ಸತತ 4ನೇ ಬಾರಿಯೂ ಡೆಲ್ಲಿ ಕೈಜಾರಿದ ಟ್ರೋಫಿ.

ಸತತ 4ನೇ ಬಾರಿಯೂ ಡೆಲ್ಲಿ ಕೈಜಾರಿದ ಟ್ರೋಫಿ.

WPL ಫೈನಲ್‌ನಲ್ಲಿ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್ ‘ಕರ್ಸ್’.

2026ರ WPL ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸತತ ನಾಲ್ಕನೇ ಫೈನಲ್ ಸೋಲು. 2023ರಲ್ಲಿ ಪ್ರಾರಂಭವಾದ WPLನ ಎಲ್ಲಾ ನಾಲ್ಕು ಫೈನಲ್‌ ತಲುಪಿದ ಏಕೈಕ ತಂಡ ಡೆಲ್ಲಿ, ಆದರೆ ಕಪ್ ಗೆಲ್ಲುವ ಅದೃಷ್ಟ ಒದಗಿ ಬಂದಿಲ್ಲ.

2026 ರ ಮಹಿಳಾ ಪ್ರೀಮಿಯರ್ ಲೀಗ್​​ಗೆ ಅದ್ಧೂರಿ ತೆರೆ ಬಿದ್ದಿದೆ. ವಡೋದರಾದಲ್ಲಿ ನಡೆದ 4ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು. ಇತ್ತ ಸತತ ನಾಲ್ಕನೇ ಬಾರಿಗೆ ಫೈನಲ್​ಗೇರಿದ್ದ ಡೆಲ್ಲಿ ತಂಡ ಈ ಬಾರಿಯೂ ಸೋಲಿನ ನಿರಾಶೆಗೆ ಕೊರಳೊಡ್ಡಬೇಕಾಯಿತು.

2023 ರಲ್ಲಿ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ ಇದುವರೆಗೆ 4 ಆವೃತ್ತಿಗಳನ್ನು ಕಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ನಾಲ್ಕು ಆವೃತ್ತಿಗಳ ಫೈನಲ್​ ಪಂದ್ಯವನ್ನು ಆಡಿದ ಏಕೈಕ ತಂಡವೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್. ಆದರೆ ಒಮ್ಮೆಯೂ ಡೆಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಸಾಧ್ಯವಾಗಿಲ್ಲ. ಮೊದಲ 3 ಆವೃತ್ತಿಯಲ್ಲಿ ಮೆಗ್ ಲ್ಯಾನಿಂಗ್ ತಂಡವನ್ನು ಮುನ್ನಡೆದಸಿದ್ದರೆ, ಈ ಆವೃತ್ತಿಯಲ್ಲಿ ಜೆಮಿಮಾ ರಾಡ್ರಿಗಸ್ ತಂಡದ ನಾಯಕತ್ವವಹಿಸಿದ್ದರು. ನಾಯಕಿ ಬದಲಾದರೂ ಡೆಲ್ಲಿ ತಂಡದ ಅದೃಷ್ಟ ಮಾತ್ರ ಬದಲಾಗಲಿಲ್ಲ.

2023 ರಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ 131 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 3 ವಿಕೆಟ್ ಕಳೆದುಕೊಂಡು ಕೊನೆಯ ಓವರ್​ನಲ್ಲಿ ಜಯದ ನಗೆ ಬೀರಿತ್ತು.

2024 ರಲ್ಲಿ ನಡೆದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್​ಗೇರಿತ್ತು. ಆದರೆ ಈ ಬಾರಿ ಎದುರಾಳಿಯಾಗಿ ಆರ್​ಸಿಬಿ ಮುಂದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ ಕೊನೆಯ ಓವರ್​ನಲ್ಲಿಮ ಗೆದ್ದು ಬೀಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *