನೀಡಿರುವ ಬಗ್ಗೆ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲೋದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆಯೂ ದೂರಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲೆಂದರಲ್ಲಿ ಲೈಂಗಿಕ ಕಿರುಕುಳ ಆರೋಪ
2007ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಜೀವನ ಚೆನ್ನಾಗಿಯೇ ಇತ್ತು. ಆದರೆ ಬರ ಬರುತ್ತಾ ಮಾವನ ಕಾಟ ಶುರುವಾಗಿದೆ. 2005ರಲ್ಲಿ ಪತ್ನಿಯ ಸಾವಿನ ಬಳಿಕ ಆರೋಪಿ 2006ರಲ್ಲಿ ಎರಡನೇ ಮದುವೆಯಾಗಿದ್ದ. ಹೀಗಿದ್ದರೂ ಸೊಸೆಯ ಮೇಲೆ ಕಣ್ಣು ಹಾಕಿದ್ದ ಈತ, ಆಕೆಯ ಜೊತೆ ಅನುಚಿತ ವರ್ತನೆ ತೋರಲು ಶುರುಮಾಡಿದ್ದಾನೆ. ಪಕ್ಕದ ಅಪಾರ್ಟ್ಮೆಂಟ್ನಲ್ಲಿಯೇ ವಾಸವಿದ್ದ ಈತ, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇರುವ ಸಮಯ ನೋಡಿಕೊಂಡು ಬಂದು ಆಕೆಗೆ ಲೈಂಗಿಕ ದೌರ್ಜನ್ಯ ನೀಡಲಾರಂಭಿಸಿದ್ದ. ಅಸಭ್ಯ ಪದಗಳನ್ನು ಮಾತನಾಡುವ ಜೊತೆಗೆ ಬಲವಂತಾಗಿ ಬಟ್ಟೆ ಬಿಚ್ಚಲು ಯತ್ನಿಸುತ್ತಿದ್ದ. 2020ರಿಂದಲೇ ಮಾವನ ಈ ರೀತಿಯ ವರ್ತನೆಗಳು ಆರಂಭವಾಗಿತ್ತು. ಆದ್ರೆ ಭಯಭೀತಳಾಗಿದ್ದ ಸಂತ್ರಸ್ತೆ ಎಲ್ಲವೂ ಸರಿಹೋಗಬಹುದೆಂದು ಸುಮ್ಮನಿದ್ದಳು. ಆದರೆ ಆಕೆ ಮತ್ಮತು ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಹಿಳೆ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಬಳಿಕ ಅಪಾರ್ಟ್ಮೆಂಟ್ನ ಲಿಫ್ಟ್, ಸ್ಕೂಲ್ ಕ್ಯಾಬಿನ್ನಲ್ಲಿಯೂ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಆರೋಪಿಸಲಾಗಿದೆ.
For More Updates Join our WhatsApp Group :




