ತಾಯಿಯ ಮಾನಸಿಕ ಆರೋಗ್ಯಕ್ಕೆ ಮರೆಯಲಾಗದ ಪರಿಣಾಮ – ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪ್ರಭಾವ
ಬೆಂಗಳೂರು: ಗರ್ಭಾವಸ್ಥೆಯಲ್ಲಿರುವಾಗ ಮಾನಸಿಕ ಒತ್ತಡ ಮತ್ತು ಖಿನ್ನತೆ ಉಂಟಾದಲ್ಲಿ, ಅದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಇದು ಹಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಪ್ರಕಾರ, ಗರ್ಭಾವಸ್ಥೆಯಲ್ಲಿ ಖಿನ್ನತೆಯು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಎಡಿಎಚ್‌ಡಿಯಿಂದ ಹಿಡಿದು ಆಟಿಸಂ ವರೆಗೆ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ನಿರಂತರ ಮಾನಸಿಕ ಒತ್ತಡವು ದೇಹದಲ್ಲಿನ ಹಾರ್ಮೋನ್ ಮಟ್ಟಕ್ಕೆ ಅಡ್ಡಿಯಾಗುತ್ತದೆ. ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಹೆಚ್ಚಳವು ತಾಯಿಯ ಮೂಲಕ ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ, ನಂತರ ಮಗುವಿನಲ್ಲಿ ವಿವಿಧ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಗರ್ಭಾವಸ್ಥೆಯಲ್ಲಿ ಖಿನ್ನತೆ ಉಂಟಾಗುವುದಕ್ಕೆ ಕಾರಣವೇನು, ಖಿನ್ನತೆಯ ಲಕ್ಷಣಗಳು ಹೇಗಿರುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಗರ್ಭಾವಸ್ಥೆಯಲ್ಲಿ ಖಿನ್ನತೆ ಉಂಟಾಗುವುದಕ್ಕೆ ಕಾರಣವೇನು?
ಗಾಜಿಯಾಬಾದ್‌ನ ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಡಾ. ಎ.ಕೆ. ವಿಶ್ವಕರ್ಮ ಅವರು ಹೇಳುವ ಪ್ರಕಾರ, ಗರ್ಭಾವಸ್ಥೆಯಲ್ಲಿ ಖಿನ್ನತೆ ಉಂಟಾಗುವುದಕ್ಕೆ ಹಲವಾರು ಕಾರಣಗಳಿವೆ. ಕುಟುಂಬ ಸದಸ್ಯರಿಂದ ಉಂಟಾಗುವ ಮಾನಸಿಕ ಒತ್ತಡ, ಉದಾಹರಣೆಗೆ ಮಹಿಳೆ ಮತ್ತು ಅವಳ ಪತಿ ಅಥವಾ ಅತ್ತೆಯ ನಡುವಿನ ಸಮಸ್ಯೆಗಳು, ಅವಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ, ನಿದ್ರೆಯ ಕೊರತೆ, ಮೊದಲ ಗರ್ಭಧಾರಣೆಯ ಭಯ ಅಥವಾ ಬೆಂಬಲದ ಕೊರತೆಯೂ ಸಹ ಖಿನ್ನತೆಗೆ ಕಾರಣವಾಗಬಹುದು. ಮಹಿಳೆ ಮಾನಸಿಕವಾಗಿ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿದರೆ, ಅದು ಅವಳ ದೇಹದಲ್ಲಿನ ಹಾರ್ಮೋನ್ ಮಟ್ಟವನ್ನು ಅಡ್ಡಿಪಡಿಸುತ್ತದೆ, ಇದು ಆತಂಕ ಮತ್ತು ಖಿನ್ನತೆಗೆ ಕಾರಣವಾಗಬಹುದು.
ಮಾನಸಿಕ ಒತ್ತಡದ ಆರಂಭದಲ್ಲಿ ಕಂಡುಬರುವ ಲಕ್ಷಣಗಳು:
- ನಿರಂತರ ದುಃಖ
- ನಿರಂತರ ಆತಂಕ
- ಯಾವ ಕೆಲಸದಲ್ಲಿಯೂ ಆಸಕ್ತಿಯ ತೊರದಿರುವುದು
- ಅತಿಯಾದ ಚಿಂತೆ
- ಕಡಿಮೆ ನಿದ್ರೆ ಮಾಡುವುದು
ಖಿನ್ನತೆ ತಡೆಗಟ್ಟಲು ಸಲಹೆಗಳು:
- ಲಘು ವ್ಯಾಯಾಮ ಮತ್ತು ಯೋಗ ಮಾಡಿ.
- ಪ್ರತಿದಿನ 7- 8 ಗಂಟೆಗಳ ಕಾಲ ನಿದ್ರೆ ಮಾಡಿ.
- ಮಲಗುವ ಮೊದಲು ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ
- ಖಿನ್ನತೆ ಹೆಚ್ಚುತ್ತಿದ್ದರೆ, ಮನೋವೈದ್ಯರು ಅಥವಾ ಸಲಹೆಗಾರರಿಂದ ಸಹಾಯ ಪಡೆಯಲು ಹಿಂಜರಿಯಬೇಡಿ.
For More Updates Join our WhatsApp Group :




