ಮಳೆಗಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನ ತಪ್ಪದೆ ಮಾಡಿ; ಯಾವ ರೋಗವೂ ಬರಲ್ಲ.

ಮಳೆಗಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನ ತಪ್ಪದೆ ಮಾಡಿ; ಯಾವ ರೋಗವೂ ಬರಲ್ಲ.

ಮಳೆಗಾಲದಲ್ಲಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ, ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಯಾವ ರೋಗವೂ ಬರಬಾರದು, ಆರೋಗ್ಯವಾಗಿರಬೇಕು ಎಂದು ಬಯಸುವವರು, ಇಂದಿನಿಂದಲೇ ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರನ್ನು ಕುಡಿಯಲು ಪ್ರಾರಂಭಿಸಿ. ಈ ಸಣ್ಣ ಅಭ್ಯಾಸದಿಂದ ಅನೇಕ ರೋಗಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಜೊತೆಗೆ, ಯಾಕೆ ಮಳೆಗಾಲದಲ್ಲಿ ಬಿಸಿಯಾಗಿರುವ ನೀರನ್ನು ಕುಡಿಯಬೇಕು.

ಮಳೆಗಾಲದ ವಾತಾವರಣ ಬಹಳ ಖುಷಿ ಕೊಡುತ್ತದೆ. ತಂಪಾದ ಗಾಳಿ, ಮೋಡ, ಮಳೆ ಎಲ್ಲವೂ ಮನಸ್ಸಿಗೆ ಹಿತವಾಗಿರುತ್ತದೆ. ಆದರೆ ಈ ಸಮಯದಲ್ಲಿ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ನಿರ್ಲಕ್ಷಿಸುವಂತಿಲ್ಲ. ಅದರಲ್ಲಿಯೂ ಆಹಾರ, ನೀರು ಇವೆಲ್ಲವೂ ಸರಿಯಾದ ರೀತಿಯಲ್ಲಿ ಸೇವನೆ ಮಾಡಬೇಕಾಗುತ್ತದೆ. ಹೇಗೆ, ಬೇಸಿಗೆ ಕಾಲದಲ್ಲಿ ತಣ್ಣೀರನ್ನು ಕುಡಿಯುತ್ತೇವೆಯೋ ಹಾಗೆಯೇ ಮಳೆ ಬರುವ ಸಮಯದಲ್ಲಿ ಬೆಚ್ಚಗಿನ ನೀರನ್ನು ಕುಡಿಯಬೇಕಾಗುತ್ತದೆ. ಆದರೆ ತಂಪಾದ ವಾತಾವರಣದಲ್ಲಿ ಜನರು ಬಾಯಾರಿಕೆ ಆಗುವುದಿಲ್ಲ ಎಂದು ನೀರು ಕುಡಿಯುವುದನ್ನೇ ಕಡಿಮೆ ಮಾಡುತ್ತಾರೆ. ಇನ್ನು ಕೆಲವರು ಬಿಸಿ ನೀರನ್ನು ಕುಡಿಯಲು ಇಷ್ಟಪಡದೆ ಸಿಕ್ಕ ಸಿಕ್ಕಲ್ಲಿ ನೀರು ಕುಡಿಯುತ್ತಾರೆ. ಆದರೆ ನಿಮಗೆ ತಿಳಿದಿರಲಿ ಮಳೆಗಾಲದಲ್ಲಿ ಬೆಚ್ಚಗಿನ ಅಥವಾ ಬಿಸಿಯಾಗಿರುವ ನೀರನ್ನು ಕುಡಿಯುವುದು ಬಹಳ ಮುಖ್ಯ. ಅದರಲ್ಲಿಯೂ ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರನ್ನು ಕುಡಿಯುವುದು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾಕೆ ಮಳೆಗಾಲದಲ್ಲಿ ಬಿಸಿಯಾಗಿರುವ ನೀರನ್ನು ಕುಡಿಯಬೇಕು? ಬಿಸಿನೀರು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಹೇಗೆ ಸಹಾಯ ಮಾಡುತ್ತದೆಯೇ? ಬೆಳಿಗ್ಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?

ಮಳೆಗಾಲದಲ್ಲಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ, ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಸೋಂಕುಗಳ ಅಪಾಯ ಹೆಚ್ಚಾಗಲು ಇದೇ ಕಾರಣ. ಮಾತ್ರವಲ್ಲ ಶೀತ, ಕೆಮ್ಮು, ಗಂಟಲು ನೋವು, ಹೊಟ್ಟೆ ನೋವು, ಅತಿಸಾರ ಮತ್ತು ವೈರಲ್ ಕಾಯಿಲೆಗಳು ಬೇಗನೆ ಹರಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಬಿಸಿನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ, ಹಲವು ರೋಗಗಳು ಬರುವುದನ್ನು ತಡೆಗಟ್ಟಬಹುದು.

ಜೀರ್ಣಶಕ್ತಿ ಹೆಚ್ಚಾಗುತ್ತದೆ

ದೆಹಲಿಯ ಏಮ್ಸ್ನ ಗ್ಯಾಸ್ಟ್ರೋ ತಜ್ಞೆ ಡಾ. ಅನನ್ಯ ಗುಪ್ತಾ ಅವರ ಪ್ರಕಾರ, ಮಳೆಗಾಲದಲ್ಲಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಬಿಸಿನೀರು ಕುಡಿದಾಗ, ಅದು ದೇಹದೊಳಗೆ ಹೋಗಿ ಸಂಗ್ರಹವಾದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯನ್ನು ಶುದ್ಧೀಕರಿಸುತ್ತದೆ ಮತ್ತು ಗ್ಯಾಸ್ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಬಿಸಿನೀರು ತುಂಬಾ ಪ್ರಯೋಜನಕಾರಿಯಾಗಿದೆ.

Leave a Reply

Your email address will not be published. Required fields are marked *