ಸಾರ್ವಜನಿಕರಿಗೆ, ಆರೋಗ್ಯ ಇಲಾಖೆ ಅತ್ಯಂತ ಸವಾಲು ಮತ್ತು ಸಮಸ್ಯತ್ಮಾಕವಾದ ಖಾಯಿಲೆಗಳಲ್ಲಿ ಡೆಂಗ್ಯೊ ಜ್ವರವು ಮೂಂಚೂಣಿಯಲ್ಲಿದೆ. ಇತ್ತಿಚೀನ ದಶಕಗಳಲ್ಲಿ ಡೆಂಗ್ಯೊ ಜ್ವರ ಸೊಂಕಿತ ಪ್ರಕರಣಗಳು ನಾಟಕೀಯವಾಗಿ ಜಾಸ್ತಿಯಾಗುತ್ತಿವೆ. ಅದ್ದರಿಂದ ಖಾಯಿಲೆಯನ್ನು ಭಾರತದಲ್ಲಿ ಎಫೀಡಮೀಕ್ ಡಿಸೀಜ್ ಆಕ್ಟ್ ಅಡಿಯಲ್ಲಿ ನೋಟಿಫೀಯಬಲ್ ಡಿಸೀಜ್ ಗಳಲ್ಲಿ ಸೇರಿಸಲಾಗಿದೆ. ಡೆಂಗ್ಯೊ ಜ್ವರ ಪ್ರಕರಣಗಳು ಕಂಡು ಬಂದಾಗ ಕಾನೂನತ್ಮಕವಾಗಿ ಅಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಮೂಖೇನ ರಾಜ್ಯ ಮಟ್ಟಕ್ಕೆ ವರದಿ ಮಾಡಬೇಕಾಗುತ್ತದೆ. ವರದಿ ಮಾಡದಿದ್ದರೇ ಅಂತಹ ವೈದ್ಯಾಕೀಯ ಸಂಸ್ಥೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಎಫೀಡಮೀಕ್ ಡಿಸೀಜ್ ಆಕ್ಟ್ ಅಡಿಯಲ್ಲಿ ಅವಕಾಶವಿದೆ. ಡೆಂಗ್ಯೊ ಜ್ವರವನ್ನು ನಿಯಂತ್ರಣ ಮಾಡಬಹುದಾದ ಸಾಂಕ್ರಮಿಕ ಖಾಯಿಲೆಗಳಲ್ಲಿ ಪ್ರಮುಖವಾದದ್ದು. ವಿಪರೀತವಾಗಿ ನಗರ ಪ್ರದೇಶಗಳು ಬೆಳೆಯುತ್ತಿದ್ದು, ನಗರ ಪ್ರದೇಶಗಳಲ್ಲಿ ಸ್ವಚ್ಚತೆಯು ಮರೀಚೀಕೆಯಾಗಿದ್ದು, ಸೊಳ್ಳೆಗಳ ಸಂತಾನೊತ್ಪತ್ತಿಗೆ ಪೂರಕವಾದ ವಾತವರಣವಿದೆ. ಆರೋಗ್ಯ ಇಲಾಖೆಯ ನಿರ್ದೇಶನದಂತೆ ಪ್ರತಿ ವರ್ಷ ಜುಲೈ ಮಾಹೆಯನ್ನು ಡೆಂಗ್ಯೊ ಜ್ವರ ವಿರೋಧಿ ಮಾಸಾಚರಣೆಯನ್ನು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳವ ಸಲುವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಡೆಂಗ್ಯೊ ಜ್ವರಕ್ಕೆ ವೈರಸ್ ಕಾರಣವಾಗಿದ್ದು, ಈಡೀಸ್ ಕುಲದ ಹೆಣ್ಣು ಸೊಳ್ಳೆಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಮಿಕ ಖಾಯಿಲೆಯಾಗಿದೆ. ಮೂರು ಹಂತಗಳಲ್ಲಿ ಡೆಂಗ್ಯೊ ಜ್ವರವು ಗುರುತಿಸಬಹುದು. ಡೆಂಗ್ಯೊ ಜ್ವರ ಹಂತ, ಡೆಂಗ್ಯೊ ಜ್ವರ ರಕ್ತಸ್ರಾವ ಹಂತ, ಡೆಂಗ್ಯೊ ಜ್ವರ ಪ್ರಜ್ಞಾಹೀನ ಹಂತ, ನಿರ್ಧಿಷ್ಟವಾದ ಚಿಕಿತ್ಸೆ ಇಲ್ಲವಾದ ಕಾರಣ ಡೆಂಗ್ಯೊಜ್ವರ ನಿರ್ಲಕ್ಷೀಸಿದರೇ ಸಾವು ಉಂಟಾಗಬಹುದು.

ಡೆಂಗ್ಯೊ ಜ್ವರದ ರೋಗ ಲಕ್ಷಣಗಳು: ಡೆಂಗ್ಯೊ ಜ್ವರದ ಹಂತ : ತೀವ್ರವಾದ ಜ್ವರ, ಹಣೆ ಬಾಗವು ವೀಪರಿತ ನೋವು, ಮುಳೆ ಮೂರಿತ ನೋವಿನ ಜೊತೆಯಲ್ಲಿ ಜ್ವರ, ಕೀಲು ನೋವುಗಳು, ಕಣ್ಣಿನ ಗುಡ್ಡು(ಅಕ್ಷೀಪಟಲ)ವೀಪರೀತ ನೋವು. ಕೆಲವರಲ್ಲಿ ಅಮ್ಲ ಬೇಧಿ ಉಂಟಾಗುತ್ತದೆ. ಡೆಂಗ್ಯೊ ಜ್ವರದ ತೀವ್ರ ಹಂತ : ರಕ್ತದಲ್ಲಿನ ಕಿರುಬಿಲ್ಲೆಗಳು (ಪ್ಲೇಟ್ಲೆಟ್ ಡಿಸ್ಟçಕ್ಷನ್) ನಾಶವಾಗುತ್ತವೆ. ರಕ್ತದ ಕಿರುಬಿಲ್ಲೆಗಳು ಉತ್ಪತ್ತಿ (ಪ್ಲೇಟ್ಲಟ್ ಪ್ರೋಡಕ್ಷನ್) ಕಡಿಮೆಯಾಗುತ್ತವೆ. ರಕ್ತ ಕಣಗಳ ಸ್ರಾವವು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ಮೂತ್ರದ ಮೂಖೇನ, ಕಿವಿ, ಮೂಗಿನ ಮೂಖೇನ ರಕ್ತಸ್ರಾವ ಅಗುತ್ತದೆ. ರೋಗಿಯಲ್ಲಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಮೂತ್ರ ಪಿಂಡಗಳು, ಯಾಕೃತ್ತೀನ ಮೇಲೆ ಪ್ರಭಾವ ಜಾಸ್ತಿಯಾಗುತ್ತದೆ. ಪ್ರಥಮವಾಗಿ ಸೊಂಕಿತ ಡೆಂಗ್ಯೊಜ್ವರ ವ್ಯಕ್ತಿಗಿಂತ ಎರಡನೇ ಸಾರಿ ಡೆಂಗ್ಯೊ ಜ್ವರ ಸೊಂಕಿತ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ತೀಕ್ಷ÷್ಣವಾಗಿ ಮತ್ತು ತೀವ್ರವಾಗಿರುತ್ತವೆ. ಡೆಂಗ್ಯೂ ಜ್ವರ ರಕ್ತಸ್ರಾವ ಹಂತ : ರಕ್ತಸ್ಥಂಭನ ಮತ್ತು ರಕ್ತನಾಳದಲ್ಲಿ ಸೊರಿಕೆ ಉಂಟಾಗಿ ರಕ್ತ ಪರೀಚಲನೆ ಅಡಚಣೆ ಉಂಟಾಗುತ್ತದೆ. ರೋಗಿಯು ಪ್ರಜ್ಞಾಹೀನಾ ಸ್ಥಿತಿ ಉಂಟಾಗಬಹುದು. ಒಣಗಿದ ತುಟಿಗಳು, ಬೃಹತ್ ಮ್ರಮಾಣದ ರಕ್ತದ ಪ್ಲಾಸ್ಮ ಸೋರಿಕೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ದೇಹದ ದುರ್ಬಲವಾದ ಪ್ರಮುಖ ಚಿನ್ನೆಗಳು ಮತ್ತು ಮೂತ್ರ ವಿಸರ್ಜನೆಯನ್ನು ಅದಾರವಾಗಿಟ್ಟುಕೊಂಡು ಅವಶ್ಯಕ ಪರಿಮಾಣದ ಪ್ಲಾಸ್ಮವನ್ನು ನೀಡಬೇಕಾಗುತ್ತದೆ. ಡೆಂಗ್ಯೂ ಜ್ವರ ರಕ್ತಸ್ರಾವ ಹಂತದ ಅತಂಕಕ್ಕೆ ಒಳಗಾಗಿರುವ ರೋಗಿಗಳಿಗೆ ವಿಶೇಷವಾದ ಘಟಕದಲ್ಲಿ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಎಲೆಕ್ಟೊçÃಲೈಟ್ ಮರು ಪುರೈಕೆ, ಅಮ್ಲಜನಕ ಚಿಕಿತ್ಸೆ, ಭಯ ಭೀತರಾಗಿರುವ ಮಕ್ಕಳಿಗೆ ನಿದ್ರಾಜನಕ ಔಷದಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಸುಧೀರ್ಘವಾದ ಪ್ರಜ್ಞಾಹೀನ ರೋಗಿಗಳಿಗೆ ರಕ್ತದ ವರ್ಗವಣೆ ಮಾಡಬೇಕಾಗುತ್ತದೆ.
ಸೊಳ್ಳೆಗಳ ಜೀವನ ಚಕ್ರ,, ಬೆಳವಣಿಗೆ, ಆಹಾರ ಪದ್ದತಿ, ಸಂತಾನೊತ್ಪತ್ತಿ ಮತ್ತು ಜೀವಿತ ಅವಧಿ ತಿಳಿದುಕೊಳ್ಳೊಣ.
ಸೊಳ್ಳೆಗಳು ಸುಮಾರು ೪೨-೫೬ ದಿನಗಳು ಜೀವಿತವಾಧಿಯನ್ನು ಹೊಂದಿರುತ್ತವೆ. ವಿಶೇಷ ಸಂದರ್ಭದಲ್ಲಿ ಕೆಲವು ಜಾತಿಯ ಸೊಳ್ಳೆಗಳು ನಾಲ್ಕು ತಿಂಗಳಿAದ ಆರು ತಿಂಗಳ ವರೆಗೂ ಜೀವಿತಾವಧಿಯನ್ನು ಹೊಂದಿದ್ದು, ನಾಲ್ಕು ಹಂತಗಲ್ಲಿ ಪೊರೈಸುತ್ತವೆ. ಮೊಟ್ಟೆ. ಲಾರ್ವ, ಪ್ಯೋಫ, ಫ್ರೌಢವಸ್ಥೆ ಸೊಳ್ಳೆ. ಹೆಣ್ಣು ಸೊಳ್ಳೆಗಳು ಮೊಟ್ಟೆಗಳ ಉತ್ಪಾದನೆಗಾಗಿ ಪ್ರೋಟೀನ್ ಅವಶ್ಯಕತೆಗೆ ಮನುಷ್ಯನ್ನು ಆಥಾವ ಪ್ರಾಣಿಗಳನ್ನು ಕಡಿದು ರಕ್ತ ಹೀರಿಕೊಳ್ಳುತ್ತವೆ.
ಫ್ರೌಢವಸ್ಥೆಯ ಹೆಣ್ಣು ಸೊಳ್ಳೆಗಳು ಡೆಂಗ್ಯೊ ಜ್ವರ ಸೊಂಕಿತ ಮನುಷ್ಯ ರಕ್ತಕ್ಕಾಗಿ ಕಚ್ಚಿದಾಗ ಕಾಯಿಲೆ ಸಂಬAದಿಸಿದ ರೋಗಕಾರಕಗಳು (ಪ್ಯಾಥೋಜೀನ್/ಪರಾವಲಂಬಿಗಳು) ಸೋಳ್ಳೆಯ ದೇಹವನ್ನು ಪ್ರವೇಶ ಪಡೆದುಕೊಂಡು ಸೊಳ್ಳೆಯ ದೇಹದಲ್ಲಿ ವೃದ್ದಿಯಾಗಿ ಸೊಳ್ಳೆಯ ಲಾಲಾರಸದಲ್ಲಿ ಬಂದು ಸೇರಿಕೊಳ್ಳುತ್ತವೆ. ಅಂತಹ ಸೊಳ್ಳೆಗಳನ್ನು ಸೊಂಕಿತ ಫ್ರೌಢವಸ್ಥೆ ಸೊಳ್ಳೆ ಎಂದು ಕರೆಯಲಾಗುತ್ತದೆ.
