ನಿಮಗೆ ಥೈರಾಯ್ಡ್ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಇದು ವಿಷಕ್ಕೆ ಸಮ.

ನಿಮಗೆ ಥೈರಾಯ್ಡ್ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಇದು ವಿಷಕ್ಕೆ ಸಮ.

ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಆಗಾಗ ಶೀತ, ಕೆಮ್ಮು, ಮೊಡವೆಗಳು, ಆತಂಕ ಇವೆಲ್ಲವೂ ಥೈರಾಯ್ಡ್‌ನ ಲಕ್ಷಣಗಳಾಗಿವೆ. ಈ ಸಮಸ್ಯೆ ಒಮ್ಮೆ ಆರಂಭವಾದರೆ ಅದು ದೀರ್ಘಕಾಲದವರೆಗಿರುತ್ತದೆ. ಒಮ್ಮೆ ಥೈರಾಯ್ಡ್ ಪತ್ತೆಯಾದರೆ, ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಾತ್ರವಲ್ಲ, ಆಹಾರ ಸೇವನೆ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಹಾಗಾದರೆ ಥೈರಾಯ್ಡ್ ಇರುವವರಿಗೆ ಯಾವ ಆಹಾರ ಒಳ್ಳೆಯದಲ್ಲ ಮತ್ತು ಯಾಕೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿಗಳು ಅವಶ್ಯಕ. ಆದರೆ ಕೇವಲ ಔಷಧಿಗಳನ್ನು ಸೇವನೆ ಮಾಡಿದರೆ ಸಾಕಾಗುವುದಿಲ್ಲ. ಆಹಾರ ಸೇವನೆ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಥೈರಾಯ್ಡ್ (Thyroid) ಸಮಸ್ಯೆಗಳಿದ್ದವರು ತಪ್ಪಿಸಬೇಕಾದ 5 ಆಹಾರಗಳು ಇಲ್ಲಿವೆ. ಇವುಗಳನ್ನು ಸೇವಿಸುವುದರಿಂದ ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಪರಿಣಾಮಗಳು ಸಹ ಕಡಿಮೆಯಾಗಬಹುದು. ಹಾಗಾಗಿ ಕೆಲವು ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಥೈರಾಯ್ಡ್ ಇರುವವರಿಗೆ ಯಾವ ಆಹಾರ ಒಳ್ಳೆಯದಲ್ಲ ಮತ್ತು ಯಾಕೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸೋಯಾ ಉತ್ಪನ್ನಗಳು

ಥೈರಾಯ್ಡ್ ರೋಗಿಗಳು ಸೋಯಾ ಉತ್ಪನ್ನಗಳಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು. ಇದು ಹಲವಾರು ಅಧ್ಯಯನಗಳಿಂದಲೂ ಕೂಡ ಸಾಬೀತಾಗಿದೆ. ಇವುಗಳ ಸೇವನೆಯಿಂದ ಥೈರಾಯ್ಡ್ ಔಷಧಿಗಳು ಸರಿಯಾಗಿ ಕೆಲಸ ಮಾಡದಿರಬಹುದು ಹಾಗಾಗಿ ಇಂತಹ ಆಹಾರಗಳಿಂದ ದೂರವಿರಿ. ಸಾಮಾನ್ಯವಾಗಿ ಸೋಯಾಬೀನ್ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ಥೈರಾಯ್ಡ್ ಇರುವವರು ಇದರ ಸೇವನೆ ಮಾಡುವುದು ಒಳ್ಳೆಯದಲ್ಲ. ಹಾಗಾಗಿ ಸೋಯಾ ಉತ್ಪನಗಳಾದ ಹಾಲು ಮತ್ತು ಟೋಫುಗಳಿಂದ ದೂರವಿದ್ದಷ್ಟು ಒಳ್ಳೆಯದು.

ಎಲೆಕೋಸು ಮತ್ತು ಹೂಕೋಸು

ತರಕಾರಿಗಳೆಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಕೆಲವು ತರಕಾರಿಗಳನ್ನು ಥೈರಾಯ್ಡ್ ರೋಗಿಗಳು ಸೇವನೆ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ಅವುಗಳಲ್ಲಿ ಎಲೆಕೋಸು ಮತ್ತು ಹೂಕೋಸು ಪ್ರಮುಖವಾದದ್ದು. ಈ ತರಕಾರಿಗಳು ಥೈರಾಯ್ಡ್ ಔಷಧಿಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿರುವವರು ಎಲೆಕೋಸು ಮುಂತಾದ ತರಕಾರಿಗಳನ್ನು ತಪ್ಪಿಸುವುದೇ ಬಹಳ ಒಳ್ಳೆಯದು.

ಸಂಸ್ಕರಿಸಿದ ಆಹಾರಗಳು

ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರಗಳು ಥೈರಾಯ್ಡ್ ರೋಗಿಗಳ ತೂಕವನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ ದೈಹಿಕ ಸಮಸ್ಯೆಗಳನ್ನು ಕೂಡ ಉಲ್ಬಣಗೊಳಿಸುತ್ತವೆ. ಏಕೆಂದರೆ ಈ ರೀತಿಯ ಆಹಾರಗಳಲ್ಲಿ ಉಪ್ಪು ಮತ್ತು ಸಕ್ಕರೆ ಅಧಿಕವಾಗಿರುತ್ತದೆ. ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಈ ರೀತಿಯ ಆಹಾರಗಳಿಂದ ದೂರವಿರಿ.

ಸಿಹಿತಿಂಡಿ ಸೇವಿಸಬಾರದು

ಥೈರಾಯ್ಡ್ ಸಮಸ್ಯೆ ಇರುವವರು ಸಿಹಿತಿಂಡಿಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಮಾತ್ರವಲ್ಲ ಸಕ್ಕರೆಯನ್ನು ಕೂಡ ಮಿತವಾಗಿ ಸೇವಿಸಬೇಕು. ಇಲ್ಲವಾದಲ್ಲಿ ಥೈರಾಯ್ಡ್ ಸಮಸ್ಯೆಗಳಿರುವವರಿಗೆ ತಮ್ಮ ತೂಕವನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು. ಜೊತೆಗೆ ಇವುಗಳನ್ನು ತಿನ್ನುವುದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಸಿಹಿ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು.

ಕಾಫಿ ಸೇವನೆ ಒಳ್ಳೆಯದಲ್ಲ

ಥೈರಾಯ್ಡ್ ಸಮಸ್ಯೆ ಇರುವವರು ಸಾಮಾನ್ಯವಾಗಿ ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸಬಾರದು. ಜೊತೆಗೆ ಥೈರಾಯ್ಡ್ ಔಷಧಿ ತೆಗೆದುಕೊಳ್ಳುವ ಅರ್ಧ ಗಂಟೆ ಮೊದಲು ಮತ್ತು ನಂತರ ಕಾಫಿ ಸೇವಿಸಬಾರದು. ಈ ಸಂದರ್ಭಗಳಲ್ಲಿ ಕಾಫಿ ಕುಡಿಯುವುದರಿಂದ ಸಮಸ್ಯೆ ಉಲ್ಬಣಗೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *