ಬೆಂಗಳೂರು: ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ವಿಚಾರವಾಗಿ ಸರ್ಕಾರಕ್ಕೆ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ. ಸುರೇಶ್, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಯಾರ ವಿರೋಧವೂ ಇಲ್ಲ, ಆದರೆ ಲಾಠಿ ಹಿಡಿದು ಮಾರ್ಚ್ ಮಾಡುವುದಕ್ಕೆ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಠಿ ಹಿಡಿದುಕೊಂಡು ಪಥಸಂಚಲನ ಮಾಡುವ ಸಂಸ್ಕೃತಿ ಹಿಂದಿನ ಕಾಲದಲ್ಲಿ ಸರಿ ಎನಿಸಿರಬಹುದು. ಆದರೆ ಬೇರೆ ಸಮುದಾಯಗಳು ಅಥವಾ ಸಂಘಟನೆಗಳು ಅದೇ ರೀತಿ ಲಾಠಿ ಹಿಡಿದುಕೊಂಡು ಓಡಾಡಲು ಅವಕಾಶ ನೀಡಲಾಗುವುದೇ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಸ್ಪಷ್ಟನೆ ಬೇಕು ಎಂದು ಅವರು ಆಗ್ರಹಿಸಿದರು.
For More Updates Join our WhatsApp Group :