ಆರೋಗ್ಯವಂತ ಸೊಳ್ಳೆಗಳ ದೇಹದಲ್ಲಿ ರೋಗಕಾರಕಗಳು (ವೈರಸ್‌ಗಳು) ಸೇರಿಕೊಂಡ ದಿನದಿಂದ ಸೊಳ್ಳೆಯು ಸೊಂಕಿತಗೊAಡು, ರೋಗಕಾರಕಗಳು ಇನ್ನೊಬ್ಬರಿಗೆ ಸೊಂಕು ಉಂಟುಮಾಡುವಷ್ಟು ವೈರಸ್‌ಗಳು ಬೆಳವಣಿಗೆ ಹೊಂದಿ, ಸೊಳ್ಳೆಯ ದೇಹದ ಲಾಲಾರಸದಲ್ಲಿ (ಸಲೈವಾ) ಸೇರಿಕೊಳ್ಳುವ ದಿನದವರೆಗಿನ ನಡುವಿನ ಅವಧಿಯನ್ನು ಬಾಹ್ಯ ಕಾವು ಅವಧಿ (ಏಕ್ಸ್ಇಟ್ರೀಕ್ ಇಂಕುಬೇಷನ್ ಪೀರಿಯಡ್) ಎಂದು ಕರೆಯಲಾಗುತ್ತದೆ.
ಸೊಂಕಿತ ಫ್ರೌಢವಸ್ಥೆ ಸೊಳ್ಳೆಯು ಪುನಃ ಆಹಾರಕ್ಕಾಗಿ ರಕ್ತ ಹೀರಿಕೊಳ್ಳಲು ಆರೋಗ್ಯವಂತ ಮನುಷ್ಯನನ್ನು ಕಚ್ಚಿದಾಗ ಸೊಳ್ಳೆಯ ಲಾಲಾರಸ (ಸಲೈವಾ) ದಲ್ಲಿನ ರೋಗಕಾರಕಗಳು ಮನುಷ್ಯನ ದೇಹದ ರಕ್ತದಲ್ಲಿ ಸೇರಿಕೊಳ್ಳುತ್ತವೆ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ರೋಗಕಾರಕಗಳು ಸೇರಿಕೊಂಡ ದಿನದಿಂದ ಮನುಷ್ಯ ಸೊಂಕಿತಗೊAಡು ಮನುಷ್ಯನಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ದಿನದವರೆಗಿನ ನಡುವಿನ ಅವಧಿಯನ್ನು ಅಂತರಿಕ ಕಾವು ಅವಧಿ (ಇಟ್ರೇನ್ಸೀಕ್ ಇಂಕುಬೇಷನ್ ಪೀರಿಯಡ್) ಎಂದು ಕರೆಯಲಾಗುತ್ತದೆ.
ಮನುಷ್ಯನಿಗೆ ಡೆಂಗ್ಯೊ ಜ್ವರವು ಮೊದಲನೇ ಬಾರಿ ಕಾಣಿಸಿಕೊಂಡಗ ಪ್ರಥಮ ಡೆಂಗ್ಯೊ ಜ್ವರ ಸೊಂಕಿತ ವ್ಯಕ್ತಿ ಎಂದು ಕರೆಯುತ್ತೇವೆ. ಹಾಗೂ ಮೊದಲನೇ ಸೊಂಕು ಉಂಟುಮಾಡಿದ ಡೆಂಗ್ಯೋ ವೈರಸ್ ತಳಿಯು ಹೊರತುಪಡಿಸಿ ಉಳಿಕೆಯ ನಾಲ್ಕು ತಳಿಗಳಲ್ಲಿ ಯಾವೂದಾದರೂ ತಳಿಯಿಂದ ಅದೇ ವ್ಯಕ್ತಿಗೆ ಪುನಃ ಡೆಂಗ್ಯೊ ಜ್ವರ ಬಂದರೇ ದ್ವಿತೀಯ ಡೆಂಗ್ಯೋ ಜ್ವರ ಸೊಂಕಿತ ವ್ಯಕ್ತಿ ಎಂದು ಕರೆಯುತ್ತೇವೆ. ದ್ವಿತೀಯ ಡೆಂಗ್ಯೊ ಜ್ವರ ಸೊಂಕಿತ ವ್ಯಕ್ತಿ ಹೆಚ್ಚು ಅಪಾಯದಲ್ಲಿ ಇರುತ್ತಾನೆ. ಮೊದಲನೇ ಸಾರಿ ಮತ್ತು ಎರಡನೇ ಸಾರಿ ಬೇರೆ ಬೇರೆ ಡೆಂಗ್ಯೊ ವೇರಸ್ ತಳಿಗಳು ಅದ್ದರಿಂದ ಬಹು ಬೇಗನೆ ವೈರಸ್‌ಗಳು ಕಿರು ಬಿಲ್ಲೆಗಳು (ಪ್ಲೇಟ್ಲೆಟ್) ಸಂಖ್ಯೆ ಕಡಿಮೆಯಾಗಿ ರಕ್ತಸ್ರಾವ ಉಂಟಾಗಿ ಸಾವು ಸಂಭವಿಸಬಹುದು.

ಪ್ರತಿಯೊಬ್ಬರು ಡೆಂಗ್ಯೊ ಜ್ವರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕಾರ್ಯತಂತ್ರಗಳು :
(೧) ಈಡೀಸ್ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟುವುದು
(೨) ಈಡೀಸ್ ಸೊಳ್ಳೆಗಳ ಕಡಿತದಿಂದ ತಪ್ಪಿಸಿ ಕೊಳ್ಳುವುದು
(೧) ಫ್ರೌಢವಸ್ಥೆಯ ಹೆಣ್ಣು ಸೊಳ್ಳೆಯು ತನ್ನ ಜೀವಿತಾವಧಿಯಲ್ಲಿ ಸುಮಾರ ೨೦೦ ರಿಂದ ೨೫೦ ಮೊಟ್ಟೆಗಳನ್ನು ಸ್ವಚ್ಚವಾದ ನೀರಿನ ತೇವಾಂಶದ ಮೇಲ್ಮೆöÊ ಸ್ಥಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಸ್ವಚ್ಚವಾದ ನೀರು ಸಂಗ್ರಹ ಮಾಡುವ ತಾಣಗಳು ಮನೆಯ ಒಳಾಂಗಣದಲ್ಲಿ ಸ್ಥಳಗಳು ಎಂದರೇ ಸ್ವಚ್ಚವಾಗಿರುವ ನೀರುನ್ನು ಸಂಗ್ರಹಿಸುತ್ತಾರೆ. ನೀರಿನ ಡ್ರಂಗಳು, ಸೀಮೆಂಟು ತೊಟ್ಟಿಗಳು, ಬಕೆಟ್‌ಗಳು, ಮಡಿಕೆಗಳು, ಸಂಪುಗಳಲ್ಲಿ ಸಂಗ್ರಹಿಸಿರುವ ನೀರು, ಫ್ರೀಡ್ಜ್ ಹಿಂಭಾಗದಲ್ಲಿ, ಏರ್ ಕುಲರ್‌ಗಳಲ್ಲಿ, ಅಲಂಕಾರಿಕ ಸಸ್ಯಗಳ ಕುಂಡಗಳ ಕೆಳಗೆ ಸಂಗ್ರಹವಾಗಿರುವ ನೀರುಗಳಲ್ಲಿ ಮೊಟ್ಟೆಗಳು ಇಡುತ್ತವೆ. ಹೊರಾಂಗಣ ಸ್ಥಳಗಳು ಎಂದರೇ ಮರದ ಪೂಟರೆಗಳಲ್ಲಿ ಮಳೆನೀರು, ಬಿದಿರು ಗಿಡಗಳಲ್ಲಿ ಮಳೆನೀರು, ಟೀನ್ ಕ್ಯಾನ್, ಟೈರುಗಳಲ್ಲಿ ಮಳೆನೀರು, ಒಡೆದು ಹೋಗಿರುವ ಪಿಂಗಾಣಿ ವಸ್ತುಗಳಲ್ಲಿ ಮಳೆನೀರು. ಮನೆಯ ಸುತ್ತಾ ಮುತ್ತಾ ಬಿಸಾಕಿರುವ ಪ್ಲಾಸ್ಟಿಕ್ ಲೋಟಗಳು, ಓರಳು ಕಲ್ಲು, ಒಡೆದು ಹೋಗಿರುವ ಪ್ಲಾಸ್ಟೀಕ್ ತ್ಯಾಜ್ಯ, ಇನ್ನಿತರೆ ಘನತ್ಯಾಜ್ಯ ವಸ್ತುಗಳು ಸಂಗ್ರವಾಗಿರುವ ಮಳೆ ನೀರಿನ ತೇವಾಂಶದ ಮೇಲ್ಮೆöÊ ಸ್ಥಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಒಡೆದು ಲಾರ್ವಗಳಾಗುತ್ತವೆ. ಲಾರ್ವಗಳು ನೀರಿನಲ್ಲಿರುವ ಆಹಾರವನ್ನು ತಿಂದು ಪ್ಯೋಪಗಳು ಅಗುತ್ತವೆ. ಪ್ಯೋಪಗಳು ಕೆಲವು ದಿನ ನೀರಿನಲ್ಲಿ ವಿಶ್ರಾಂತಿ ಪಡೆಯುತ್ತವೆ. ಸೊಳ್ಳೆಯ ಜೀವನ ಚಕ್ರದ ಮೂರು ಹಂತಗಳಾದ ಮೊಟ್ಟೆ, ಲಾರ್ವ, ಪ್ಯೋಪಗಳು ನೀರಿನಲ್ಲಿ ಮಾತ್ರ ಜೀವಂತವಾಗಿದ್ದು, ಬೆಳವಣಿಗೆಯನ್ನು ಪೂರ್ಣಗೊಳಿಸಲು ಸುಮಾರು ೭ ರಿಂದ ೧೦ ದಿನಗಳು ಬೇಕಾಗುತ್ತದೆ. ವಾರಕ್ಕೊಮ್ಮೆ ಪ್ರತಿ ಮನೆಯಲ್ಲೂ ಓಳಾಂಗಣ ಮತ್ತು ಹೊರಾಂಗಣಗಳಲ್ಲಿ ಸಂಗ್ರಹವಾಗಿರುವ ನೀರುಗಳನ್ನು ಪರೀಶಿಲಿಸಿ, ಖಾಲಿ ಮಾಡಿ, ಪರಿಕರಗಳನ್ನು ಉಜ್ಜುವುದರಿಂದ ಸ್ವಚ್ಚಗೊಳಿಸಿ, ಓಣಗಿಸಿ, ಪುನಃ ಅವಶ್ಯಕತೆ ಇರುವ ನೀರನ್ನು ಶೇಖರಿಸಿ ಮುಚ್ಚಿಡಬೇಕು. ಈ ರೀತಿಯಾಗಿ ಸೊಳ್ಳೆಯ ಸಂತಾನೋತ್ಪತ್ತಿ ನಿರ್ಮೂಲನೆ ಮಾಡಬೇಕು. ವಾರಕ್ಕೆ ಒಂದು ಬಾರಿ ನೀರಿನ ತಾಣಗಳನ್ನು ಸ್ವಚ್ಚಗೊಳಿಸಿ ಸೊಳ್ಳೆಗಳ ಸಂತಾನೊತ್ಪತ್ತಿಯನ್ನು ತಡೆಗಟ್ಟುವುದಕ್ಕೆ ವಾರದ ಓಣಗಳು ದಿನ ಕಾರ್ಯಕ್ರಮ ಎಂದು ಕರೆಯುತ್ತಾರೆ.
(೨) ಈಡಿಸ್ ಸೋಳ್ಳೆಗಳು ಹಗಲು ಮುಂಜಾನೆ ಮತ್ತು ಮುಸಂಜೆ ಸಮಯದಲ್ಲಿ ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಬೆವರುನಲ್ಲಿರುವ ರಾಸಾಯನಿಕ ವಾಸನೆಯಿಂದ ಗುರುತಿಸಿಕೊಂಡು, ಕಡಿದು ರಕ್ತವನ್ನು ಹೀರಿಕೊಳ್ಳುತ್ತವೆ. ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಅನೇಕ ಮಾರ್ಗೊಪಾಯಗಳು ಬಳಸಬೇಕು. ರಾಸಾಯನಿಕ ವಸ್ತುಗಳಾದ ಸೊಳ್ಳೆಗಳ ನಿವಾರಕ ನಿರೋಧಕಗಳು, ದ್ರವಲೇಪನಗಳು, ಅವಿಕಾರಕಗಳು, ವಿದ್ಯೊತ್ ಚಾಲಿತ ಬ್ಯಾಟ್‌ಗಳು, ಮೈ ತುಂಬಾ ಬಟ್ಟೆಗಳನ್ನು ಧರಿಸಿಕೊಳ್ಳುವುದರಿಂದ, ಹಗಲು ಹಾಗೂ ರಾತ್ರಿ ವೇಳೆಯಲ್ಲಿ ಮಕ್ಕಳು, ಬಾಣಂತಿಯರು, ವಯಸ್ಕರು, ವಿಶ್ರಾಂತಿ ಪಡೆಯುವಾಗ ಸೊಳ್ಳೆಪರದೇ ಕಟ್ಟಿಕೊಳ್ಳವುದರಿಂದ ಸೊಳ್ಳೆಗಳು ಕಡಿತ ತಪ್ಪುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೀನ ದಿನಗಳಲ್ಲಿ ಹೆಚ್ಚಾಗಿ ಸೊಳ್ಳೆ ಪರದೇಗಳನ್ನು ಬಳಕೆ ಮಾಡಲು ಶಿಫಾರಸ್ಸು ಮಾಡಿದೆ. ಸೊಳ್ಳೆ ಪರದೇಗಳಲ್ಲಿ ದೀರ್ಘಕಾಲ ಬಾಳಿಕೆಯ ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳು (ಎಲ್.ಎಲ್.ಐ.ಎನ್) ಮತ್ತು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳು (ಐ.ಟಿ.ಎನ್) ಮುಖ್ಯವಾದವುಗಳು.
ಡೆಂಗ್ಯೊಜ್ವರ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಮುಖ್ಯ ಚಟುವಟಿಕೆಗಳು;
ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಇಲಾಖೆಯು ಸದಾ ಸಿದ್ದವಾಗಿದೆ. ರೋಗಿಯ ಕಣ್ಗಾವಲು ಅಡಿಯಲ್ಲಿ ಡೆಂಗ್ಯೊಜ್ವರ ಪ್ರಕರಣ ವರದಿಯಾದ ತಕ್ಷಣ ರೋಗಿಯ ಮನೆ ಭೇÃಟಿ ಮಾಡಿ ರೋಗಿಯ ಆರೋಗ್ಯ ಸ್ಥಿತಿ, ರೋಗಕಾರಕದ ಹಿನ್ನಲೆಯನ್ನು ಕುರಿತು ಅವಲೋಕಿಸಲಾಗುತ್ತದೆ. ನಂತರ ಮುಂಜಾಗ್ರತಾ ಕ್ರಮಗಳಾದ ಲಾರ್ವನಾಶಕಗಳು ಬಳಸಿಕೊಂಡು ರೋಗಿಯ ಮನೆಯ ಸುತ್ತಾ ಮುತ್ತಾ ಲಾರ್ವ ಸಮೀಕ್ಷೆನ್ನು ಆಶಾ ಕಾರ್ಯಕರ್ತೆಯರು ಮತ್ತು ಕ್ಷೇತ್ರ ಅರೊಗ್ಯ ಸಿಬ್ಬಂದಿಗಳಾದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಕೈಗೊಳ್ಳುತ್ತಾರೆ. ಇದರಿಂದ ಡೆಂಗ್ಯೊ ಜ್ವರವು ಸಮುದಾಯದಲ್ಲಿ ಹರಡುವುದನ್ನು ತಪ್ಪಿಸಬಹುದು. ರೋಗಿಯ ಡೆಂಗ್ಯೊ ಜ್ವರದ ಇತಿಹಾಸವನ್ನು ಜಿಲ್ಲಾ ಮಟ್ಟಕ್ಕೆ ವರದಿ ಮಾಡುತ್ತಾರೆ.
ಸಕ್ರಿಯ ಕಣ್ಗಾವಲು: ಪ್ರತಿ ಹದಿನೈದು ದಿನಗಳಿಗೊಮ್ಮೆ ಲಾರ್ವ ಸಮೀಕ್ಷೆಯನ್ನು ಕೈಗೊಳ್ಳುತ್ತಾರೆ. ಸಾರ್ವಜನಿಕರಿಗೆ ಸೋಳ್ಳೆಯ ಸಂತಾನೋತ್ಪತ್ತಿಯ ಕುರಿತು ತಿಳಿಸುತ್ತಾರೆ. ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ ನಿರ್ಮೂಲನೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಂಗ್ಯೊ ಜ್ವರ, ಮುಖ್ಯ ಲಕ್ಷಣಗಳ ಕುರಿತು ಮಾಹಿತಿ ನೀಡುತ್ತಾರೆ. ಸರ್ಕಾರಿ ಅಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಲಭ್ಯತೆ ಮಾಹಿತಿ ತಿಳಿಸಲಾಗುತ್ತದೆ.
ಸ್ಥಿತ ಕಣ್ಗಾವಲು: ಪ್ರಾಥಮಿಕ ಆರೋಗ್ಯ ಕೇಂದ್ರಗಳು/ಸಾರ್ವಜನಿಕ ಅಸ್ಪತ್ರೆಗಳು/ಖಾಸಗಿ ಅಸ್ಪತ್ರೆಗಳಲ್ಲಿ ಬರುವ ಹೊರರೋಗಿಗಳನ್ನು ವೈದ್ಯರು ಪರೀಕ್ಷೆ ಮಾಡಿ, ಸಂಶಾಯಾಸ್ಪದ ಡೆಂಗ್ಯೊ ಜ್ವರ ರೋಗಿಗಳನ್ನು ರಕ್ತ ಪರೀಕ್ಷೆಗೆ ಮಾಡಿಸುತ್ತಾರೆ. ಡೆಂಗ್ಯೊ ಜ್ವರವೆಂದು ದೃಢಪಟ್ಟರೇ ಆರೋಗ್ಯ ಸಿಬ್ಬಂದಿಯವರು ಮುಂದಿನ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಡೆಂಗ್ಯೊ ಜ್ವರದ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಸ್ಪತ್ರೆಗಳಲ್ಲಿ ಮುಂದಿನ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಪ್ರಾರಂಬಿಸುತ್ತಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಉನ್ನತ ಮಟ್ಟದ ಅಸ್ಪತ್ರೆಗಳಿಗೆ ನಿರ್ದೇಶಿಸುತ್ತಾರೆ.
ಯಾವೂದೇ ಜ್ವರವಿರಲಿ, ಜ್ವರ ಬಂದಾಗ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ರಕ್ತ ಪರೀಕ್ಷೆ ಮಾಡಿಸಲು ಉದಾಸೀನ ತೋರಿಸಬಾರದು. ರಕ್ತ ಪರೀಕ್ಷೆಯಲ್ಲಿ ಡೆಂಗ್ಯೊ ಜ್ವರವೆಂದು ಬಂದರೇ ವೈದ್ಯರ ಸಲಹೆಯಂತೆ ಪೌಷ್ಠಿಕ ಆಹಾರ ಸೇವನೆ, ದ್ರವ ಆಹಾರ ಪದರ್ಥಗಳ ಸೇವನೆ, ವಿಶ್ರಾಂತಿ ಪಡೆಯುವುದರಿಂದ ಡೆಂಗ್ಯೊ ಜ್ವರವು ತೀವ್ರವಾದ ಹಂತಕ್ಕೆ ಹೋಗುವುದನ್ನು ಮತ್ತು ಸಮುದಾಯದಲ್ಲಿ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನುಬ್ಬರಿಗೆ ಹರಡುವುದನ್ನು ತಪ್ಪಿಸಬಹುದು.
ಅತೀ ಹೆಚ್ಚು ಡೆಂಗ್ಯೊ ಜ್ವರ ಪ್ರಕರಣ ವರದಿಯಾದ ಗ್ರಾಮ ಆಥಾವ ನಗರ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಮತ್ತು ಪಂಚಾಯಿತಿ ವತಿಯಿಂದ ಕೀಟನಾಶಕ ಬಳಸಿ (ಒಳಂಗಣ ಮತ್ತು ಹೊರಾಂಗಣ) ಧೂಮೀಕರಣ ಫ್ರೌಡವಸ್ಥೆಯ ಸೊಂಕಿತ ಸೊಳ್ಳೆಗನ್ನು ನಾಶ ಮಾಡಲಾಗುತ್ತದೆ. ಸೊಳ್ಳೆಗಳ ಸಂತಾನೊತ್ಪತ್ತಿಯನ್ನು ತಡೆಗಟ್ಟಲು ಗಪ್ಪಿ ಮತ್ತು ಗ್ಯಾಂಬೂಸೀಯಾ ಜಾತೀಯ ಮೀನುಗಳನ್ನು ನೀರು ಸಂಗ್ರಹಗಳಲ್ಲಿ ಬಿಡಲಾಗುತ್ತದೆ. ಮೀನುಗಳು ಸೊಳ್ಳೆಗಳ ಮೊಟ್ಟೆಗಳನ್ನು ಲಾರ್ವಗಳನ್ನು ಪ್ಯೊಪಗಳನ್ನು ಆಹಾರವನ್ನಾಗಿಸಿಕೊಂಡು ತಿಂದು ಬಿಡುತ್ತವೆ.

ಹೆಸರು: ಶೇಷಾದ್ರಿ,ಡಿ.ಎನ್.
ಎಂ ಎಸ್ಸಿ(ಸಾರ್ವಜನಿಕ ಆರೋಗ್ಯ ಕೀಟಶಾಸ್ತçರು)
ತುಮಕೂರು ಜಿಲ್ಲೆ.