ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್ʼಗೆ ಹೋದರೆ ಏನಾಗುತ್ತದೆ ಗೊತ್ತಾ..?

ಈಗಿನ ಕಾಲದಲ್ಲಂತೂ ಹೆಚ್ಚಿನವರ ಮನೆಯಲ್ಲಿ ಗೀಸರ್ ಇದೆ. ಸ್ವಿಚ್ ಹಾಕಿದ್ರೆ ಸಾಕು ಸ್ನಾನ ಮಾಡಲು ಬಿಸಿ ಬಿಸಿ ನೀರು ಬಂದು ಬಿಡುತ್ತದೆ. ಚಳಿಗಾಲದಲ್ಲಂತೂ ಹೆಚ್ಚಿನವರು ಗೀಸರ್ನ್ನು ಬಳಸುತ್ತಾರೆ. ಗೀಸರ್ ಬಳಕೆ ಸುರಕ್ಷಿತವೆಂದು ಹೇಳಲಾಗುವುದರಿಂದ ಹೆಚ್ಚಿನವರು ಗೀಸರ್ ಬಳಸುವಾಗ ಸ್ವಲ್ಪ ಅಜಾಗರೂಕತೆಯಿಂದಿರುತ್ತಾರೆ.

ಆದರೆ ನಿಮಗೆ ಗೊತ್ತಾ ಗೀಸರ್ ಬಳಕೆಯಲ್ಲಿ ಅಜಾಗರೂಕತೆ ತೋರಿಸಿದರೆ ಗೀಸರ್ ಸ್ಫೋಟವಾಗುವ ಸಾಧ್ಯತೆಯೂ ಇದೆ. ಗೀಸರ್ ಸ್ಫೋಟ ಏಕೆ ಸಂಭವಿಸುತ್ತದೆ

ಗೀಸರ್ಗಳನ್ನು ದೀರ್ಘಕಾಲದವರೆಗೆ ಇರಿಸಿದರೆ, ಗೀಸರ್ ಬಿಸಿಯಾಗುತ್ತದೆ ಮತ್ತು ಇದರಿಂದಾಗಿ ಅದು ಸ್ಫೋಟಗೊಳ್ಳಬಹುದು. ನಮ್ಮಲ್ಲಿ ಹೆಚ್ಚಿನವರು ಗೀಸರ್ ಸ್ವಿಚ್ ಹಾಕಿ ಮರೆತುಬಿಟ್ಟಿರುತ್ತಾರೆ. ಇದರಿಂದ ಗೀಸರ್ ತುಂಬಾ ಬಿಸಿಯಾಗಿ ಅದರ ಬಾಯ್ಲರ್ ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಸೋರಿಕೆಯ ಸಮಸ್ಯೆ ಇರುತ್ತದೆ.

ಒತ್ತಡದ ಹೆಚ್ಚಳದಿಂದಾಗಿ ಗೀಸರ್ ಸ್ಫೋಟಗೊಳ್ಳಬಹುದು. ಬಾಯ್ಲರ್ ಸೋರಿಕೆ ಅಥವಾ ಸ್ಫೋಟಗೊಂಡರೆ, ವಿದ್ಯುತ್ ಆಘಾತದಿಂದ ಅವಘಡ ಸಂಭವಿಸಬಹುದು. ಉಪ್ಪು ನೀರು ಸರಬರಾಜು ಮಾಡುವ ಗೀಸರ್ಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಮರುಗಾತ್ರಗೊಳಿಸಬೇಕು, ಇಲ್ಲದಿದ್ದರೆ ಶಾರ್ಟ್ ಸರ್ಕ್ಯೂಟ್ನ ಹೆಚ್ಚಿನ ಅಪಾಯವಿದೆ.

ಹೆಚ್ಚಿನ ಗೀಸರ್ಗಳಲ್ಲಿ ಸ್ವಯಂಚಾಲಿತ ಶಾಖ ಸಂವೇದಕಗಳನ್ನು ಅಳವಡಿಸಲಾಗಿದೆ, ಸ್ವಯಂಚಾಲಿತ ಸಂವೇದಕಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೂ, ಗೀಸರ್ ಸಿಡಿಯುವ ಸಾಧ್ಯತೆ ಇರುತ್ತದೆ.

ವಿದ್ಯುತ್ ಬಳಕೆ ಹೆಚ್ಚಳ: ಗೀಸರ್ ಹೆಚ್ಚು ವಿದ್ಯುತ್ ಬಳಕೆ ಮಾಡುವ ಸಾಧನವಾಗಿದೆ. ಹೀಗಿರುವಾಗ ಇದನ್ನು ದೀರ್ಘಕಾಲ ಆನ್ ಇಟ್ಟರೆ, ಅದು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕರೆಂಟ್ ಬಿಲ್ ಕೂಡ ಅಧಿಕ ಬರುತ್ತದೆ.

ಅಧಿಕ ಬಿಸಿಯಾಗುವುದು: ಗೀಸರ್ ಅನ್ನು ಹೆಚ್ಚು ಗಂಟೆಗಳ ಕಾಲ ಇರಿಸಿದರೆ, ಅದು ಹೆಚ್ಚು ಬಿಸಿಯಾಗಬಹುದು ಮತ್ತು ಹಲವಾರು ಸಮಸ್ಯೆಗಳು ಕಾಣಿಸಬಹುದು. ಗೀಸರ್ ಅನ್ನು ಸದಾ ಕಾಲ ಆನ್ ಇಟ್ಟರೆ ಎಲ್ಲಾ ಸಮಯದಲ್ಲೂ ಬಿಸಿನೀರನ್ನು ಪಡೆಯಬಹುದು ನಿಜ. ಆದರೆ, ಇದು ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. ಜೊತೆಗೆ ಕೆಲ ಅಪಾಯ ಆಗುವುದು ಖಚಿತ. ಆದ್ದರಿಂದ ನಿಮಗೆ ಬಿಸಿ ನೀರು ಬೇಕು ಎಂದಾಗ ಮಾತ್ರ ಗೀಸರ್ ಅನ್ನು ಆಣ್ ಮಾಡಿ, ಅದು ಬಿಸಿ ಆದ ಬಳಿಕ ಆಫ್ ಮಾಡಲು ಮರೆಯಬೇಡಿ.

Leave a Reply

Your email address will not be published. Required fields are marked *