ನಿಮಗೆ ಗೊತ್ತಾ ? ಈ ವಾಹನಗಳನ್ನು ಚಲಾಯಿಸಲು DL ಬೇಕಾಗಿಲ್ಲ..!

ಬೈಕ್ ಅಥವಾ ಕಾರು ಚಲಾಯಿಸುವಾಗ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿರುತ್ತದೆ. ನಿಮ್ಮ ಗಾಡಿಗೆ ಕೈ ಅಡ್ಡ ಹಾಕುವ ಟ್ರಾಫಿಕ್ ಪೊಲೀಸ್, ಡ್ರೈವಿಂಗ್ ಲೈಸೆನ್ಸ್ ನೀಡುವಂತೆ ಕೇಳ್ತಾರೆ. ನಿಮ್ಮ ಬಳಿ ದಾಖಲೆ ಇಲ್ಲ ಅಂದ್ರೆ ನೀವು ದಂಡ ವಿಧಿಸಬೇಕಾಗುತ್ತದೆ. ಆದ್ರೆ ನೀವು ಎಲ್ಲ ಸಮಯದಲ್ಲಿ ದಂಡ ಕಟ್ಟಬೇಕಾಗಿಲ್ಲ.

ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಹೋದ್ರೂ ನೀವು ಟ್ರಾಫಿಕ್ ಪೊಲೀಸ್ ಮುಂದಿನಿಂದ ಆರಾಮವಾಗಿ ಹೋಗ್ಬಹುದು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಮ್ಮ ದೇಶದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೆಲ ಎಲೆಕ್ಟ್ರಿಕ್ ಬೈಕ್ ಚಲಾಯಿಸಲು ಚಾಲನಾ ಪರವಾನಗಿ ಅಗತ್ಯವಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MORTH) ನಿಯಮಗಳ ಪ್ರಕಾರ ಗಂಟೆಗೆ 25 ಕಿಮೀ ವೇಗದ ಎಲೆಕ್ಟ್ರಿಕ್ ವಾಹನಗಳಿಗೆ ಚಾಲಕರ ಪರವಾನಗಿ ಅಥವಾ ನೋಂದಣಿ ಅಗತ್ಯವಿಲ್ಲ. ಚಿಕ್ಕ ಇವಿಗಳನ್ನು ಸಾಮಾನ್ಯವಾಗಿ ನಗರದ ಬಳಕೆಗಾಗಿ ಮತ್ತು ಕಡಿಮೆ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಈ ಇವಿ ಹೊಂದಿರುವವರು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಂಬರ್ ಪ್ಲೇಟ್ ಅಥವಾ ನೋಂದಣಿ ಪಡೆಯಬೇಕಾಗಿಲ್ಲ.

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲದ 50cc ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಮತ್ತು 25 km/h ಗಿಂತ ಹೆಚ್ಚಿನ ವೇಗವನ್ನು ಹೊಂದಿರುವ ಹಲವಾರು ದ್ವಿಚಕ್ರ ವಾಹನಗಳಿವೆ.

ಹೀರೋ ಎಲೆಕ್ಟ್ರಿಕ್ ಡ್ಯಾಶ್: ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 25 ಕಿಮೀ ವೇಗವನ್ನು ಹೊಂದಿದೆ ಮತ್ತು ಪೂರ್ಣ ಚಾರ್ಜ್ನಲ್ಲಿ 60 ಕಿಮೀ ವರೆಗೆ ಪ್ರಯಾಣಿಸಬಹುದು. ಇದು ರೋಮಾಂಚಕ ಕೆಂಪು ಬಣ್ಣದಲ್ಲಿ ಬರುತ್ತದೆ. ಇದರ ಬೆಲೆ 64,990 ರೂಪಾಯಿ.

ಒಕಿನಾವಾ R30 : ಇದು ಓಕಿನಾವಾದ ಅಗ್ಗದ ಸ್ಕೂಟರ್. ಇದು 61,998 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 25 ಕಿಮೀ / ಗಂ ವೇಗವನ್ನು ಹೊಂದಿದೆ.

ಹಿರೋ ಎಲೆಕ್ಟ್ರಿಕ್ ಫ್ಲಾಶ್ ಎಲ್ ಎಕ್ಸ್ : ಇದ್ರ ಬೆಲೆ 54,640 ರೂಪಾಯಿ. ಸ್ಕೂಟರ್ ಗರಿಷ್ಠ 25 ಕಿಮೀ / ಗಂ ವೇಗವನ್ನು ಹೊಂದಿದೆ. ಪೂರ್ಣ ಚಾರ್ಜ್ ನಂತ್ರ 85 ಕಿಮೀ ಪ್ರಯಾಣಿಸಬಹುದು.

ಈ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲದಿದ್ದರೂ, ಅಪಘಾತಗಳನ್ನು ತಪ್ಪಿಸಲು ಸಂಚಾರ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸವಾರರು ಪಾಲಿಸಬೇಕು. ಅಲ್ಲದೆ ಸ್ಥಳೀಯ ನಿಯಮಗಳನ್ನು ತಿಳಿದಿರಬೇಕು.

Leave a Reply

Your email address will not be published. Required fields are marked *