18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ: ಆತಂಕ ವ್ಯಕ್ತ ಪಡಿಸಿದ ಫ್ಯಾನ್ಸ್

ಪೊಗರು ಚಿತ್ರಕ್ಕಾಗಿ ನಟ ಧ್ರುವ ಸರ್ಜಾ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಪಾತ್ರವೇ ಒಂದು ರೀತಿಯಲ್ಲಿ ಕಟ್ಟುಮಸ್ತಾದ ದೇಹ ಬೇಡುತ್ತಿತ್ತು. ಹಾಗಾಗಿ ಜಿಮ್ ನಲ್ಲಿ ಬೆವರು ಇಳಿಸಿಕೊಂಡು ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಅಚ್ಚರಿ ಎನ್ನುವಂತೆ ಕೇವಲ 23 ದಿನಗಳಲ್ಲಿ 18 ಕೆಜಿ ತೂಕವನ್ನು ಅವರು ಇಳಿಸಿಕೊಂಡಿದ್ದಾರೆ. ಅದು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಪಾತ್ರಕ್ಕಾಗಿ ಅನ್ನುವುದು ವಿಶೇಷ.

ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಆ್ಯಕ್ಷನ್ ಪ್ರಧಾನವಾದ ಕಥೆಯನ್ನೇ ಒಳಗೊಂಡಿದೆ. ಆದರೂ, ಧ್ರುವ ತೂಕ ಇಳಿಸಿಕೊಳ್ಳಲೇಬೇಕಾಗಿತ್ತಂತೆ. ನಿರ್ದೇಶಕರು ಹೇಳಿದ ಸಲಹೆ ಮೇರೆಗೆ ಕೇವಲ ಕೆಲವೇ ದಿನಗಳಲ್ಲಿ ಬರೋಬ್ಬರಿ 18 ಕೆಜಿ ತೂಕವನ್ನು ಅವರು ಇಳಿಸಿಕೊಂಡಿದ್ದಾರೆ. ಈ ನಡೆಗೆ ಅಭಿಮಾನಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಈ ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೇರೆ ಮಾರ್ಗದಿಂದ ಟ್ರೈ ಮಾಡಿದ್ದರೆ ದಯವಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ

ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಔಷಧಿಗಳಿವೆ. ಅವುಗಳನ್ನು ಉಪಯೋಗಿಸಿ ಧ್ರುವ ತೂಕ ಇಳಿಸಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಅನುಮಾನ. ಅಂತಹ ಔಷಧಿಗಳು ದೇಹಕ್ಕೆ ಬೇರೆ ರೀತಿಯಲ್ಲಿ ಪರಿಣಾಮ ಬೀರುವುದರಿಂದ ಎಂತಹ ಅಪಾಯ ಬೇಕಾದರೂ ಸಂಭವಿಸಬಹುದು. ಹಾಗಾಗಿ, ಸಡನ್ನಾಗಿ ತೂಕ ಇಳಿಸಿಕೊಳ್ಳುವುದಾಗಲಿ, ಹೆಚ್ಚಿಸಿಕೊಳ್ಳುವುದಾಗಲಿ ಮಾಡಬೇಡಿ ಎಂದು ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಕಾಳಜಿ ವ್ಯಕ್ತ ಪಡಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *