ವಾರಣಾಸಿಯ ಗಂಗಾರತಿ ರೀತಿ ʻಕಾವೇರಿ ಆರತಿʼ ನಡೆಸಲು ತೀರ್ಮಾನ : ಡಿಕೆಶಿ

ಮಂಡ್ಯ : ವಾರಣಾಸಿಯ ಗಂಗಾರತಿ ರೀತಿ ಇಲ್ಲೂ ಕಾವೇರಿ ಆರತಿ ನಡೆಯಲು ತೀರ್ಮಾನ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

KRS ಜಲಾಶಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ಭರ್ತಿಯಾಗಿರುವ ಕನ್ನಂಬಾಡಿ ಅಣೆಕಟ್ಟೆ ವೀಕ್ಷಿಸಿದ್ದಾರೆ. ಡ್ಯಾಂ ವೀಕ್ಷಣೆ ಜೊತೆ ಜೊತೆಗೆ ಅಧಿಕಾರಿಗಳಿಂದ ಡ್ಯಾಂನ ನೀರಿನ ಮಟ್ಟ, ನೆರೆ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯದ ಪ್ರದೇಶದ ಶಾಸಕರನ್ನು ಅಲ್ಲಿಗೆ ಕಳಿಸಿ ವರದಿ ತರಿಸಿ ವ್ಯವಸ್ಥೆ ಮಾಡಲಾಗುವುದು, ಈ ಬಗ್ಗೆ ಹೊಸ ಯೋಜನೆಗೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಕಾ.ನೀ.ನಿ.ಕ್ಕೆ ಸೂಚನೆ ನೀಡಲಾಗಿದೆ. ಬೃಂದಾವನಕ್ಕೆ ಹೊಸ ರೂಪ ಕೊಡಲು ನೂತನ ತಾಂತ್ರಿಕತೆ ಬಳಕೆ ಮಾಡಲಾಗುವುದು. ಪಬ್ಲಿಕ್ ಪೈವೇಟ್ ಪಾರ್ಟನರ್ ಶಿಫ್ ನಲ್ಲಿ ಟೆಂಡರ್ ಕರೆದು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಈ ಮೂಲಕ ಈ ಭಾಗದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲಾಗುವುದು. ಕಾವೇರಿ ಬೃಂದಾವನ ಅಮ್ಯೂಸ್ಮೆಂಟ್ ಪಾರ್ಕ್ ಹೆಸರಲ್ಲಿ ಹೊಸ ಯೋಜನೆ ಜಾರಿಗೆ ತರಲಾಗುವುದು. ಕಾವೇರಿ ನದಿಯ ಹೆಸರಿನೊಂದಿಗೆ ಈ ಯೋಜನೆಗೆ ರೂಪುರೇಷೇ ಸಿದ್ದಪಡಿಸಲಾಗಿದೆ. ಈ ಮೂಲಕ ತಂತ್ರಜ್ಞಾನದ ಜೊತೆ ಬೃಂದಾವನ ಆಧುನೀಕರಣ ಮತ್ತು ಮೇಲ್ದರ್ಜೆಗೆ ಏರಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *