ಕ್ಷುಲ್ಲಕ ಕಾರಣಕ್ಕೆ ಯುವಕನ ಭೀಕರ ಕೊ*.
ದೇವನಹಳ್ಳಿ: ಇಬ್ಬರ ನಡುವಿನ ಹಳೆಯ ದ್ವೇಷ, ಅಸೂಯೆಗೆಲ್ಲಾ ರಕ್ತಪಾತವಾಗುವವುದನ್ನು ನಾವು ಕಾಣುತ್ತೇವೆ. ಆದರೆ ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನನ್ನೇ ಕೊಲೆ ಮಾಡಿದ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ವಿನಾಯಕ ನಗರದಲ್ಲಿ ಈ ದುರಂತ ನಡೆದಿದ್ದು, ಹಲವು ದಿನಗಳಿಂದ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಓರ್ವ ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್
ಹೊಸವರ್ಷದ ಸಂದರ್ಭದಲ್ಲಿ ಪಾರ್ಟಿ ಮಾಡುತ್ತಿದ್ದಾಗ ಆರೋಪಿಗಳು ಸುಶಾಂತ್ ಎಂಬ ಯುವಕನ ಬಳಿ ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ಕೇಳಿದ್ದರು. ಆದರೆ ಸುಶಾಂತ್ ನಿರಾಕರಿಸಿದ್ದ. ಈ ವೇಳೆ ಮ್ಯಾಚ್ ಬಾಕ್ಸ್ ತಂದುಕೊಡು ಎಂದು ಒತ್ತಾಯಿಸಿದರೂ ಸುಶಾಂತ್ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಉಜ್ವಲ್ ಪ್ರಸಾದ್, ಪ್ರಿನ್ಸ್ ಮತ್ತು ಸೂರಜ್ ರಾಮ್ , ಓರ್ವ ಅಪ್ರಾಪ್ತ ಸೇರಿ ನಾಲ್ವರು ಸುಶಾಂತ್ನನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದರು.
ಸುಶಾಂತ್ನನ್ನು ಹಿಡಿದು 2ನೇ ಮಹಡಿಯಿಂದ ಕೆಳಕೆ ತಳ್ಳಿದ್ದರು. ಈ ಘಟನೆಯು ಸ್ಥಳೀರನ್ನು ಬೆಚ್ಚಿ ಬೀಳಿಸಿತ್ತು. ಕೃತ್ಯ ಎಸಗಿದ ನಾಲ್ವರಲ್ಲಿ ಓರ್ವ ಅಪ್ರಾಪ್ತನಾಗಿದ್ದು, ನಂತರ ಉಳಿದ ಮೂವರೊಟ್ಟಿಗೆ ಈತನೂ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯ ಮತ್ತು ಸ್ಥಳೀಯರಿಂದ ಸಿಕ್ಕ ಮಾಹಿತಿ ಆಧರಿಸಿ ಆರೋಪಿಗಳನ್ನು ಹುಡುಕಿ ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
For More Updates Join our WhatsApp Group :




