ದೇವನಹಳ್ಳಿ ತಾಲ್ಲೂಕಿನಲ್ಲೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದ ಗ್ರಾಮವಿದು.!

ಪ್ರತಿ ದಿನ ೩೬೦೦ ಲೀಟರ್ ಹಾಲು ಉತ್ಪಾದಿಸಿ ತಾಲ್ಲೂಕಿನಲ್ಲಿ ಪ್ರಥಮ  ಸ್ಥಾನದಲ್ಲಿದೆ.

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ನಾರಾಯಣಸ್ವಾಮಿ ರವರು ನೀಡಿದ ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೌರಮ್ಮರವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಶಿವಕುಮಾರ್ ಘೋಷಿಸಿದರು.

ಯಲಿಯೂರು ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಆನಂದ್ ಮಾತನಾಡಿ, ನೂತನ ಅಧ್ಯಕ್ಷರಾದ ಗೌರಮ್ಮ ರವರು ಕಳೆದ ೧೫ ವರ್ಷದಿಂದ ಹಾಲು ಉತ್ಪಾದಕರಾಗಿ ಹಾಗೂ ನಿರ್ದೇಶಕರಾಗಿ ಅನುಭವಿಗಳಾಗಿ ಸೇವೆ ಸಲ್ಲಿಸಿದ್ದಾರೆ ಇವರ ಮಾರ್ಗದರ್ಶನದಲ್ಲಿ ಮುಂದೆಯೂ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನವನ್ನು ಮುಂದುವರೆಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಿ ನಮ್ಮೆಲ್ಲ ನಿರ್ದೇಶಕರ ಸಹಕಾರದೊಂದಿಗೆ ಮುಂಚೂಣಿಯಲ್ಲಿ ಸಂಘ ನಡೆಸುತ್ತೇವೆ ಎಂದು ತಿಳಿಸಿದರು.

ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ರಾಮಾಂಜಿನಪ್ಪ ಮಾತನಾಡಿ, ನಮ್ಮ ಸಂಘದಲ್ಲಿ ಪ್ರತಿ ದಿನ ೩೬೦೦ ಲೀಟರ್ ಹಾಲು ಉತ್ಪಾದಿಸಿ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ ಹಾಗೂ ಸಮನಘದ ಒಡೆತನದಲ್ಲಿ ಹಲವು ಆಸ್ತಿ ಹೊಂದಿದೆ ಮತ್ತು ಪ್ರತಿ ತಿಂಗಳು ಅಂಗಡಿಗಳ ಬಾಡಿಗೆ ಬರುವಹಾಗೆ ಹಿರಿಯರು ಮಾಡಿದ್ದಾರೆ.ಪ್ರತಿ ತಿಂಗಳು 3 ಲಕ್ಷ ಆದಾಯ ಬರುತ್ತಿದ್ದು ಅದರಲ್ಲಿ ಕಾರ್ಮಿಕರ ಸಂಬಳ ಕೊಟ್ಟು 2ಲಕ್ಷ ನಿವ್ವಳ ಆದಾಯ ಹೊಂದಿದೆ ಪ್ರತಿ ವರ್ಷ ಬೋನಸ್ ಕೂಡ ನೀಡುತ್ತಿದ್ದೇವೆ ಎಂದು ತಿಳಿಸಿದರು.

Pragati TV Social Connect for more latest u

Leave a Reply

Your email address will not be published. Required fields are marked *