ಲೋಕೇಶ್ ಕನಗರಾಜ್ ಅವರ ನಿರ್ದೇಶನದ ‘ಕೂಲಿ’ ಸಿನಿಮಾ ನಿಗದಿತ ಬಜೆಟ್ ಮತ್ತು ಸಮಯದೊಳಗೆ ಪೂರ್ಣಗೊಂಡಿದೆ. ನಾಗಾರ್ಜುನ ಅವರು ಬ್ಯಾಂಕಾಕ್‌ನಲ್ಲಿನ ಚಿತ್ರೀಕರಣದ ಬಗ್ಗೆ ಮಾತನಾಡಿ, ಒಂದು ದಿನ ವಿಳಂಬವಾದರೂ 5 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿತ್ತೆಂದು ಹೇಳಿದರು. ಲೋಕೇಶ್ ಅವರ ಪ್ಲ್ಯಾನಿಂಗ್ ಮತ್ತು ಸಮಯಪ್ರಜ್ಞೆಯನ್ನು ಇತರ ನಿರ್ದೇಶಕರು ಅನುಸರಿಸಬೇಕೆಂದು ಅವರು ಸೂಚಿಸಿದರು.
ಸಿನಿಮಾ ಆರಂಭಿಸುವಾಗ ಒಂದು ಬಜೆಟ್ ಎಂಬುದು ಫಿಕ್ಸ್ ಆಗಿರುತ್ತದೆ. ಆದರೆ, ಆ ಬಜೆಟ್ನಲ್ಲಿ ಸಿನಿಮಾ ಮಾಡಿ ಮುಗಿಸೋದು ಎಂದರೆ ಅದು ದೊಡ್ಡ ಸವಾಲೇ ಆಗಿರುತ್ತದೆ. ಅಲ್ಲದೆ, ದಿನಗಳು ಕೂಡ ವಿಸ್ತರಣೆ ಆದ ಉದಾಹರಣೆ ಇದೆ. ಆದರೆ, ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಇದಕ್ಕೆ ಭಿನ್ನ. ಅನೇಕ ಸ್ಟಾರ್ ನಿರ್ದೇಶಕರು ವಿದೇಶಕ್ಕೆ ಶೂಟ್ಗೆ ತೆರಳಿದರೆ ಹೆಚ್ಚಿನ ದಿನ ತೆಗೆದುಕೊಳ್ಳುತ್ತಾರೆ. ಆದರೆ, ಲೋಕೇಶ್ ಕನಗರಾಜ್ ಹಾಗಲ್ಲ. ‘ಕೂಲಿ’ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದು, ಅಕ್ಕಿನೇನಿ ನಾಗಾರ್ಜುನ ಈ ವಿಚಾರ ರಿವೀಲ್ ಮಾಡಿದರು.
ಹೈದರಾಬಾದ್ನಲ್ಲಿ ‘ಕೂಲಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ನಡೆಯಿತು. ಈ ವೇಳೆ ‘ಕೂಲಿ’ ಸಿನಿಮಾದಲ್ಲಿ ನಟಿಸಿದ ನಾಗಾರ್ಜುನ ಅವರು ಈ ಸಿನಿಮಾ ಬಗ್ಗೆ ಮಾತನಾಡಿದರು. ‘ಕೂಲಿ’ ಸಿನಿಮಾದ ಫೈನಲ್ ಶೆಡ್ಯೂಲ್ ಬ್ಯಾಂಕಾಕ್ನಲ್ಲಿ ಇತ್ತಂತೆ. ಈ ಚಿತ್ರಕ್ಕೆ ಎಷ್ಟು ದಿನ ಪ್ಲ್ಯಾನ್ ಮಾಡಲಾಗಿತ್ತೋ ಅಷ್ಟೇ ದಿನಕ್ಕೆ ಶೂಟ್ ಪೂರ್ಣಗೊಳಿಸಿದರಂತೆ ಲೋಕೇಶ್. ಒಂದೊಮ್ಮೆ ಒಂದು ದಿನ ವಿಸ್ತರಣೆ ಆಗಿದ್ದರೂ ನಿರ್ಮಾಪಕರಿಗೆ 5 ಕೋಟಿ ರೂಪಾಯಿಯಷ್ಟು ಹೊರೆ ಆಗುತ್ತಿತ್ತು ಎಂದು ನಾಗಾರ್ಜುನ ವಿವರಿಸಿದರು.
ಲೋಕೇಶ್ ಕನಗರಾಜ್ ಅವರು ಎಲ್ಲವನ್ನೂ ಸರಿಯಾಗಿ ಪ್ಲ್ಯಾನ್ ಮಾಡುತ್ತಾರೆ. ಯಾವ ರೀತಿಯಲ್ಲಿ ಸಿನಿಮಾ ಮೂಡಿ ಬರಬೇಕು ಎಂಬುದನ್ನು ಮೊದಲೇ ಯೋಚಿಸಿರುತ್ತಾರೆ. ಈ ರೀತಿಯ ಸ್ಮಾರ್ಟ್ ಪ್ಲ್ಯಾನ್ನ ಎಲ್ಲರೂ ಮಾಡಬೇಕಿದೆ ಎಂದು ನಾಗಾರ್ಜುನ ಅವರು ಅಭಿಪ್ರಾಯ ಪಟ್ಟರು.
ತೆಲುಗಿನಲ್ಲಿ ಪುರಿ ಜಗನ್ನಾಥ್, ಅನಿಲ್ ರವಿಪುಡಿ ಮೊದಲಾದವರು ಇದೇ ರೀತಿಯ ರೆಪ್ಯುಟೇಷನ್ ಇಟ್ಟುಕೊಂಡಿದ್ದಾರೆ ಎನ್ನಬಹುದು. ಈಗ ಈ ಸಾಲಿಗೆ ತಮಿಳು ನಿರ್ದೇಶಕ ಲೋಕೇಶ್ ಕನರಾಜ್ ಹೆಸರು ಕೂಡ ಸೇರ್ಪಡೆ ಆಗಿದೆ. ‘ಕೂಲಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಉಪೇಂದ್ರ, ಆಮಿರ್ ಖಾನ್, ಅಕ್ಕಿನೇನಿ ನಾಗಾರ್ಜುನ ಮೊದಲಾದವರು ನಟಿಸಿದ್ದಾರೆ. ಆಗಸ್ಟ್ 14ರಂದು ಚಿತ್ರವು ತೆರೆಗೆ ಬರಲಿದೆ. ಈ ಸಿನಿಮಾ ಹಿಂದಿಯ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ನಟನೆಯ ‘ವಾರ್ 2’ ಹಾಗೂ ಕನ್ನಡದ ರಾಜ್ ಬಿ ಶೆಟ್ಟಿ, ಉಪೇಂದ್ರ, ಶಿವರಾಜ್ಕುಮಾರ್ ಅಭಿನಯದ ‘45’ ಚಿತ್ರದ ಜೊತೆ ಸ್ಪರ್ಧೆಗೆ ಇಳಿದಿದೆ. ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
For More Updates Join our WhatsApp Group: