‘Dhurandhar 2’: ಬಾಕ್ಸ್ ಆಫೀಸ್ ಕಲೆಕ್ಷನ್ ಕುಸಿದರೂ ಗಮನಾರ್ಹ.

 'Dhurandhar 2': ಬಾಕ್ಸ್ ಆಫೀಸ್ ಕಲೆಕ್ಷನ್ ಕುಸಿದರೂ ಗಮನಾರ್ಹ.

12ನೇ ದಿನದಲ್ಲಿ 25 ಕೋಟಿ ಗಳಿಕೆ; 2,000 ಕೋಟಿ ಕ್ಲಬ್ ಸೇರುವುದೇ ಸವಾಲು.

‘ಧುರಂಧರ್ 2’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಡಿಸೆಂಬರ್‌ನಲ್ಲಿ ತಮ್ಮ ಮೊದಲ ಚಿತ್ರದೊಂದಿಗೆ ಆದಿತ್ಯ ಧರ್ 1,300 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದರು. ಕೆಲವೇ ತಿಂಗಳುಗಳ ನಂತರ, 1,000 ಕೋಟಿ ಕ್ಲಬ್‌ಗೆ ಪ್ರವೇಶಿಸುವ ಮೂಲಕ ಅವರು ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ‘ಧುರಂಧರ್ 2’ ಚಿತ್ರವು ಕೇವಲ 12 ದಿನಗಳಲ್ಲಿ ಇಡೀ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದೆ. ಎರಡನೇ ಶನಿವಾರ ಮತ್ತು ಭಾನುವಾರದಂದು ನಡೆದ ಕಲೆಕ್ಷನ್​​ಗೆ ಹೋಲಿಸಿದರೆ ಎರಡನೇ ಸೋಮವಾರ ಚಿತ್ರದ ಗಳಿಕೆ ಗಮನಾರ್ಹವಾಗಿ ಕುಸಿದಿದೆ.

‘ಧುರಂಧರ್ 2’ ಚಿತ್ರದ ಒಟ್ಟು ಗಳಿಕೆ 875.17 ಕೋಟಿ ಆದರೆ, ಗ್ರಾಸ್ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ದಾಟಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ 1392 ಕೋಟಿ ಗಳಿಸಿದೆ. ವಿದೇಶದಿಂದ ಸಿನಿಮಾಗೆ 300ಕ್ಕೂ ಅಧಿಕ ಕೋಟಿ ರೂಪಾಯಿ ಹರಿದು ಬಂದಿದೆ. ಏತನ್ಮಧ್ಯೆ, 12ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳ ಪಟ್ಟಿಯಲ್ಲಿ ‘ಧುರಂಧರ್ 2’ ಮೂರನೇ ಸ್ಥಾನದಲ್ಲಿದೆ. ‘ಧುರಂಧರ್ 2’ ವಿಶ್ವ ಮಟ್ಟದ ಗಳಿಕ 1400 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಈ ಚಿತ್ರದ ಗಳಿಕೆ ನಿಧಾನಗತಿ ಅನುಸರಿಸಿದ್ದರಿಂದ 2 ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವುದು ಚಿತ್ರಕ್ಕೆ ಕಷ್ಟ ಆಗಬಹುದು ಎಂದು ಹೇಳಲಾಗುತ್ತಾ ಇದೆ. ದಂಗಲ್ ಸಿನಿಮಾದ ಗಳಿಕೆ 2 ಸಾವಿರ ಕೋಟಿ ರೂಪಾಯಿ ಇದೆ. ಈ ದಾಖಲೆಯನ್ನು ಸಿನಿಮಾ ಮುರಿಯುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *