‘Dhurandhar 2’ ಟ್ರೇಲರ್ ರಿಲೀಸ್: ಬೀಸ್ಟ್ ಮೋಡ್ನಲ್ಲಿ ರಣವೀರ್ ಸಿಂಗ್.

'Dhurandhar 2' ಟ್ರೇಲರ್ ರಿಲೀಸ್: ಬೀಸ್ಟ್ ಮೋಡ್ನಲ್ಲಿ ರಣವೀರ್ ಸಿಂಗ್.

ಆ್ಯಕ್ಷನ್ ಮಯ ಟ್ರೇಲರ್‌ಗೆ ಫ್ಯಾನ್ಸ್ ಫಿದಾ.

ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ರಿಲೀಸ್​​ಗೆ ರೆಡಿ ಆಗುತ್ತಿದೆ. ಮಾರ್ಚ್​ 19ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್​​ಗಾಗಿ ಫ್ಯಾನ್ಸ್ ಕಾದಿದ್ದರು. ಇಂದು ಬೆಳಿಗ್ಗೆ 11.01ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಕಂಡಿದೆ. ಈ ಟ್ರೇಲರ್ ನೋಡಿದ ಬಳಿಕ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದೆ.

ರೆಹಮಾನ್ ಡಕಾಯಿತ್ ಹತ್ಯೆಯನ್ನು ರೆಹಮಾನ್ ಅಲಿ ಮಜಾರಿ (ರಣವೀರ್ ಸಿಂಗ್) ಮಾಡುತ್ತಾನೆ. ಭೀಕರವಾಗಿ ಈ ಕೊಲೆ ನಡೆಯುತ್ತದೆ. ಈ ಕೊಲೆ ಬಳಿಕ ‘ಧುರಂಧರ್’ ಸಿನಿಮಾ ಕೊನೆ ಆಗಿತ್ತು. ಈಗ ‘ಧುರಂಧರ್ 2’ ಸಿನಿಮಾ ಇಲ್ಲಿಂದಲೇ ಆರಂಭ ಆಗುತ್ತಿದೆ. ಹಮ್ಜಾ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ರಿವೇಂಜ್​​ಗೆ ಇಳಿಯುತ್ತಾನೆ. ಹೀಗಾಗಿ, ಇಡೀ ಸಿನಿಮಾ ಉದ್ದಕ್ಕೂ ಸೇಡಿನ ಕತೆ ಇರಲಿದೆ ಎಂಬುದು ಸ್ಪಷ್ಟವಾಗಿದೆ.

ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ಹಮ್ಜಾ  ಮೂಲ ಹೆಸರು ಜಸ್ಕಿರತ್ ಸಿಂಗ್ ರಂಗಿ. ಆತ ಹಮ್ಜಾ ಆಗಲು ಒಪ್ಪಿಕೊಂಡಿದ್ದು ಹೇಗೆ? ಆತನನ್ನು ಈ ಸೀಕ್ರೆಟ್ ಮಿಷನ್​​ಗೆ ಆಯ್ಕೆ ಮಾಡಿಕೊಂಡಿದ್ದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ಟ್ರೇಲರ್​​ನಲ್ಲಿ ತೋರಿಸಲಾಗಿದೆ. ಸಿನಿಮಾ ರಕ್ತಸಿಕ್ತವಾಗಿರಲಿದೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ.

‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಪಾಕಿಸ್ತಾನದವರಂತೆ ಇದ್ದು, ಸ್ಪೈ ಆಗಿ ಕೆಲಸ ಮಾಡುತ್ತಾರೆ. ಸಿನಿಮಾ ಭರ್ಜರಿ ಆ್ಯಕ್ಷನ್​​ಗಳನ್ನು ಒಳಗೊಂಡಿತ್ತು. ಕಂದಾಹಾರ್ ಹೈಜ್ಯಾಕ್, ಮುಂಬೈ ದಾಳಿ ಇತ್ಯಾದಿ ವಿಷಯಗಳನ್ನು ಒಳಗೊಂಡಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *