ರಣ್ವೀರ್ ಸಿಂಗ್ ನಟನೆಯ ಚಿತ್ರವು ದೊಡ್ಡ ಪರದೆ ಮೇಲೆ ಮತ್ತೆ ಕಾಣಿಸುತ್ತದೆ
ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಮಾರ್ಚ್ 18ರಂದು ಸಿನಿಮಾದ ಪ್ರೀಮಿಯರ್ ಶೋ ಆಯೋಜನೆಗೊಳ್ಳಲಿದೆ. ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಇದೇ ಸಿನಿಮಾದ ಮೊದಲ ಭಾಗ ‘ಧುರಂಧರ್’ ಮರು ಬಿಡುಗಡೆ ಆಗಿದೆ. 2025ರ ಡಿಸೆಂಬರ್ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಧುರಂಧರ್’ ಸಿನಿಮಾ ಇದೀಗ ಮಾರ್ಚ್ 12 ರಂದು ಮರು ಬಿಡುಗಡೆ ಆಗಿದ್ದು, ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
‘ಧುರಂಧರ್ 2’ ಸಿನಿಮಾಕ್ಕೆ ಪ್ರೇಕ್ಷಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ‘ಧುರಂಧರ್’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಸುಮಾರು 250 ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ವಿದೇಶಗಳಲ್ಲಿ ವಿಶೇಷವಾಗಿ ಅಮೆರಿಕ, ಕೆನಡಾಗಳಲ್ಲಿ ಮಾರ್ಚ್ 13 ರಿಂದ ‘ಧುರಂಧರ್’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಉತ್ತರ ಅಮೆರಿಕ ಒಂದರಲ್ಲೇ 185 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ವಿಶ್ವದಾದ್ಯಂತ ಒಟ್ಟು 500 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಮರು ಬಿಡುಗಡೆ ಆಗುತ್ತಿರುವ ಸಿನಿಮಾ ಒಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗುತ್ತಿರುವುದು ಅಪರೂಪ.
ಎರಡು ಪಾರ್ಟ್ನಲ್ಲಿ ಬಿಡುಗಡೆ ಆಗುವ ಹಲವು ಸಿನಿಮಾಗಳು, ಎರಡನೇ ಭಾಗದ ಬಿಡುಗಡೆಗೆ ಮುಂಚೆ ಹೀಗೆ ಮೊದಲ ಪಾರ್ಟ್ ಅನ್ನು ರಿ-ರಿಲೀಸ್ ಮಾಡುತ್ತಾರೆ. ‘ಬಾಹುಬಲಿ’, ‘ಕೆಜಿಎಫ್’, ‘ಪುಷ್ಪ’ ಸಿನಿಮಾಗಳು ಸಹ ರಿ-ರಿಲೀಸ್ ಆಗಿದ್ದವು. ಈಗ ‘ಧುರಂಧರ್’ ಸಿನಿಮಾ ಸಹ ಮರು ಬಿಡುಗಡೆ ಆಗುತ್ತಿದೆ. ‘ಧುರಂಧರ್ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರೀಮಿಯರ್ ಶೋ ಮಾರ್ಚ್ 18ರಿಂದಲೇ ಪ್ರದರ್ಶನವಾಗಲಿದೆ.
For More Updates Join our WhatsApp Group :




