ಶುಂಠಿ–ಈರುಳ್ಳಿ–ಬೆಳ್ಳುಳ್ಳಿ ಫ್ರಿಡ್ಜ್‌ನಲ್ಲಿ ಇಡ್ತೀರಾ?

ಶುಂಠಿ–ಈರುಳ್ಳಿ–ಬೆಳ್ಳುಳ್ಳಿ ಫ್ರಿಡ್ಜ್‌ನಲ್ಲಿ ಇಡ್ತೀರಾ?

ಹೀಗೆ ಮಾಡಿದ್ರೆ ಬೇಗ ಹಾಳಾಗುತ್ತೆ ಎಚ್ಚರ!

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ದೈನಂದಿನ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಸಹ ಈ ಮೂರು ವಸ್ತುಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಹಾಗಾಗಿ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಮಾರುಕಟ್ಟೆಯಿಂದ ತಂದು ಅನೇಕರು ಫ್ರಿಡ್ಜ್‌ನಲ್ಲಿ ಸ್ಟೋರ್‌ ಮಾಡಿ ಇಡುತ್ತಾರೆ. ಇತರೆ ತರಕಾರಿಯಂತೆ ಶುಂಠಿ, ಬೆಳ್ಳುಳ್ಳಿ ಮತ್ತು  ಈರುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದಂತೆ ಜೊತೆಗೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಯಾವುದೇ ಅವಶ್ಯಕತೆಯೂ ಇಲ್ಲ ಏಕೆಂದರೆ ಇವು ಮೂರು ಒಣ ಪದಾರ್ಥಗಳಾಗಿದ್ದು, ಅವು ಬಹಳ ಕಡಿಮೆ ನೀರನ್ನು ಹೊಂದಿರುತ್ತವೆ ಹಾಗಾಗಿ ಅವು ಬಹು ಬೇಗನೆ ಹಾಳಾಗುವುದಿಲ್ಲ.  ಹಾಗಾದ್ರೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿ.

ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ?

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ, ಫ್ರಿಡ್ಜ್‌ನ ತಂಪಾದ ಮತ್ತು ಆರ್ದ್ರ ಗಾಳಿಯು ಈ ಪದಾರ್ಥದೊಳಗೆ ತೇವಾಂಶವನ್ನು ಸೆಳೆಯುತ್ತದೆ. ಈ ವಸ್ತುಗಳು ತೇವಾಂಶಕ್ಕೆ ಒಡ್ಡಿಕೊಂಡಾಗ ಹೈಡ್ರೇಟ್ ಆಗಲು ಪ್ರಾರಂಭಿಸುತ್ತವೆ, ಇದು ಅವುಗಳ ಕೊಳೆಯುವಿಕೆಯನ್ನು ವೇಗಗೊಳಿಸುತ್ತದೆ. ಇದರ ಜೊತೆಗೆ, ರೆಫ್ರಿಜರೇಟರ್‌ನಲ್ಲಿರುವ ಆರ್ದ್ರ ಗಾಳಿಯು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಮಾಡಲು ಉತ್ತಮ ಜಗವಾಗಿದೆ. ಅದಕ್ಕಾಗಿಯೇ ಕೆಲವೊಮ್ಮೆ ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಬೇಗನೇ  ಹಾಳಾಗುತ್ತವೆ. ಬ್ಯಾಕ್ಟೀರಿಯಾ ಅಂಟಿಕೊಂಡ ಪದಾರ್ಥಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಲ್ಲ.

ಬೆಳ್ಳುಳ್ಳಿಶುಂಠಿ ಮತ್ತು ಈರುಳ್ಳಿಯನ್ನು ಎಲ್ಲಿ ಮತ್ತು ಹೇಗೆ ಸಂಗ್ರಹಿಸಬೇಕು?

ಈ ವಸ್ತುಗಳನ್ನು ತೆರೆದ, ಒಣ ಮತ್ತು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ. ಅವುಗಳನ್ನು ಬುಟ್ಟಿ ಅಥವಾ ಜಾಲರಿಯ ಪೆಟ್ಟಿಗೆಯಲ್ಲಿ ಇಡುವುದರಿಂದ, ಅವುಗಳಲ್ಲಿ ತೇವಾಂಶ ಸಂಗ್ರಹವಾಗುವುದಿಲ್ಲ ಮತ್ತು ಅವು ದೀರ್ಘಕಾಲ ಸುರಕ್ಷಿತವಾಗಿ ಉಳಿಯುತ್ತವೆ. ಹಾಗೆ ಮಾಡುವುದರಿಂದ, ಅವುಗಳ ಹಾಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಜೊತೆಗೆ ರುಚಿ ಮತ್ತು ಗುಣಮಟ್ಟ ಕೂಡ ಹಾಳಾಗುವುದಿಲ್ಲ.

ಈ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಯಾವುದೇ ವಿಷಕಾರಿ ರಾಸಾಯನಿಕಗಳು ಉತ್ಪತ್ತಿಯಾಗುವುದಿಲ್ಲ, ಆದರೆ ತಪ್ಪಾಗಿ ಸಂಗ್ರಹಿಸುವುದರಿಂದ ಅವು ಬೇಗನೆ ಹಾಳಾಗುವ ಅಪಾಯ ಹೆಚ್ಚು. ಆದ್ದರಿಂದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿಡುವುದು ಸೂಕ್ತ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *