‘Dhurandhar 2’ ಪ್ರಭಾವ: ವಿವೇಕ್ ಅಗ್ನಿಹೋತ್ರಿ ಆದಿತ್ಯ ಧಾರ್‌ಗೆ ಎಚ್ಚರಿಕೆ.

'Dhurandhar 2' ಪ್ರಭಾವ: ವಿವೇಕ್ ಅಗ್ನಿಹೋತ್ರಿ ಆದಿತ್ಯ ಧಾರ್‌ಗೆ ಎಚ್ಚರಿಕೆ.

‘ಧುರಂದರ್ 2’ ಸಿನಿಮಾ ಮಾಡಿದ ದಾಖಲೆಗಳು ಹಲವು.

‘ಧುರಂದರ್ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಚಿತ್ರವು ಕೇಲವ 11 ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ ಎಂದೇ ಹೇಳಬಹುದು. ಈ ಚಿತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಚಿತ್ರ ಇಷ್ಟ ಆಗಿದೆ. ಈಗ ರಣವೀರ್ ಸಿಂಗ್ ಅವರ ಸಿನಿಮಾ ನೋಡಿದ ‘ದಿ ಕಾಶ್ಮೀರಿ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಜೋತ್ರಿ ಅವರು ಆದಿತ್ಯ ಧಾರ್ ಅವರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ವಿವೇಕ್ ಅವರು ‘ದಿ ಕಾಶ್ಮೀರಿ ಫೈಲ್ಸ್’ ಹೆಸರಿನ ಸಿನಿಮಾ ಮಾಡಿದವರು. ಈ ಸಿನಿಮಾ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕುರಿತಂತೆ ಇತ್ತು. ಇನ್ನು, ಆದಿತ್ಯ ಧಾರ್ ಕೂಡ ಕಾಶ್ಮೀರಿ ಪಂಡಿತರ ಹಿನ್ನೆಲೆ ಹೊಂದಿರುವವರು. ಹೀಗಿರುವಾಗ ಅವರಿಗೆ ಎಚ್ಚರಿಕೆ ರವಾನೆ ಆಗಿದ್ದೇಕೆ ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಅದಕ್ಕೂ ಉತ್ತರ ಇದೆ. ಅವರು ಸಿನಿಮಾ ಹೊಗಳಿದ್ದಾರೆ ಜೊತೆಗೆ ಎಚ್ಚರಿಕೆ ನೀಡಿದ್ದು ಒಳ್ಳೆಯ ಉದ್ದೇಶದಿಂದ.

‘ಎಲ್ಲರೂ ಅಸಾಧಾರಣ ಕೆಲಸ ಮಾಡಿದ್ದಾರೆ. ಆದರೆ ಚಿತ್ರದ ಛಾಯಾಗ್ರಹಣ ಹಾಗೂ ನಿರ್ಮಾಣ ವಿನ್ಯಾಸ ಸಿನಿಮಾ ಮತ್ತೊಂದು ಹಂತಕ್ಕೆ ಹೋಯಿತು. ಸಿನಿಮಾದಲ್ಲಿ, ಕ್ಯಾಮೆರಾ ಮತ್ತು ನಿರ್ಮಾಣ ವಿನ್ಯಾಸ ಪರಸ್ಪರ ಸಂಬಂಧ ಹೊಂದಿವೆ. ಎರಡೂ ಸಂಪೂರ್ಣ ಸಾಮರಸ್ಯವಿಲ್ಲದಿದ್ದರೆ, ಒಂದು ಚಿತ್ರವು ಒಂದು ಮೇರುಕೃತಿಯ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಧುರಂಧರ್‌ನಲ್ಲಿ ಅದನ್ನು ಕಾಣಬಹುದು’ ಎಂದು ಹೇಳಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಆದಿತ್ಯ ಅವರನ್ನು ಎಚ್ಚರಿಸುವ ಮೂಲಕ ಅವರು ತಮ್ಮ ಪೋಸ್ಟ್ ಕೊನೆ ಮಾಡಿದ್ದಾರೆ. ‘ಅನುಭವದಿಂದ ಬಂದ ಒಂದು ಅಪೇಕ್ಷಿಸದ ಮಾತು: ನೀವು ಚುರುಕಾಗಿದ್ದೀರಿ. ನಿಮ್ಮ ದಾರಿ ನಮಗೆ ಗೊತ್ತು. ಆದರೆ, ವ್ಯವಸ್ಥೆಯ ಬಗ್ಗೆ ಗಮನವಿರಲಿ, ಅದು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದೂ ಆಗಿರಬಹುದು’ ಎಂದು ಎಚ್ಚರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *