ಮೊದಲನೇ ಅಲೆ ಕೊರೋನಾ ಸೋಂಕಿಗೂ, ಎರಡನೇ ಅಲೆ ಕೊರೋನಾ ಸೋಂಕಿಗೂ ಏನು ವ್ಯತ್ಯಾಸ..?

ನವದೆಹಲಿ: ಕರೋನಾ ಸಾಂಕ್ರಾಮಿಕ ಸೋಂಕಿನ ಮೊದಲನೇ ಅಲೆಯಲ್ಲಿ ವೆಂಟಿಲೇಟರ್ ಬೇಕಿತ್ತು ಆದರೆ ಎರೆಡನೇ ಅಲೆಯು ಆಕ್ಸಿಜನ್ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ,  ಎರೆಡನೆ ಅಲೆಯಲ್ಲಿ ಲಕ್ಷಣ ರಹಿತ ಸೊಂಕಿತರು ಹೆಚ್ಚಾಗುತ್ತಿದ್ದಾರೆ. ಸೊಂಕಿತರಿಗೆ ಸಂಭಂಧಿಸಿದಂತೆ ಎರೆಡೂ ಅಲೆಯಲ್ಲಿ 40 ದಾಟಿದವರಿಗೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ.

ಕೊರೋನ ಎರೆಡೂ ಅಲೆಯಲ್ಲೂ 40 ವರ್ಷ ಮೇಲ್ಪಟ್ಟವರು ಮತ್ತು ವಯಸ್ಸಾದವರು ಹೆಚ್ಚಾಗಿ ಸೊಂಕಿಗೆ ತುತ್ತಾಗುತ್ತಿದ್ದಾರೆ. ಈ ಎರೆಡೂ ಅಲೆಯಲ್ಲಿ ಒಟ್ಟು ಸೊಂಕಿತರಲ್ಲಿ ಶೇ.70ಕ್ಕಿಂತ ಅಧಿಕ ಪಾಲು ಈ ವರ್ಗದವರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೆ ವೇಳೆ, ಎರಡನೆ ಅಲೆಯಲ್ಲಿ ಆಕ್ಸಿಜನ್ ಗೆ ಬೇಡಿಕೆ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ಮೊದಲನೇ ಅಲೆಯಲ್ಲಿ ಗಂಟಲು ನೋವು, ಒಣ ಕೆಮ್ಮು, ಕೀಲು ಹಾಗೂ ತಲೆನೋವು ಇನ್ನಿತರ ಕಂಡುಬಂದಿದ್ದರೆ  ಎರೆಡನೆ ಅಲೆಯಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಮೊದಲನೇ ಅಲೆಗೆ ಹೋಲಿಸಿದರೆ ಎರೆಡನೆ ಅಲೆಯಲ್ಲಿ ಶೇ.54.5 ರಷ್ಟು ರೋಗಿಗಳಿಗೆ ಆಕ್ಸಿಜನ್ ಬೇಕಾಗಿದೆ ಹಾಗೂ ಮೊದಲನೇ ಅಲೆಯಲ್ಲಿ ಒಟ್ಟು ಸೊಂಕಿತರಲ್ಲಿ 30ರ ಒಳಗಿನವರು ಶೇ. 31 ರಷ್ಟು ಇದ್ದರು, ಆದರೆ ಅದು ಎರೆಡನೆ ಅಲೆಗೆ ಶೇ.32ಕ್ಕೆ ಏರಿಕೆಯಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್ ತಿಳಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *