ಬಸವಣ್ಣನ ಪ್ರತಿಮೆ ನಿರ್ಮಾಣಕ್ಕೆ ವಿರೋಧ ಮಾಡಿದ್ರಾ ಶಿಕ್ಷಣ ಸಚಿವ ಬಿ ಸಿ ನಾಗೇಶ್..?

ತುಮಕೂರು : ತಿಪಟೂರು ನಗರದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಕೋಡಿ ಸರ್ಕಲ್ನಲ್ಲಿ ನಡೆಯುತ್ತಿರುವ ಸರ್ಕಲ್ ಅಭಿವೃದ್ಧಿ ಈಗ ಹಲವಾರು ಚರ್ಚೆಯ ಕೇಂದ್ರ ಬಿಂದುವಾಗಿದೆ. ಕಾರಣ ವಿವೇಕಾನಂದರ ಪ್ರತಿಮೆಯನ್ನು ಶಾಸಕರು ಮತ್ತು ಅವರ ಅನುಯಾಯಿಗಳು ನಿರ್ಮಿಸಲು ಹೊರಟಿದ್ದು, ಆದರೆ ಬಹು ಸಂಖ್ಯಾತ ಲಿಂಗಾಯಿತ ಸಮುದಾಯದ ಅನುಯಾಯಿಗಳು ಇರುವ ತಿಪಟೂರಿನಲ್ಲಿ ಕೋಡಿ ಸರ್ಕಲ್ಗೆ ಅಶ್ವರೂಢ ಬಸವಣ್ಣನವರ ಪ್ರತಿಮೆ ನಿರ್ಮಿಸಬೇಕೆಂದು ತಾಲೂಕಿನ ಬಹು ಜನರ ಬೇಡಿಕೆಯಾಗಿದೆ.

ಇನ್ನೂ ಮನವಿ ಪತ್ರ ಸಲ್ಲಿಸಲು ಹೋದಂತಹ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವರ್ತನೆ ಕಂಡು ಲಿಂಗಾಯಿತ ಸಮಾಜದ ಮುಖಂಡರುಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಗುರು ಬಸವಣ್ಣನವರ ಪುತ್ತಳಿ ನಿರ್ಮಿಸಲು ಲಿಂಗಾಯತ ಧರ್ಮ ಆಗ್ರಹಿಸಿದ್ದು, ತಾಲೂಕಿನಲ್ಲಿ ಒಂದು ಜಗಜ್ಯೋತಿ ಬಸವಣ್ಣನವರ ಪುತ್ತಳಿ ಇಲ್ಲ ನಗರದ ಹೆಬ್ಬಾಗಿಲಿಗೆ ಅಶ್ವರೂಡ ಬಸವಣ್ಣನವರ ಪುತ್ತಳಿ ನಿರ್ಮಿಸಿಯೇ ತೀರುತ್ತೇವೆ. ಮನವಿ ಪತ್ರ ಸಲ್ಲಿಸಲು ಹೋದ ಸಂದರ್ಭದಲ್ಲಿ ಸ್ಥಳೀಯ ಶಾಸಕರಿಂದ ಸ್ಪಂದನೆ ಸಿಕ್ಕಿಲ್ಲ. ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಸಮಾಜದ ಮುಖಂಡರು. ಇನ್ನೂ ಲಂಡನ್, ಅಮೇರಿಕಾ ಹೊರ ರಾಜ್ಯ ಮತ್ತು ಹೊರ ರಾಷ್ಟ್ರಗಳಲ್ಲಿ ಬಸವಣ್ಣನ ಪುತ್ತಳಿ ಇದೆ, ಅವರ ಅನುಭವ ಮಂಟಪ ದೇಶವಿದೇಶಗಳ ಪಾರ್ಲಿಮೆಂಟಿಗೆ ಮಾದರಿಯಾಗಿದೆ ಎಂದರು.

ಇನ್ನೂ ತಿಪಟೂರು ನಗರದ ಖಾಸಗಿ ಹೋಟೆಲ್ನಲ್ಲಿ ಲೊಕೇಶ್ವರ್ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕಿನ ಎಲ್ಲಾ ಜನಾಂಗದ ಮುಖಂಡರುಗಳು ಭಾಗಿಯಾಗಿ ಒಮ್ಮತದಿಂದ ನಗರದ ಸರ್ಕಲ್ನಲ್ಲಿ ಅಶ್ವಾರೂಢ ಬಸವಣ್ಣನವರ ಪುತ್ತಳಿ ನಿರ್ಮಿಸುವ ಸಲುವಾಗಿ ನಿರ್ಧಾರ ಮಾಡಿದರು. ಲಿಂಗಾಯತ ಧರ್ಮದ ಅನುಯಾಯಿಗಳು, ಬಸವ ಸೇನೆ, ಬಸವ ಬಳಗ ಹೀಗೆ ಹಲವಾರು ಸಂಘಗಳು  ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *