ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಇನ್ನು ಈ ವಿಚಾರವಾಗಿ ದರ್ಶನ್ ಪರ-ವಿರೋಧದ ಚರ್ಚೆಗಳು ಕೂಡ ಜೋರಾಗಿ ನಡೆಯುತ್ತಿವೆ. ಇದೀಗ ಕುಮಾರ್ ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ನನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಬಲವಾದ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಮುಂದಾಗಿದ್ದಾರೆ. ಇನ್ನು ಕೆಲವರು ದರ್ಶನ್ ಪರ, ಇನ್ನು ಕೆಲವರು ವಿರೋಧವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಕುಮಾರ್ ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿ ಶಾಕಿಂಗ್ ಹೇಳಿಕೆಯೊದನ್ನು ನೀಡಿದ್ದಾರೆ.ರಾಜ್ಯದಲ್ಲಿ ಇಂತಹ ಘಟನೆ ನಡೆಯಲೇಬಾರದಿತ್ತು, ಆದರೆ ನಡೆದುಬಿಟ್ಟಿದೆ. ಚಿತ್ರರಂಗದಲ್ಲಿ ಹೊಗಳುವುದರ ಜೊತೆ ತೆಗಳುವ ಸನ್ನಿವೇಶಗಳು ಇರುತ್ತದೆ ಎಂದು ನಟ ಕುಮಾರ್ ಬಂಗಾರಪ್ಪ ಹೇಳಿದರು. ಅಲ್ಲದೆ, ರೇಣುಕಾಸ್ವಾಮಿ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಹೇಳಿದರು.
ದರ್ಶನ್ ಜೈಲು ಸೇರಿರುವು ಸಾಮಾನ್ಯವಾಗಿ ಅಭಿಮಾನಿಗಳ ಮೇಲೆ ಮೇಲೆ ಪ್ರಭಾವ ಬೀರುತ್ತದೆ. ಅನೇಕರಿಗೆ ರೋಲ್ ಮಾಡೆಲ್ ಆದಗಿದ್ದವರು ಈ ರೀತಿ ಮಾಡಿದಾಗ ಪರಿಣಾಮ ಬೀರೋದು ಸಾಮಾನ್ಯವಾಗಿದೆ ಎಂದು ಎಂದರು. “ಅಪ್ಪಾಜಿ, ಡಾ.ರಾಜ್ಕುಮಾರ್ ಅವರು ಅಭಿಮಾನಿಗಳೇ ನಮ್ಮ ಪಾಲಿಗೆ ದೇವರು ಅಂತಾ ಹೇಳಿದ್ದರು. ಅಭಿಮಾನಿಗಳೇ ದೇವ್ರು ಎಂದು ಕರೆಸಿಕೊಂಡ ನಮ್ಮ ರಾಜ್ಯದಲ್ಲಿ ಈ ಘಟನೆ ನಡೆಯಬಾರದಿತ್ತು,” ಎಂದರು.
ಇನ್ನು ಡಾ.ರಾಜ್ಕುಮಾರ್ ನಮಗೆಲ್ಲಾ ರೋಲ್ ಮಾಡೆಲ್ ಆಗಿದ್ದಾರೆ. ನಟರಲ್ಲಿ ಸರಳತೆ ಇರಬೇಕು, ಯಾರಿಗೂ ನೋವಾಗದಂತೆ ಬದುಕಬೇಕು. ಅಣ್ಣಾವ್ರು, ಅಂಬರೀಷ್, ವಿಷ್ಣು ವರ್ಧನ್ ಅವರಲ್ಲಿ ಅಂತಹ ಗುಣಗಳು ಇದ್ದವು ಎಂದು ಕುಮಾರ್ ಬಂಗಾರಪ್ಪ ಹೇಳಿದ್ದರು.
ಇದೀಗ ಈ ಪ್ರಕರಣ ಕೋರ್ಟ್ನಲ್ಲಿದ್ದು, ಈ ಬಗ್ಗೆ ಮಾತಾಡುವುದು ಅಷ್ಟು ಸರಿಯಲ್ಲ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ತನಿಖೆ ನಡೆಯುತ್ತಿದೆ. ನ್ಯಾಯಾಲಯ ಇದೆ, ಕಾನೂನಿದೆ ಎಲ್ಲಾವನ್ನು ನೋಡಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಯಾರಿಗೇ ನೋವಾದರೂ ಕುಟುಂಬದ ಎಲ್ಲಾರಿಗೂ ನೋವಾಗುತ್ತದೆ. ಈ ಘಟನೆ ದರ್ಶನ್ ಅವರಿಂದಲೇ ಆಗಿದ್ದರೆ, ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ದೇವರು ಇದ್ದಾನೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟು, ಅನ್ಯಾಯ ಆದವರಿಗೆ ನ್ಯಾಯ ಕೊಡಿಸುತ್ತಾನೆ. ನಾನು ಸಹ ದರ್ಶನ್ ಜೊತೆ ಒಂದು ಸಿನಿಮಾ ಮಾಡಿದ್ದೀನಿ. ಒಂದು ತಿಂಗಳ ದರ್ಶನ್ ಜೊತೆ ಕೆಲಸ ಮಾಡಿದೆ. ದರ್ಶನ್ಗೆ ಅವರದ್ದೇ ಆದಂತಹ ಆಯಟಿಟ್ಯೂಡ್ ಇದೆ. ದರ್ಶನ್ ತನ್ನದೇ ಶ್ರಮದಿಂದ ಬೆಳೆದು ಸ್ಟಾರ್ ಆದವರು ಎಂದು ಹೇಳಿದರು.